ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಬಿ ಸೇರಿದ ದಿನದಿಂದಲೂ ಮನೆಯಲ್ಲಿರುವಂತೆಯೇ ಭಾಸವಾಗುತ್ತದೆ: ಮ್ಯಾಕ್ಸ್‌ವೆಲ್

Last Updated 22 ಏಪ್ರಿಲ್ 2021, 11:54 IST
ಅಕ್ಷರ ಗಾತ್ರ

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಂಪ್ ಸೇರಿದ ಮೊದಲ ದಿನದಿಂದಲೇ ಮನೆಯಲ್ಲಿರುವಂತೆಯೇ ಭಾಸವಾಗುತ್ತಿದೆ ಎಂದು ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಗಾಗಿ ನಡೆದ ಹರಾಜಿನಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ಖರೀದಿಸಿತ್ತು. ಇದೀಗ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತಿರುವ ಮ್ಯಾಕ್ಸ್‌ವೆಲ್ ಮೊದಲ ಮೂರು ಪಂದ್ಯಗಳಲ್ಲಿ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ:

ಕಳೆದ ವರ್ಷ ಪಂಜಾಬ್ ತಂಡದಲ್ಲಿದ್ದ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಆದರೆ ಈ ಬಾರಿ ಈಗಾಗಲೇ ಆಡಿರುವ ಮೂರು ಪಂದ್ಯಗಳಲ್ಲಿ 176 ರನ್ ಕಲೆ ಹಾಕಿದ್ದಾರೆ.

ವಾಂಖೆಡೆಯಲ್ಲಿನ ಪರಿಸ್ಥಿತಿಯು ಸ್ವಲ್ಪ ಭಿನ್ನವಾಗಿವೆ. ಕೆಲವು ಹೈ ಸ್ಕೋರಿಂಗ್ ಪಂದ್ಯಗಳು ಇಲ್ಲಿ ನಡೆದಿವೆ. ಆರ್‌ಸಿಬಿ ವಿಚಾರಕ್ಕೆ ಬಂದಾಗ ಮತ್ತೆ ಬೃಹತ್ ಮೊತ್ತ ಪೇರಿಸಲು ಸಾಧ್ಯವಾದರೆ ಉತ್ತಮವಾಗಿರಲಿದೆ ಎಂದು ಹೇಳಿದ್ದಾರೆ.

ಆರ್‌ಸಿಬಿ ತಂಡವನ್ನು ಸೇರಿದ ಮೊದಲ ದಿನದಿಂದಲೂ ಮನೆಯಲ್ಲಿರುವಂತೆಯೇ ಭಾಸವಾಗುತ್ತಿದೆ. ತರಬೇತುದಾರರು, ಸಹಾಯಕ ಸಿಬ್ಬಂದಿಗಳು ಆಟಗಾರರಿಗೆ ಅತೀವ ಬೆಂಬಲ ನೀಡುತ್ತಿದ್ದು, ಇದುವರೆಗಿನ ಪಯಣವು ಖುಷಿಯಿಂದ ಕೂಡಿತ್ತು ಎಂದು ಹೇಳಿದ್ದಾರೆ.

ಗುರುವಾರ ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸವಾಲನ್ನು ಆರ್‌ಸಿಬಿ ಎದುರಿಸಲಿದೆ.

ವಿರಾಟ್ ಕೊಹ್ಲಿ ಹೆಗಲ ಮೇಲಿನ ಜವಾಬ್ದಾರಿಯನ್ನು ವಹಿಸುವುದು ನನ್ನ ಇರಾದೆಯಾಗಿದೆ. ನಾಯಕನಾಗಿ ಸಾಕಷ್ಟು ವಿಚಾರಗಳ ಜವಾಬ್ದಾರಿಯನ್ನು ವಹಿಸಬೇಕಾಗುತ್ತದೆ. ಕ್ಷೇತ್ರರಕ್ಷಣೆ ಬದಲಾವಣೆ, ಬೌಲಿಂಗ್ ಬದಲಾವಣೆ, ಹೀಗೆ ಹಲವು ಅಂಶಗಳಲ್ಲಿ ಜವಾಬ್ದಾರಿ ವಹಿಸಬೇಕಾಗುತ್ತದೆ. ಆದರೆ ನಾಯಕನಿಗೆ ಸಾಧ್ಯವಾದಷ್ಟು ನೆರವಾಗಲು ಬಯಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT