ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PBKS vs RR: ಪಂಜಾಬ್ ವಿರುದ್ಧ ರಾಜಸ್ಥಾನ್‌ಗೆ 2 ರನ್‌ ಅಂತರದ ಭರ್ಜರಿ ಜಯ

Last Updated 21 ಸೆಪ್ಟೆಂಬರ್ 2021, 22:00 IST
ಅಕ್ಷರ ಗಾತ್ರ

ದುಬೈ: ಅಂತಿಮ ಎಸೆತದ ವರೆಗೂ ರೋಚಕವಾಗಿದ್ದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲುವಿನ ನಗೆ ಸೂಸಿತು.

ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯ ಕತ್ವದ ರಾಯಲ್ಸ್ ಎರಡು ರನ್‌ಗಳಿಂದ ಪಂಜಾಬ್ ಕಿಂಗ್ಸ್‌ಗೆ ಸೋಲುಣಿಸಿತು.

186 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪಂಜಾಬ್‌ ತಂಡ ಕೆ.ಎಲ್‌.ರಾಹುಲ್ ಮತ್ತು ಮಯಂಕ್ ಅಗರ ವಾಲ್ ಅವರ 120 ರನ್‌ಗಳ ಮೊದಲ ವಿಕೆಟ್ ಜೊತೆಯಾಟದ ನೆರವಿನಿಂದ ಸುಲಭ ಗೆಲುವಿನತ್ತ ಹೆಜ್ಜೆ ಹಾಕಿತ್ತು. ಆದರೆ ಕೊನೆಯ ಹಂತದಲ್ಲಿ ಎರಡವಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯುವ ಪ್ರತಿಭೆ ಯಶಸ್ವಿ ಜೈಸ್ವಾಲ್ ಮತ್ತು ಮಹಿಪಾಲ್ ಲೊಮ್ರೊರ್ ಉತ್ತಮ ಆರಂಭ ನೀಡಿದರು. ಆದರೆ, ಅದರ ಬೃಹತ್ ಮೊತ್ತ ಪೇರಿಸುವ ಕನಸಿಗೆ ಪಂಜಾಬ್ ಕಿಂಗ್ಸ್‌ನ ಆರ್ಷದೀಪ್ ಸಿಂಗ್ ಅಡ್ಡಿಯಾದರು.

ಐದು ವಿಕೆಟ್ ಗೊಂಚಲು ಗಳಿಸಿದ ಆರ್ಷದೀಪ್ ದಾಳಿಯ ಮುಂದೆ ರಾಜಸ್ಥಾನ್ ತಂಡವು 20 ಓವರ್‌ಗಳಲ್ಲಿ 185 ರನ್ ಗಳಿಸಿತು.

ರಾಜಸ್ಥಾನ್ ತಂಡಕ್ಕೆ ಎವಿನ್ ಲೂಯಿಸ್ (36; 21ಎ) ಮತ್ತು ಯಶಸ್ವಿ ಜೈಸ್ವಾಲ್ (49 ರನ್) ಭರ್ಜರಿ ಆರಂಭ ನೀಡಿದರು.

ಇವರಿಬ್ಬರ ಬಿರುಸಿನ ಆಟದಿಂದಾಗಿ ತಂಡವು ಐದು ಓವರ್‌ ಗಳಲ್ಲಿಯೇ 50 ರನ್‌ಗಳ ಗಡಿ ದಾಟಿತು. ಆರನೇ ಓವರ್‌ನಲ್ಲಿ ಆರ್ಷದೀಪ್ ಎಸೆತದಲ್ಲಿ ಲೂಯಿಸ್ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು.

ಸಂಜು ಸ್ಯಾಮ್ಸನ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಲಿಯಾಮ್ ಲಿವಿಂಗ್‌ಸ್ಟೋನ್ (25) ಸ್ವಲ್ಪ ಹೊತ್ತು ಪ್ರತಿರೋಧವೊಡ್ಡಿದರು. ಅವರಿಗೂ ಆರ್ಷದೀಪ್ ಎಂಟನೇ ಓವರ್‌ನಲ್ಲಿ ಪೆವಿಲಿಯನ್‌ ಹಾದಿ ತೋರಿದರು.

ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಮಹಿಪಾಲ್ (43 ರನ್) ಎರಡು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ ಹೊಡೆಯುವ ಮೂಲಕ ಮಿಂಚು ಹರಿಸಿದರು. ಇತ್ತ ಅರ್ಧಶತಕದ ಸನಿಹದಲ್ಲಿದ್ದ ಯಶಸ್ವಿ ವಿಕೆಟ್ ಗಳಿಸಿದ ಹರ್‌ಪ್ರೀತ್ ಬ್ರಾರ್ ಸಂಭ್ರಮಿಸಿದರು.

ಸಿಕ್ಸರ್ ಹೊಡೆತಗಾರ ರಿಯಾನ್ ಪರಾಗ್ ಮತ್ತು ರಾಹುಲ್ ತೆವಾಟಿಯಾ ಅವರ ಆಟಕ್ಕೆ ಮೊಹಮ್ಮದ್ ಶಮಿ ಕಡಿವಾಣ ಹಾಕಿದರು. ಕ್ರಿಸ್ ಮೊರಿಸ್‌ ವಿಕೆಟ್ ಕೂಡ ಶಮಿ ಪಾಲಾಯಿತು. 18ನೇ ಓವರ್‌ನಲ್ಲಿ ಲೊಮ್ರೊರ್ ಅಬ್ಬರಕ್ಕೆ ತಡೆಯೊಡ್ಡಿದ ಆರ್ಷದೀಪ್, ಕೊನೆಯಲ್ಲಿ ಚೇತನ್ ಸಕಾರಿಯಾ ಮತ್ತು ಕಾರ್ತಿಕ್ ತ್ಯಾಗಿ ವಿಕೆಟ್‌ಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇದರಿಂದಾಗಿ ರಾಜಸ್ಥಾನ್ ತಂಡವು 200ಕ್ಕಿಂತ ಹೆಚ್ಚು ರನ್‌ ಗಳಿಸುವ ಅವಕಾಶ ಕೈತಪ್ಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT