ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಕೊರೊನಾ ಸೋಂಕಿನಿಂದ ಗುಣಮುಖ; ಡೆಲ್ಲಿ ಕ್ಯಾಂಪ್ ಸೇರಿದ ಅಕ್ಷರ್

Last Updated 23 ಏಪ್ರಿಲ್ 2021, 10:54 IST
ಅಕ್ಷರ ಗಾತ್ರ

ಮುಂಬೈ:ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಆಲ್‌ರೌಂಡರ್ ಅಕ್ಷರ್ ಪಟೇಲ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿದ್ದಾರೆ.

ಇದು ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಬಲವರ್ಧನೆಗೆ ನೆರವಾಗಲಿದೆ. ಎಡಗೈ ಆಫ್ ಸ್ಪಿನ್ ಬೌಲಿಂಗ್ ಹಾಗೂ ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಅಕ್ಷರ್ ಹೊಂದಿದ್ದಾರೆ.

27 ವರ್ಷದ ಅಕ್ಷರ್ ಪಟೇಲ್ ಮಾರ್ಚ್ 28ರಂದು ನೆಗೆಟಿವ್ ವರದಿಯೊಂದಿಗೆ ಮುಂಬೈ ತಲುಪಿದ್ದರು. ಬಳಿಕ ನಡೆಸಿದ್ದ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು.

ಸೌಮ್ಯ ಲಕ್ಷಣಗಳನ್ನು ಹೊಂದಿದ್ದ ಅಕ್ಷರ್ ಪಟೇಲ್ ಅವರಿಗೆ ಬಿಸಿಸಿಐ ವೈದ್ಯಕೀಯ ನೆರವು ಒದಗಿಸಿತ್ತು. ಈಗ ಮೂರು ವಾರಗಳ ಬಳಿಕ ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ತಂಡವನ್ನು ಸೇರಿದ್ದಾರೆ.

ಅಕ್ಷರ್ ಪಟೇಲ್ ಈಗ ಡೆಲ್ಲಿ ಕ್ಯಾಪಿಟಲ್ಸ್ ಬಯೋಬಬಲ್ ಸೇರಿರುವ ವಿಡಿಯೊವನ್ನು ಫ್ರಾಂಚೈಸಿಯು ಹಂಚಿಕೊಂಡಿದೆ. ಇಶಾಂತ್ ಶರ್ಮಾ ಸೇರಿದಂತೆ ಸಹ ಆಟಗಾರರೊಂದಿಗೆ ಅಕ್ಷರ್ ಪಟೇಲ್ ಬೆರೆತು ನಗೆ ಚಟಾಕಿ ಹಾರಿಸುವ ದೃಶ್ಯಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದೆ.

ಏತನ್ಮಧ್ಯೆ ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ದಾಖಲಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಒಟ್ಟು ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT