ಶುಕ್ರವಾರ, ಮೇ 14, 2021
21 °C

IPL 2021- RCB vs MI: ಒಂದೇ ಪಂದ್ಯ ಹಲವು ದಾಖಲೆ! ಇಲ್ಲಿದೆ ಅವುಗಳ ಪಟ್ಟಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಪಂದ್ಯದ ಮುಕ್ತಾಯದೊಂದಿಗೆ ಐಪಿಎಲ್ ಕ್ರಿಕೆಟ್‌ನಲ್ಲಿ ಸೃಷ್ಟಿಯಾದ ದಾಖಲೆಗಳೇನು? ಆಸಕ್ತಿದಾಯಕ ಅಂಶಗಳಾವುವು? ಇಲ್ಲಿವೆ ಮುಖ್ಯಾಂಶಗಳು...

* ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ ಪಡೆದ ಮೊದಲ ಬೌಲರ್ ಆಗಿ ಹರ್ಷಲ್ ಪಟೇಲ್ ದಾಖಲೆ ಬರೆದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್ ಕೂಡ ಆಗಿದೆ. ಈ ಹಿಂದೆ 2009ರಲ್ಲಿ ಆಗ ಡೆಕ್ಕನ್‌ ಚಾರ್ಜರ್ಸ್‌ ತಂಡದಲ್ಲಿದ್ದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ವಿರುದ್ಧ 6 ರನ್ ನೀಡಿ 4 ವಿಕೆಟ್‌ ಗಳಿಸಿದ್ದೇ ಈವರೆಗಿನ ಸಾಧನೆಯಾಗಿದೆ.

ಓದಿ: 

 

* ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್‌ ಇತಿಹಾಸದಲ್ಲಿಯೇ ಟೂರ್ನಿಯ ಮೊದಲ ಪಂದ್ಯದಲ್ಲಿ ಸತತ 9 ಬಾರಿ ಸೋಲನುಭವಿಸಿತು. ‌2013ರ ಬಳಿಕ ನಡೆದ ಎಲ್ಲ ಐಪಿಎಲ್‌ ಟೂರ್ನಿಗಳ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ. 2012ರಲ್ಲಿ ತಂಡವು ಟೂರ್ನಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ ಜಯ ಗಳಿಸಿತ್ತು.

* ಪಂದ್ಯದ ಕೊನೆಯ ಎಸೆತದಲ್ಲಿ ಆರ್‌ಸಿಬಿಯು ಜಯ ಗಳಿಸಿದ ಎರಡನೇ ಪಂದ್ಯವಿದು. 2012ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸಿತ್ತು.

* ಹರ್ಷಲ್ ಪಟೇಲ್ ಅವರು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಪಂದ್ಯವೊಂದರಲ್ಲಿ ಐದು ವಿಕೆಟ್ ಗಳಿಸಿದ ಮೂರನೇ ಆಟಗಾರನಾಗಿ ಹೊರಹೊಮ್ಮಿದರು.

ಓದಿ: 

* ಐಪಿಎಲ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದ್ದು ಇದೇ ಮೊದಲು. ಈ ಹಿಂದೆ 3 ಉದ್ಘಾಟನಾ ಪಂದ್ಯಗಳಲ್ಲಿ ಆಡಿದ್ದು, ಸೋಲನುಭವಿಸಿತ್ತು.

* ಟ್ವೆಂಟಿ–20 ಕ್ರಿಕೆಟ್‌ನಲ್ಲಿ ತಂಡವೊಂದರ ನಾಯಕನಾಗಿ ವಿರಾಟ್ ಕೊಹ್ಲಿ 6000 ರನ್ ಗಳಿಸಿದ ದಾಖಲೆಗೆ ಪಾತ್ರರಾದರು. ಟ್ವೆಂಟಿ–20 ಮಾದರಿಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ನಾಯಕನಾಗಿದ್ದಾರೆ ಕೊಹ್ಲಿ.

* ಐಪಿಎಲ್‌ನಲ್ಲಿ ಚೇಸಿಂಗ್ ವೇಳೆ ಕೊಹ್ಲಿ 2753 ರನ್ ಗಳಿಸಿದರು. 33 ರನ್‌ ಗಳಿಸಿದ್ದಾಗ (29 ಎಸೆತಗಳಲ್ಲಿ 33 ರನ್) ಅವರು ಈ ದಾಖಲೆಗೆ ಭಾಜನರಾದರು. ರಾಬಿನ್ ಉತ್ತಪ್ಪ ಅವರು ಚೇಸಿಂಗ್ ಪಂದ್ಯಗಳಲ್ಲಿ 2724 ರನ್ ಗಳಿಸಿದ್ದಾರೆ.

* ಯಜುವೇಂದ್ರ ಚಾಹಲ್ ಐಪಿಎಲ್‌ನಲ್ಲಿ 100ನೇ ಪಂದ್ಯ ಆಡಿದರು.

* ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಎಸೆತದಲ್ಲಿ ಸೋಲನುಭವಿಸಿದ ಐದನೇ ಪಂದ್ಯವಿದು.

ಓದಿ: 

* 2020ರ ಐಪಿಎಲ್ ಟೂರ್ನಿಯಲ್ಲಿ ಒಂದೇ ಒಂದು ಸಿಕ್ಸ್ ಬಾರಿಸದ ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಪರ 28 ಎಸೆತಗಳಲ್ಲಿ 39 ರನ್ ಗಳಿಸಿದರು. ಅವರ ಇನ್ನಿಂಗ್ಸ್ 2 ಸಿಕ್ಸರ್ ಒಳಗೊಂಡಿತ್ತು.

* ನಿನ್ನೆಯ ಪಂದ್ಯಕ್ಕೂ ಮುನ್ನ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸತತ 5 ಬಾರಿ ಗೆಲುವು ಸಾಧಿಸಿದ್ದರೆ ಆರ್‌ಸಿಬಿಯು ಸತತ ಐದು ಬಾರಿ ಸೋಲನುಭವಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು