ಮಂಗಳವಾರ, ಮಾರ್ಚ್ 21, 2023
31 °C

ಮಹಿಳಾ ಕ್ರಿಕೆಟ್‌ ತಂಡಕ್ಕೆ ಫೀಲ್ಡಿಂಗ್ ಕೋಚ್ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಭಾರತ ಮಹಿಳಾ ಕ್ರಿಕೆಟ್ ತಂಡದ ಫೀಲ್ಡಿಂಗ್ ಕೋಚ್ ಅಭಯ್ ಶರ್ಮಾ ಮತ್ತು ಟ್ರೇನರ್ ನರೇಶ್ ರಾಮದಾಸ್ ಅವರನ್ನು ಕೈಬಿಟ್ಟು, ಬೇರೆಯವರನ್ನು ನೇಮಕ ಮಾಡುವ ಸಾಧ್ಯತೆ ಇದೆ.

ಈಚೆಗೆ ಇಂಗ್ಲೆಂಡ್ ಪ್ರವಾಸ ಮಾಡಿದ್ದ ಭಾರತ ಮಹಿಳಾ ತಂಡವು ಉತ್ತಮ ಫೀಲ್ಡಿಂಗ್ ಮಾಡಿ ಗಮನ ಸೆಳೆದಿತ್ತು. ಅದರ ಹಿಂದೆ ಶರ್ಮಾ ಮಾರ್ಗದರ್ಶನ ಇತ್ತು. ಆದರೆ, ಬೆಂಗಳೂರಿನಲ್ಲಿ ಅಭ್ಯಾಸ ನಡೆಸಲು ಬಂದಿರುವ ಮಹಿಳಾ ತಂಡದ ಬಯೋಬಬಲ್‌ (ಜೀವಸುರಕ್ಷಾ ವಲಯ) ಗೆ ಶರ್ಮಾ ಮತ್ತು ನರೇಶ್ ಅವರು ಪ್ರವೇಶ ಪಡೆದಿಲ್ಲ. ಇದರಿಂದಾಗಿ ಅವರನ್ನು ತಂಡದಿಂದ ಕೈಬಿಡುವುದು ಬಹುತೇಕ ಖಚಿತವಾಗಿದೆ.

ಬ್ಯಾಟಿಂಗ್ ಕೋಚ್ ಎಸ್.ಎಸ್. ದಾಸ್ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಮುಖ್ಯ ಕೋಚ್ ರಮೇಶ್ ಪೊವಾರ್ ಅವರೇ ಬೌಲಿಂಗ್ ಕೋಚ್  ಆಗಿದ್ದಾರೆ.

‘ನೂತನ ಫೀಲ್ಡಿಂಗ್ ಕೋಚ್ ಮತ್ತು ಟ್ರೇನರ್‌ ಹೆಸರುಗಳನ್ನು ಶೀಘ್ರದಲ್ಲಿಯೇ ನೀಡಲಾಗುವುದು’ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂಗ್ಲೆಂಡ್ ಪ್ರವಾಸವೂ ಸೇರಿದಂತೆ ಶರ್ಮಾ ಅವರು ಎರಡು ಸರಣಿಗಳಲ್ಲಿ ಮಹಿಳಾ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನೆರವು ಸಿಬ್ಬಂದಿಯೂ ಆಗಿದ್ದಾರೆ. 

ಶರ್ಮಾ ಕಾರ್ಯವೈಖರಿಯ ಕುರಿತು ಇಂಗ್ಲೆಂಡ್‌ನಲ್ಲಿ ಟಿ20 ಸರಣಿ ಸಂದರ್ಭದಲ್ಲಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಶ್ಲಾಘಿಸಿದ್ದರು. 

ಪಂದ್ಯವೊಂದರಲ್ಲಿ ಹರ್ಲಿನ್ ಡಿಯೊಲ್ ಪಡೆದ ಆಕರ್ಷಕ ಕ್ಯಾಚ್‌ ನಂತರ ಟೆಸ್ಟ್‌ ಮತ್ತು ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಕೂಡ ಫೀಲ್ಡಿಂಗ್ ಕೋಚ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದೀಗ ಅವರು ತಂಡದಲ್ಲಿ ಸ್ಥಾನ ಪಡೆಯದಿರುವುದು ಅಚ್ಚರಿ ಮೂಡಿಸಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು