ವಿಜಯಶಂಕರ್‌ ವಿಶ್ವಕಪ್‌ನಿಂದ ಹೊರಕ್ಕೆ: ಮಯಾಂಕ್‌ ಅಗರ್ವಾಲ್‌ಗೆ ಅವಕಾಶ? 

ಗುರುವಾರ , ಜೂಲೈ 18, 2019
24 °C

ವಿಜಯಶಂಕರ್‌ ವಿಶ್ವಕಪ್‌ನಿಂದ ಹೊರಕ್ಕೆ: ಮಯಾಂಕ್‌ ಅಗರ್ವಾಲ್‌ಗೆ ಅವಕಾಶ? 

Published:
Updated:

ನವದೆಹಲಿ: ಗಾಯದ ಸಮಸ್ಯೆಯಿಂದಾಗಿ ಆಲ್‌ರೌಂಡರ್‌ ವಿಜಯ ಶಂಕರ್‌ ಅವರು ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ‘ಎಎನ್‌ಐ’ ಮೂಲಗಳ ಮಾಹಿತಿ ಉಲ್ಲೇಖಿಸಿ ವರದಿ ಮಾಡಿದೆ. 

ಅವರ ಸ್ಥಾನಕ್ಕೆ ಕರ್ನಾಟಕದ ಮಯಾಂಕ್‌ ಅಗರ್ವಾಲ್‌ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಮಯಾಂಕ್‌ ಅಗರ್ವಾಲ್‌ ಅವರು ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಟೆಸ್ಟ್ ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. 

ಜಸ್ಪ್ರಿತ್‌ ಬೂಮ್ರಾ ಅವರ ಎಸೆತ ಎದುರಿಸುವಾಗ ಕಾಲ್ಬೆರಳಿಗೆ ಆಗಿರುವ ಗಾಯದಿಂದಾಗಿ ಅವರು ಆಟವಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರು ತವರಿಗೆ ಮರಳುತ್ತಿದ್ದಾರೆ ಎಂದು ಬಿಸಿಸಿಐನ ಅಧಿಕಾರಿಗಳು ತಿಳಿಸಿರುವುದಾಗಿ ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿದೆ.  

ಬರಹ ಇಷ್ಟವಾಯಿತೆ?

 • 12

  Happy
 • 3

  Amused
 • 3

  Sad
 • 1

  Frustrated
 • 1

  Angry

Comments:

0 comments

Write the first review for this !