ಭಾನುವಾರ, ಆಗಸ್ಟ್ 1, 2021
21 °C

IPL 2021: ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಶೇ 15 ಷೇರು ಖರೀದಿಸಿದ ರೆಡ್‌ಬರ್ಡ್

ಪಿಟಿಐ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಹೂಡಿಕೆ ಸಂಸ್ಥೆ ರೆಡ್‌ಬರ್ಡ್ ಕ್ಯಾಪಿಟಲ್ ಪಾರ್ಟ್‌ನರ್ಸ್, ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಶೇ 15 ಷೇರು ಖರೀದಿಸಿದೆ.

ರೆಡ್‌ಬರ್ಡ್, ಪ್ರಸಿದ್ಧ ಫುಟ್ಬಾಲ್ ಕ್ಲಬ್ ಲಿವರ್‌ಪೂಲ್‌ ಮತ್ತು ಬೇಸ್‌ಬಾಲ್ ಟೀಮ್ ಬಾಸ್ಟನ್ ರೆಡ್ ಸಾಕ್ಸ್ ತಂಡದಲ್ಲಿ ಕೂಡ ಹೂಡಿಕೆ ಮಾಡಿದೆ.

ಐಪಿಎಲ್ ತಂಡ ರಾಜಸ್ಥಾನ್ ರಾಯಲ್ಸ್‌ನಲ್ಲಿ ರೆಡ್‌ಬರ್ಡ್ ಹೂಡಿಕೆಯ ಮೊತ್ತ ಎಷ್ಟೆಂದು ಬಹಿರಂಗವಾಗಿಲ್ಲ.

ಮನೋಜ್ ಬಾದಲೆ ಒಡೆತನದ ಎಮರ್ಜಿಂಗ್ ಮೀಡಿಯಾ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಹೆಚ್ಚಿನ ಷೇರು ಪಾಲು ಹೊಂದಿದೆ.

ಹೊಸ ಹೂಡಿಕೆ ಕುರಿತಂತೆ ರಾಜಸ್ಥಾನ್ ರಾಯಲ್ಸ್ ತಂಡದ ವೆಬ್‌ಸೈಟ್‌ನಲ್ಲಿ ವಿವರ ನೀಡಲಾಗಿದ್ದು, ರೆಡ್‌ಬರ್ಡ್ ಹೂಡಿಕೆ ಶೇ 15 ಇದ್ದರೆ, ಎಮರ್ಜಿಂಗ್ ಮೀಡಿಯಾ ಪಾಲು ಶೇ 51ರಿಂದ ಶೇ 65ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.

ಐಪಿಎಲ್ ಪ್ರಾಂಚೈಸಿ ನಿಯಮಗಳಿಗನುಸಾರ ಹೂಡಿಕೆ ನಡೆಸಲಾಗಿದೆ ಎಂದು ತಂಡ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು