ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

Indian Premier League 2025 | ಐಪಿಎಲ್‌ಗೆ ಹದಿನೆಂಟು: ನಿರೀಕ್ಷೆ ನೂರೆಂಟು

Published : 21 ಮಾರ್ಚ್ 2025, 22:46 IST
Last Updated : 21 ಮಾರ್ಚ್ 2025, 22:46 IST
ಫಾಲೋ ಮಾಡಿ
Comments
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಈಗ 18ರ ಹುಮ್ಮಸ್ಸು. 43 ವರ್ಷ ವಯಸ್ಸಿನ ಮಹೇಂದ್ರಸಿಂಗ್ ಧೋನಿ ಮತ್ತು 13 ವರ್ಷ ವಯಸ್ಸಿನ ವೈಭವ ಸೂರ್ಯವಂಶಿ ಅವರಿಬ್ಬರೂ ಕಾಣಿಸಿಕೊಳ್ಳಲಿರುವ ಟೂರ್ನಿ ಇದು. ಶನಿವಾರದಿಂದ ಮೇ 25ರವರೆಗೆ ಈ ಕ್ರಿಕೆಟ್ ಉತ್ಸವ ನಡೆಯಲಿದ್ದು, 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಹೊಸ ನಿಯಮಗಳು ರೋಚಕತೆ ಹೆಚ್ಚಿಸುವ ನಿರೀಕ್ಷೆ ಇದೆ. ಹೊಸ ಪ್ರತಿಭೆಗಳು ತಮ್ಮ ಸಾಮರ್ಥ್ಯ ಮೆರೆಯಲು ಕಾದಿವೆ. ಹಳೆಯ ಹುಲಿಗಳು ಮತ್ತೊಮ್ಮೆ ಗರ್ಜಿಸಲು ಹಾತೊರೆದಿವೆ. ಝಗಮಗಿಸುವ ಟೂರ್ನಿಯಲ್ಲಿ ಮತ್ತಷ್ಟು ಹೊಸ ದಾಖಲೆಗಳು ಒಡಮೂಡುವ ನಿರೀಕ್ಷೆಯೂ ಗರಿಗೆದರಿದೆ.
ಮಳೆಯಿಂದ ಪ್ರಾಕ್ಟೀಸ್‌ ಮೊಟಕು
ಕೋಲ್ಕತ್ತ : ಈಡನ್‌ ಗಾರ್ಡನ್‌ನಲ್ಲಿ ಐಪಿಎಲ್‌ ಉದ್ಘಾಟನಾ ಪಂದ್ಯದ ಮುನ್ನಾದಿನ ಕೋಲ್ಕತ್ತ ನೈಟ್‌ ರೈಡರ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್ ತಂಡಗಳ ತಾಲೀಮನ್ನು ಶುಕ್ರವಾರ ಸಂಜೆ ತುಂತುರು ಮಳೆಯ ಕಾರಣ ನಿಗದಿಗಿಂತ ಮೊದಲೇ ಮೊಟಕುಗೊಳಿಸಬೇಕಾಯಿತು. ಸಂಜೆ 5 ಗಂಟೆಗೆ ತಂಡಗಳು ನೆಟ್ಸ್‌ನಲ್ಲಿ ತೊಡಗಿದ್ದವು. ಆದರೆ ಒಂದು ಗಂಟೆಯ ಬಳಿಕ ಮಳೆ ಶುರುವಾಯಿತು. ಆಟಗಾರರು ಕಿಟ್‌ಗಳೊಡನೆ ಮೈದಾನದಿಂದ ನಿರ್ಗಮಿಸಿದರು. ಶುಕ್ರವಾರ ಮತ್ತು ಶನಿವಾರ ಕೋಲ್ಕತ್ತ ಸೇರಿದಂತೆ ಪಶ್ಚಿಮ ಬಂಗಾಳದ ಅನೇಕ ಜಿಲ್ಲೆಗಳಲ್ಲಿ ಗಾಳಿ, ಗುಡುಗುಸಹಿತ ಮಳೆಯಾಗಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT