ಶುಕ್ರವಾರ, ಅಕ್ಟೋಬರ್ 23, 2020
28 °C

RR vs SRH: ರಾಯಲ್ಸ್‌ಗೆ ವಾರ್ನರ್ ಪಡೆ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

RR

ದುಬೈ: ಸತತ ಸೋಲುಗಳ ಸುಳಿಯಲ್ಲಿ ಸಿಲುಕಿರುವ  ರಾಜಸ್ಥಾನ ರಾಯಲ್ಸ್ ತಂಡವು ಭಾನುವಾರ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ.

ಇಂಗ್ಲೆಂಡ್‌ನ ಸ್ಟಾರ್‌ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ ಶನಿವಾರ ತಮ್ಮ ಕಡ್ಡಾಯ ಕ್ವಾರಂಟೈನ್ ಮುಗಿಸಿದ್ದಾರೆ. ಆದ್ದರಿಂದ ಅವರು ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಆದರೆ ತಂಡವು ಇನ್ನೂ ಖಚಿತಪಡಿಸಿಲ್ಲ.

ರಾಯಲ್ಸ್‌ ತಂಡವು ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು ನಂತರದ ನಾಲ್ಕರಲ್ಲಿ  ಸೋತಿದೆ.  ಆದರೆ ತನ್ನ ಆರಂಭದ ಪಂದ್ಯಗಳಲ್ಲಿ ಸೋತಿದ್ದ ಡೇವಿಡ್ ವಾರ್ನರ್ ನಾಯಕತ್ವದ ಸನ್‌ರೈಸರ್ಸ್‌, ನಂತರ ಗೆಲುವಿನ ರುಚಿ ನೋಡಿದೆ. ಆರು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಮೂರರಲ್ಲಿ ಸೋತಿದೆ.  ತಂಡದ ಬ್ಯಾಟಿಂಗ್ ಪಡೆ ಚೆನ್ನಾಗಿದೆ. ಆದರೆ ಭುವನೇಶ್ವರ್ ಕುಮಾರ್ ಇಲ್ಲದೇ ಬೌಲಿಂಗ್ ಪಡೆಯು ಸೊರಗಿದೆ.ರಾಜಸ್ಥಾನ ತಂಡದಲ್ಲಿರುವ ಬ್ಯಾಟ್ಸ್‌ಮನ್‌ಗಳು ಗರ್ಜಿಸುವುದನ್ನು ಮರೆತಿದ್ದಾರೆ. ಈ ಪಂದ್ಯದಲ್ಲಿಯೂ ಅವರು ತಮ್ಮ ಲಯಕ್ಕೆ ಮರಳದಿದ್ದರೆ ಮುಂದಿನ ಹಂತದಲ್ಲಿ ಒತ್ತಡ ಎದುರಿಸುವುದು ಖಚಿತ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು