ಕೋಸ್ಟಾ ನವರಿನೊ, ಗ್ರೀಸ್: ಲಾಸ್ ಏಂಜಲಿಸ್ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ ಕೂಟದಲ್ಲಿ ಬಾಕ್ಸಿಂಗ್ ಸೇರ್ಪಡೆ ಮಾಡಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅನುಮೋದನೆ ನೀಡಿದೆ.

ಇಲ್ಲಿ ನಡೆದ ಐಒಸಿಯ 144ನೇ ಆಡಳಿತ ಸಮಿತಿ ಸಮ್ಮೇಳನದಲ್ಲಿ ಬಾಕ್ಸಿಂಗ್ ಸೇರ್ಪಡೆಗೆ ಸರ್ವಾನುಮತ ಲಭಿಸಿತು. ಅಧ್ಯಕ್ಷ ಥಾಮಸ್ ಬಾಕ್ ಅವರು, ಬಾಕ್ಸಿಂಗ್ ಕ್ರೀಡೆಯನ್ನು ಒಲಿಂಪಿಕ್ಸ್ನಲ್ಲಿ ಸೇರ್ಪಡೆ ಮಾಡುವ ಪರವಾಗಿರುವ ಸದಸ್ಯರು ಕೈಎತ್ತಿ ಅನುಮೋದನೆ ನೀಡುವಂತೆ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಎಲ್ಲ ಸದಸ್ಯರೂ ಮತ ಚಲಾಯಿಸಿದರು. ಯಾರೊಬ್ಬರೂ ವಿರುದ್ಧ ಮತ ಹಾಕಲಿಲ್ಲ.

‘ಒಲಿಂಪಿಕ್ಸ್ನಲ್ಲಿ ಬಾಕ್ಸಿಂಗ್ ಸ್ಪರ್ಧೆಯ ಅಮೋಘ ಪ್ರದರ್ಶನವನ್ನು ಕಣ್ತುಂಬಿಕೊಳ್ಳೋಣ. ಎಲ್ಲರಿಗೂ ಧನ್ಯವಾದಗಳು‘ ಎಂದು ಥಾಮಸ್ ಬಾಕ್ ಹೇಳಿದರು.

ಫೆಬ್ರುವರಿ 2022ರಲ್ಲಿ ಸಿದ್ಧಪಡಿಸಲಾಗಿದ್ದ ಕ್ರೀಡೆಗಳ ಪಟ್ಟಿಯಲ್ಲಿ ಬಾಕ್ಸಿಂಗ್ ಸೇರ್ಪಡೆಯಾಗಿರಲಿಲ್ಲ. ಆಗ ಐಬಿಎ (ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ)ಯ ಆಡಳಿತ ಸಮಿತಿಯಲ್ಲಿ ಹಣ ದುರ್ಬಳಕೆ ಮತ್ತಿತರ ವಿಷಯಗಳು ಕುರಿತು ವಿವಾದ ನಡೆದಿತ್ತು. ಅದರಿಂದಾಗಿ ಐಬಿಎಯನ್ನು ಐಒಸಿ ಅಮಾನತ್ತು ಮಾಡಿದ್ದರು.

2020ರ ಟೋಕಿಯೊ ಮತ್ತು 2024ರಲ್ಲಿ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಐಒಸಿಯ ವಿಶೇಷ ಕಾರ್ಯಪಡೆಯು ಬಾಕ್ಸಿಂಗ್ ಸ್ಪರ್ಧೆಗಳ ಉಸ್ತುವಾರಿ ವಹಿಸಿತ್ತು. ನಂತರದ ಬೆಳವಣಿಗೆಯಲ್ಲಿ ಹೊಸ ಫೆಡರೇಷನ್ ವಿಶ್ವ ಬಾಕ್ಸಿಂಗ್ (ಡಬ್ಲ್ಯುಬಿ) ರಚನೆಯಾಗಿತ್ತು. ಇದರಡಿಯಲ್ಲಿ 80 ರಾಷ್ಟ್ರೀಯ ಫೆಡರೇಷನ್ಗಳಿವೆ.

‘ನೂತನ ಸಂಘಟನೆ ವಿಶ್ವ ಬಾಕ್ಸಿಂಗ್ (ಡಬ್ಲ್ಯುಎ) ಅನ್ನು ಅಭಿನಂದಿಸುತ್ತೇನೆ’ ಎಂದು ಬಾಕ್ ಈ ಸಂದರ್ಭದಲ್ಲಿ ಹೇಳಿದರು.
.ಐಪಿಎಲ್ನಲ್ಲಿ ಹೆಚ್ಚು ರನ್: ಕೊಹ್ಲಿ ಟಾಪರ್; ಅಗ್ರ ಹತ್ತರ ಪಟ್ಟಿಯಲ್ಲಿ ಇನ್ಯಾರು?.IPL 2025: ಸತತ 12 ವರ್ಷಗಳಿಂದ ಮೊದಲ ಪಂದ್ಯದಲ್ಲಿ ಗೆದ್ದೇ ಇಲ್ಲ ಮುಂಬೈ ಇಂಡಿಯನ್ಸ್.IPL | ಡೆತ್ ಓವರ್ಗಳಲ್ಲಿ ಸ್ಫೋಟಕ ಆಟ; ಅಗ್ರ ಐವರ ಪಟ್ಟಿಯಲ್ಲಿ ಭಾರತೀಯರು ಇಬ್ಬರೇ!.IPL 2025 | ಮುಂಬೈಯಲ್ಲಿ ಎಲ್ಲ 10 ತಂಡಗಳ ನಾಯಕರ ಮಿಲನ; ಫೋಟೊಗೆ ಪೋಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.