ಬುಧವಾರ, ಅಕ್ಟೋಬರ್ 20, 2021
29 °C

MI vs PBKS: ರಾಹುಲ್‌ ಪಡೆಯನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ಮುಂಬೈ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಅಬುಧಾಬಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 135 ರನ್‌ ಕಲೆ ಹಾಕಿದೆ.

ಟಾಸ್‌ ಗೆದ್ದ ಮುಂಬೈ ತಂಡದ ನಾಯಕ ರೋಹಿತ್‌ ಶರ್ಮಾ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ನಾಯಕನ ನಿರ್ಧಾರ ಸಮರ್ಥಿಸಿಕೊಳ್ಳುವಂತೆ ದಾಳಿ ಸಂಘಟಿಸಿದ ಮುಂಬೈ ಬೌಲರ್‌ಗಳು, ಕಿಂಗ್ಸ್‌ಗೆ ಆರಂಭಿಕ ಆಘಾತ ನೀಡಿದರು.

ತಂಡದ ಮೊತ್ತ 48 ರನ್‌ ಆಗುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರನ್ನು ಪೆವಿಲಿಯನ್‌ಗೆ ಅಟ್ಟಿ ಮೇಲುಗೈ ತಂದುಕೊಟ್ಟರು. ಆದರೆ ಈ ಹಂತದಲ್ಲಿ ಜೊತೆಯಾದ ಏಡನ್‌ ಮಾರ್ಕ್ರಂ (38) ಮತ್ತು ದೀಪಕ್‌ ಹೂಡ (25) ಐದನೇ ವಿಕೆಟ್‌ ಜೊತೆಯಾಟದಲ್ಲಿ 61 ರನ್‌ ಕೂಡಿಸಿ ಕುಸಿತ ತಪ್ಪಿಸಿದರು.

ಇದನ್ನೂ ಓದಿ: 

ಈ ಜೋಡಿಯನ್ನು 16ನೇ ಓವರ್‌ನಲ್ಲಿ ರಾಹುಲ್‌ ಚಾಹರ್‌ ಬೇರ್ಪಡಿಸಿದರು. 26 ಎಸೆತಗಳಲ್ಲಿ 28 ರನ್‌ ಬಾರಿಸಿದ್ದ ದೀಪಕ್‌ ಅವರೂ 19ನೇ ಓವರ್‌ನಲ್ಲಿ ಔಟಾದರು. ಕೊನೆಯಲ್ಲಿ ಹರ್ಪ್ರೀತ್‌ ಬ್ರಾರ್‌ ಮತ್ತು ನಾಥನ್‌ ಎಲ್ಲಿಸ್‌ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು.

ಮುಂಬೈ ಪರ ಜಸ್‌ಪ್ರಿತ್‌ ಬೂಮ್ರಾ ಹಾಗೂ ಕೀರನ್‌ ಪೊಲಾರ್ಡ್‌ ತಲಾ ಎರಡು ವಿಕೆಟ್‌ ಕಬಳಿಸಿದರೆ, ಕೃಣಾಲ್‌ ಪಾಂಡ್ಯ ಮತ್ತು ರಾಹುಲ್‌ ಚಾಹರ್ ಒಂದೊಂದು ವಿಕೆಟ್‌ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು