ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2021: ಸ್ಟೇಡಿಯಂನಲ್ಲೇ ಪ್ರೇಯಸಿಗೆ ಪ್ರಪೋಸ್ ಮಾಡಿದ ದೀಪಕ್ ಚಾಹರ್

Last Updated 7 ಅಕ್ಟೋಬರ್ 2021, 15:22 IST
ಅಕ್ಷರ ಗಾತ್ರ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ದೀಪಕ್ ಚಾಹರ್, ತಮ್ಮ ಪ್ರೇಯಸಿಗೆ ಪ್ರಪೋಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಪಂದ್ಯದ ಬಳಿಕ ನೇರವಾಗಿ ಸ್ಟೇಡಿಯಂಗೆ ತೆರಳಿದ ದೀಪಕ್, ವಿವಾಹದ ಪ್ರಸ್ತಾಪವನ್ನು ಮುಂದಿರಿಸಿದರು. ಇದೇ ಕ್ಷಣಕ್ಕಾಗಿ ಕಾಯುತ್ತಿದ್ದ ಪ್ರೇಯಸಿಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಬಳಿಕ ಪರಸ್ಪರ ಉಂಗುರವನ್ನು ತೊಡಿಸಿ ಆಲಿಂಗನ ಮಾಡಿಕೊಂಡರು. ಇದರೊಂದಿಗೆ ಐಪಿಎಲ್ ವೇದಿಕೆಯಲ್ಲಿ ದೀಪಕ್ ಚಾಹರ್ ಹಾಗೂ ಪ್ರೇಯಸಿಯ ಅನೌಪಚಾರಿಕ ನಿಶ್ಚಿತಾರ್ಥವು ನೆರವೇರಿತು.

ಪ್ರಸ್ತುತ ವಿಡಿಯೊವನ್ನು ಐಪಿಎಲ್ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ.

ಅಂದ ಹಾಗೆ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಆರು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು.
ಚಾಹರ್ ಒಂದು ವಿಕೆಟ್ ಪಡೆದರೂ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 48 ರನ್ ಬಿಟ್ಟುಕೊಟ್ಟು ದುಬಾರಿಯೆನಿಸಿದರು.

ಅತ್ತ ಪಂಜಾಬ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ನಾಯಕ ಕೆ.ಎಲ್. ರಾಹುಲ್ 98 ರನ್ ಗಳಿಸಿ ಔಟಾಗದೆ ಉಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT