ಮಂಗಳವಾರ, ಮೇ 11, 2021
27 °C

IPL 2021: ಮುಂಬೈ ವಿರುದ್ಧ ಸೋಲು, ಕೆಕೆಆರ್‌ ಅಭಿಮಾನಿಗಳಿಗೆ ಕ್ಷಮೆ ಕೋರಿದ ಶಾರುಖ್

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಮುಂಬೈ ಇಂಡಿಯನ್ಸ್‌ ವಿರುದ್ಧ ಕೋಲ್ಕತ್ತ ನೈಟ್‌ರೈಡರ್ಸ್‌ ಸೋಲು ಅನುಭವಿಸಿದ ಕಾರಣಕ್ಕೆ ತಂಡದ ಸಹ ಮಾಲೀಕ ಶಾರುಖ್‌ ಖಾನ್‌ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್‌ ಟೂರ್ನಿಯ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ರಾಹುಲ್‌ ಚಹರ್‌ ಮತ್ತು ಕೃಣಾಲ್‌ ಪಾಂಡ್ಯ ಅವರ ಸ್ಪಿನ್‌ ಮೋಡಿಗೆ ತತ್ತರಿಸಿದ ಕೆಕೆಆರ್‌ ತಂಡ 10 ರನ್‌ಗಳಿಂದ ಸೋಲು ಅನುಭವಿಸಿತು.

ಇದಕ್ಕೂ ಮುನ್ನ ಮುಂಬೈ ಎದುರು ಟಾಸ್‌ ಗೆದ್ದ ಕೆಕೆಆರ್‌, ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಮುಂಬೈ 20 ಓವರ್‌ಗಳಲ್ಲಿ 152 ರನ್‌ ಗಳಿಸಿ ಆಲೌಟ್‌ ಆಯಿತ್ತು.

153 ರನ್‌ಗಳ ಸಾಧಾರಣ ಮೊತ್ತ ಬೆನ್ನತ್ತಿದ ಕೆಕೆಆರ್ 20 ಓವರ್‌ಗಳಲ್ಲಿ 142 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಪಂದ್ಯ ಸೋತ ಬೆನ್ನಲ್ಲೇ ಬಾಲಿವುಡ್‌ ನಟ ಹಾಗೂ ಕೆಕೆಆರ್ ತಂಡದ ಸಹ ಮಾಲೀಕ ಶಾರುಖ್‌ ಖಾನ್‌ ಟ್ವೀಟ್‌ ಮಾಡಿದ್ದು, ‘ತಮ್ಮ ನೆಚ್ಚಿನ ತಂಡದ ಸೋಲಿನಿಂದ ನಿರಾಶೆಗೊಂಡು ಅಭಿಮಾನಿಗಳಿಗೆ ಕ್ಷಮೆಯಾಚಿಸುತ್ತೇನೆ’ ಎಂದಿದ್ದಾರೆ.

ಮುಂಬೈ ಇಂಡಿಯನ್ಸ್‌ ಪರ ರಾಹುಲ್‌ ಚಹರ್‌ 4, ಟ್ರೆಂಟ್‌ ಬೋಲ್ಟ್‌ 2, ಕೃಣಾಲ್‌ ಪಾಂಡ್ಯ 1 ವಿಕೆಟ್‌ ಪಡೆದು ಮಿಂಚಿದರು.

ಕೆಕೆಆರ್ ಗೆಲುವಿಗೆ ಕೊನೆ ಓವರ್‌ನಲ್ಲಿ 15 ರನ್‌ ಅಗತ್ಯವಿತ್ತು. ಇದೇ ಓವರ್‌ನಲ್ಲಿ ಟ್ರೆಂಟ್‌ ಬೋಲ್ಟ್‌ ಅವರು ರಸೆಲ್ ಮತ್ತು ಪ್ಯಾಟ್ ಕಮಿನ್ಸ್ ಅವರನ್ನು ಔಟ್‌ ಮಾಡುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ... PV Web Exclusive: ಮ್ಯಾಕ್ಸ್‌ವೆಲ್ 93 ಸಿಕ್ಸರ್‌ಗಳಲ್ಲಿ ಮೊನ್ನೆಯದು ಎರಡು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು