ಶುಕ್ರವಾರ, ಸೆಪ್ಟೆಂಬರ್ 17, 2021
23 °C

IPL-2020 | ಎಲ್ಲಾ ನಾಯಕರು ಬಯಸುವ ಬೌಲರ್ ರಶೀದ್ ಖಾನ್‌: ಸುನೀಲ್‌ ಗಾವಸ್ಕರ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಪ್ರಮುಖ ಬೌಲರ್‌ ರಶೀದ್‌ ಖಾನ್‌ ಅವರು ‘ಎಲ್ಲ ನಾಯಕರು ಬಯಸುವ ಆಟಗಾರ’ ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್‌ ಮೆಚ್ಚುಗೆ ಸೂಚಿಸಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡಗಳು ಗುರುವಾರ ಆಡಿದ ಪಂದ್ಯದ ಬಳಿಕ ಮಾತನಾಡಿರುವ ಗಾವಸ್ಕರ್‌, ‘ನೀವು ನಿಮ್ಮ ತಂಡದಲ್ಲಿರಬೇಕು ಎಂದು ಬಯಸುವ ಒಬ್ಬ ಬೌಲರ್‌ ಯಾರು ಎಂದು ಎಲ್ಲ ಪ್ರಾಂಚೈಸ್‌ಗಳ ನಾಯಕರನ್ನು ಕೇಳಿ. ಅವರೆಲ್ಲರೂ ರಶೀದ್‌ ಖಾನ್‌ ಅವರನ್ನು ಕೊಡಿ ಎಂದು ಕೇಳುತ್ತಾರೆ ಎಂದು ಖಚಿತವಾಗಿ ಹೇಳುತ್ತೇನೆ’ ಎಂದಿದ್ದಾರೆ.

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ರೈಸರ್ಸ್‌ 6 ವಿಕೆಟ್‌ ಕಳೆದುಕೊಂಡು 201 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಕಿಂಗ್ಸ್‌ ಕೇವಲ 132 ರನ್‌ ಗಳಿಗೆ ಆಲೌಟ್‌ ಆಗಿತ್ತು. ಈ ಜಯದೊಂದಿಗೆ ಸನ್‌ರೈಸರ್ಸ್ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಅಫ್ಗಾನಿಸ್ತಾನದ ರಶೀದ್‌, 4 ಓವರ್‌ಗಳಲ್ಲಿ ಕೇವಲ 12 ರನ್ ನೀಡಿ 3 ವಿಕೆಟ್‌ ಕಬಳಿಸಿದ್ದರು.

ರಶೀದ್ ಪ್ರದರ್ಶನದ ಬಗ್ಗೆ ಗಾವಸ್ಕರ್, ‘ಅವರು ವಿಕೆಟ್‌ಗಳನ್ನು ಪಡೆಯುತ್ತಾರೆ. ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸದಂತೆ ಡಾಟ್‌ ಬಾಲ್‌ಗಳನ್ನು ಹಾಕುತ್ತಾರೆ. ಅವರ ಎಕಾನಮಿಯನ್ನು ನೋಡಿ. ನಾಲ್ಕು ಓವರ್‌ಗಳಲ್ಲಿ 12 ರನ್‌ ನೀಡಿ 3 ವಿಕೆಟ್ ಪಡೆದಿದ್ದಾರೆ. ಲೆಗ್‌ ಸ್ಪಿನ್ನರ್‌ಗಳು ಸಾಮಾನ್ಯವಾಗಿ ಫುಲ್‌ಟಾಸ್‌, ಶಾರ್ಟ್‌ ಬಾಲ್‌ಗಳನ್ನು ಎಸೆಯುತ್ತಾರೆ. ಆದರೆ, ರಶೀದ್‌ ಎಂದಿಗೂ ಹಾಗೆ ಮಾಡುವುದಿಲ್ಲ. ಪ್ರತಿಬಾರಿಯು ಒಂದು ನಿರ್ದಿಷ್ಟ ಗುರಿ ಹಾಕಿಕೊಂಡು ಬೌಲ‌್ ಮಾಡುತ್ತಾರೆ. ಸೊಗಸಾದ ಗೂಗ್ಲಿ ಪ್ರಯೋಗಿಸುತ್ತಾರೆ. ಸಾಕಷ್ಟು ಬ್ಯಾಟ್ಸ್‌ಮನ್‌ಗಳು ಅದನ್ನು ಎದುರಿಸಲು ಕಷ್ಟಪಡುತ್ತಾರೆ. ಯಾವುದೇ ನಾಯಕನೂ ‘ಆ ಬೌಲರ್‌ಅನ್ನು ಕೊಡಿ’ ಎನ್ನುವಂತಹ ಬೌಲಿಂಗ್‌ ಮತ್ತು ಆ ಬಗೆಯ ನಿಯಂತ್ರಣ ಅವರಲ್ಲಿದೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು