ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಅವರು 'ದಿ ಒನ್: ಕ್ರಿಕೆಟ್, ನನ್ನ ಬದುಕು ಮತ್ತು ಇನ್ನಷ್ಟು' (The One: Cricket, My Life and More) ಎಂಬ ಆತ್ಮಚರಿತ್ರೆ ಬರೆದಿದ್ದು, ವೃತ್ತಿ ಹಾಗೂ ವೈಯಕ್ತಿಕ ಜೀವನದ ಕುರಿತು ಅದರಲ್ಲಿ ಉಲ್ಲೇಖಿಸಿದ್ದಾರೆ.

ಪುಸ್ತಕದ ಕುರಿತು ಮಾತನಾಡಿರುವ ಧವನ್, 'ಕ್ರಿಕೆಟ್ ನನಗೊಂದು ಉದ್ದೇಶವನ್ನು ನೀಡಿತ್ತು. ಅದಕ್ಕಾಗಿನ ಪಯಣದಲ್ಲಿ ಎದುರಾದ ಏಳು ಬೀಳು, ಸುಂದರ ಕ್ಷಣಗಳು ನಿಜವಾಗಿಯೂ ನನ್ನನ್ನು ಇಂದು ಮನುಷ್ಯನನ್ನಾಗಿ ರೂಪಿಸಿವೆ. ಈ ಪಯಣದ ಕುರಿತು ಸಹಜವಾಗಿ, ಪ್ರಮಾಣಿಕವಾಗಿ ಮತ್ತು ಇದ್ದಹಾಗೆಯೇ ಪ್ರೀತಿಯಿಂದ ಹಂಚಿಕೊಳ್ಳುತ್ತಿದ್ದೇನೆ' ಎಂದು ಹೇಳಿದ್ದಾರೆ.

'ನಿಷ್ಪಕ್ಷಪಾತವಾಗಿ ಮತ್ತು ಪ್ರಾಮಾಣಿಕವಾಗಿ ಬರೆಯಲಾಗಿರುವ 'ದಿ ಒನ್', ಶಿಖರ್ ಧವನ್ ಅವರ ಸ್ವಗತವಾಗಿದೆ. ಅವರನ್ನು ಚಾಂಪಿಯನ್ ಕ್ರಿಕೆಟಿಗನನ್ನಾಗಿಸಿದ ಹಾಗೂ ಸೂಕ್ಷ್ಮ ವ್ಯಕ್ತಿಯನ್ನಾಗಿ ರೂಪಿಸಿದ ಎಲ್ಲ ಅಂಶಗಳ ಮೇಲೆ ಅಭೂತಪೂರ್ವ ಚಿತ್ರಣವನ್ನು ನೀಡುತ್ತದೆ' ಎಂದು ಪ್ರಕಾಶನ ಸಂಸ್ಥೆ 'ಹಾರ್ಪರ್ಕಾಲಿನ್ಸ್ ಇಂಡಿಯಾ' ಹೇಳಿದೆ.

'ಶಿಖರ್ ಧವನ್ ಅವರು ಮೈದಾನದ ಒಳಗೆ ಮತ್ತು ಹೊರಗೆ ಅದ್ಭುತವಾದ ಜೀವನ ನಡೆಸಿದ್ದಾರೆ. ಈ ಆತ್ಮಚರಿತ್ರೆಯಲ್ಲಿ ತಮ್ಮ ಬದುಕು, ಕ್ರಿಕೆಟ್, ಸಂಬಂಧಗಳು ಮತ್ತು ಪ್ರತಿಯೊಂದು ಸವಾಲುಗಳ ಬಗ್ಗೆ ತೆರೆದಿಟ್ಟಿದ್ದಾರೆ' ಎಂದು ಪ್ರಕಾಶನ ಸಂಸ್ಥೆಯ ಸಚಿನ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾ ಪರ 34 ಟೆಸ್ಟ್, 167 ಏಕದಿನ ಹಾಗೂ 68 ಟಿ20 ಪಂದ್ಯಗಳಲ್ಲಿ ಆಡಿರುವ ಧವನ್, ಕ್ರಮವಾಗಿ 2,315 ರನ್, 6,793 ರನ್ ಹಾಗೂ 1,759 ರನ್ ಗಳಿಸಿದ್ದಾರೆ.
.Sports Hernia: ಜರ್ಮನಿಯಲ್ಲಿ ಸೂರ್ಯಕುಮಾರ್ ಯಾದವ್ಗೆ ಯಶಸ್ವಿ ಶಸ್ತ್ರಚಿಕಿತ್ಸೆ.1983ರ ವಿಶ್ವಕಪ್ಗೆ 42 ವರ್ಷ: ಕನಸಿನ ಕಿಡಿ ಹೊತ್ತಿಸಿದ ಜಯದ ಬಗ್ಗೆ ಸಚಿನ್ ಟ್ವೀಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.