ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌–2020: ಮೊದಲ ವಾರದ ವೀಕ್ಷಕರ ಸಂಖ್ಯೆ ಶೇ.15ರಷ್ಟು ಹೆಚ್ಚಳ

Last Updated 2 ಅಕ್ಟೋಬರ್ 2020, 13:07 IST
ಅಕ್ಷರ ಗಾತ್ರ

ಐಪಿಎಲ್‌ ಟೂರ್ನಿಯ ಮೊದಲ ವಾರದ ಅಂಕಿ-ಅಂಶಗಳನ್ನು ಗಮನಿಸಿದರೆ ಟಿವಿ ವೀಕ್ಷಕರ ಸಂಖ್ಯೆಯು ಕಳೆದ ವರ್ಷಕ್ಕಿಂತ ಶೇ.15 ರಷ್ಟು ಹೆಚ್ಚಾಗಿದೆ. ಜೊತೆಗೆ ಪ್ರತಿ ಪಂದ್ಯವನ್ನು ವೀಕ್ಷಿಸುವವರ ಸಂಖ್ಯೆಯಲ್ಲಿ ಶೇ.21ರಷ್ಟು ಏರಿಕೆಯಾಗಿದೆ ಎಂದು ಬಾರ್ಕ್‌ (ಬಿಎಆರ್‌ಸಿ) ತಿಳಿಸಿದೆ.

ಕೋವಿಡ್‌-19ನಿಂದಾಗಿ ಭಾರತದಲ್ಲಿ ಹೇರಲಾಗಿರುವ ಲಾಕ್‌ಡೌನ್‌ ವೀಕ್ಷಕರಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಮೊದಲ ವಾರದಲ್ಲಿ 26.9 ಕೋಟಿ ಜನರು ಐಪಿಎಲ್‌ ವೀಕ್ಷಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಪ್ರತಿ ಪಂದ್ಯವನ್ನು ಸುಮಾರು 1.1 ಕೋಟಿಯಷ್ಟು ಹೆಚ್ಚು ಜನರು ವೀಕ್ಷಿಸಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಆಡಿದ ಉದ್ಘಾಟನಾ ಪಂದ್ಯವನ್ನು (ಸೆಪ್ಟೆಂಬರ್‌ 9ರಂದು) ಸುಮಾರು 15.8 ಕೋಟಿ ಜನರು ವೀಕ್ಷಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಉದ್ಘಾಟನಾ ಪಂದ್ಯದ ವೀಕ್ಷಕರಸಂಖ್ಯೆ ಶೇ. 21 ರಷ್ಟು ಹೆಚ್ಚಾಗಿದೆ. ಉದ್ಘಾಟನಾ ಪಂದ್ಯದ ವೀಕ್ಷಣೆ ಅವಧಿ 1,102 ಕೋಟಿ ನಿಮಿಷಗಳಿಗೆ ಏರಿದೆ. ಈ ಪ್ರಮಾಣವು ಕಳೆದ ವರ್ಷ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಆಡಿದ್ದ ಉದ್ಘಾಟನಾ ಪಂದ್ಯದ ವೀಕ್ಷಣೆಗಿಂತ ಶೇ.65 ರಷ್ಟು ಹೆಚ್ಚು ಎನ್ನಲಾಗಿದೆ.

ಹಾಟ್‌ಸ್ಟಾರ್‌ನಂತಹ ಡಿಜಿಟಲ್‌ ವೇದಿಕೆಗಳ ಅಂಕಿ–ಅಂಶ ಸದ್ಯಕ್ಕೆ ಲಭ್ಯವಿಲ್ಲ. ಆದರೆ, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ಈ ಬಾರಿಯ ಉದ್ಘಾಟನಾ ಪಂದ್ಯವನ್ನು ಟಿವಿ ಮತ್ತು ಡಿಜಿಟಲ್‌ ವೇದಿಕೆಗಳಲ್ಲಿ ಒಟ್ಟು 20 ಕೋಟಿ ಜನರು ವೀಕ್ಷಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಮೊದಲ ವಾರದ ವೀಕ್ಷಣೆ ಸಮಯ
ಐಪಿಎಲ್‌–2020 - 6,060 ಕೋಟಿನಿಮಿಷ
ಐಪಿಎಲ್‌–2019 - 5,280 ಕೋಟಿ ನಿಮಿಷ
ಐಪಿಎಲ್‌–2018 - 4,270 ಕೋಟಿ ನಿಮಿಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT