ಭಾನುವಾರ, ಅಕ್ಟೋಬರ್ 24, 2021
23 °C

IPL 2021: ಇವರು ಐಪಿಎಲ್‌ 'ಹ್ಯಾಟ್ರಿಕ್' ವಿಕೆಟ್ ಸರದಾರರು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬೌಲರ್ ಹರ್ಷಲ್ ಪಟೇಲ್ 'ಹ್ಯಾಟ್ರಿಕ್' ವಿಕೆಟ್ ಸಾಧನೆ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಹರ್ಷಲ್ ಪಟೇಲ್ ಹ್ಯಾಟ್ರಿಕ್ ವಿಕೆಟ್ ದಾಖಲೆ ಬರೆದರು. ಈ ಮೂಲಕ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಆರ್‌ಸಿಬಿಯ ಮೂರನೇ ಬೌಲರ್ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ: 

ಈ ಹಿಂದೆ 2010ರಲ್ಲಿ ಪ್ರವೀಣ್ ಕುಮಾರ್ ಹಾಗೂ 2017ರಲ್ಲಿ ಸ್ಯಾಮುಯೆಲ್ ಬದ್ರಿ ಆರ್‌ಸಿಬಿ ಪರ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದರು.

 

 

 

ಒಟ್ಟಾರೆಯಾಗಿ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ 17ನೇ ಬೌಲರ್ ಎಂಬ ಹಿರಿಮೆಗೆ ಹರ್ಷಲ್ ಪಾತ್ರರಾಗಿದ್ದಾರೆ.

 

ಐಪಿಎಲ್‌ನಲ್ಲಿ ಅಮಿತ್ ಮಿಶ್ರಾ ದಾಖಲೆಯ ಮೂರು ಬಾರಿ ಹಾಗೂ ಯುವರಾಜ್ ಸಿಂಗ್ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಒಟ್ಟು 20 ಬಾರಿ ಹ್ಯಾಟ್ರಿಕ್ ದಾಖಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಭಾರತದಲ್ಲಿ ನಡೆದ ಮೊದಲಾರ್ಧದ ಟೂರ್ನಿಯಲ್ಲಿ ಮುಂಬೈ ವಿರುದ್ಧವೇ ಐದು ವಿಕೆಟ್ ಕಬಳಿಸಿರುವ ಹರ್ಷಲ್, ಈಗ 17 ರನ್ ತೆತ್ತು ಒಟ್ಟು ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಸತತ ಮೂರು ಎಸೆತಗಳಲ್ಲಿ ಹಾರ್ದಿಕ್ ಪಾಂಡ್ಯ (3), ಕೀರನ್ ಪೊಲಾರ್ಡ್ (7) ಹಾಗೂ ರಾಹುಲ್ ಚಾಹರ್ (0) ವಿಕೆಟ್ ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು.

 

 

 

ಆ ಮೂಲಕ ಟೂರ್ನಿಯಲ್ಲಿ ಇದುವರೆಗೆ ಒಟ್ಟು 23 ವಿಕೆಟ್‌ಗಳನ್ನು ಕಬಳಿಸಿ, 'ಪರ್ಪಲ್ ಕ್ಯಾಪ್‌'ಗೆ ಭಾಜನರಾಗಿದ್ದಾರೆ.

 

ಐಪಿಎಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸರದಾರರು:
1. ಅಮಿತ್ ಮಿಶ್ರಾ (3 ಬಾರಿ)
2. ಯುವರಾಜ್ ಸಿಂಗ್ (2 ಬಾರಿ)
3. ಮಖಾಯ ಎನ್‌ಟಿನಿ
4. ಅಜಿತ್ ಚಾಂಡಿಲಾ
5. ಸ್ಯಾಮುಯೆಲ್ ಬದ್ರಿ
6. ರೋಹಿತ್ ಶರ್ಮಾ
7. ಆ್ಯಂಡ್ರೂ ಟೈ
8. ಸ್ಯಾಮ್ ಕರನ್
9. ಪ್ರವೀಣ್ ತಾಂಬೆ
10. ಶ್ರೇಯಸ್ ಗೋಪಾಲ್
11. ಲಕ್ಷ್ಮೀಪತಿ ಬಾಲಾಜಿ
12. ಜೈದೇವ್ ಉನಾದ್ಕಟ್
13. ಶೇನ್ ವಾಟ್ಸನ್
14. ಅಕ್ಷರ್ ಪಟೇಲ್
15. ಪ್ರವೀಣ್ ಕುಮಾರ್
16. ಸುನಿಲ್ ನಾರಾಯಣ್
17. ಹರ್ಷಲ್ ಪಟೇಲ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು