IPL 2022: ಟೂರ್ನಿಯಲ್ಲಿ 9ನೇ ಸೋಲಿಗೆ ಕಾರಣ ನೀಡಿದ ಧೋನಿ

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಭಾನುವಾರ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಏಳು ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ.
ಇದರೊಂದಿಗೆ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ, ಟೂರ್ನಿಯಲ್ಲಿ ಒಂಬತ್ತನೇ ಸೋಲಿನ ಮುಖಭಂಗಕ್ಕೊಳಗಾಗಿದೆ.
ಇದನ್ನೂ ಓದಿ: Thomas Cup: ಐತಿಹಾಸಿಕ ಗೆಲುವು, ಇತಿಹಾಸ ನಿರ್ಮಿಸಿದ ಭಾರತ
ಈ ಕುರಿತು ಪ್ರತಿಕ್ರಿಯಿಸಿರುವ ನಾಯಕ ಮಹೇಂದ್ರ ಸಿಂಗ್ ಧೋನಿ, ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರ ಸರಿಯಾಗಿರಲಿಲ್ಲ ಎಂದು ಹೇಳಿದ್ದಾರೆ.
ಇನ್ನಿಂಗ್ಸ್ನ ಮೊದಲಾರ್ಧದಲ್ಲಿ ವೇಗದ ಬೌಲರ್ಗಳನ್ನು ಎದುರಿಸುವುದು ಕಷ್ಟಕರವಾಗಿತ್ತು. ಸ್ಪಿನ್ನರ್ಗಳು ಉತ್ತಮ ದಾಳಿ ಸಂಘಟಿಸಿದರು. ಇದರಿಂದಾಗಿ ಹಿನ್ನಡೆ ಎದುರಾಯಿತು ಎಂದು ಹೇಳಿದರು.
ಎನ್. ಜಗದೀಶನ್ ಅವರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಶಿವಂ ದುಬೆ ಅವರಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಹಿಂಬಡ್ತಿ ನೀಡಲಾಯಿತು ಎಂದು ಮಹಿ ತಿಳಿಸಿದರು.
ಈ ನಡುವೆ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಶುಭಮನ್ ಗಿಲ್ ವಿಕೆಟ್ ಗಳಿಸಿ ಪ್ರಭಾವ ಮೂಡಿಸಿರುವ ಮತೀಶ ಪತಿರಾನ ಅವರನ್ನು ಧೋನಿ ಶ್ಲಾಘಿಸಿದರು.
ಶ್ರೀಲಂಕಾ ದಿಗ್ಗಜ ಲಸಿತ್ ಮಾಲಿಂಗ ಶೈಲಿಯನ್ನು ಹೋಲುವ ಲಂಕಾದವರೇ ಆದ ಮತೀಶ, ನಿಧಾನಗತಿಯ ಬೌಲಿಂಗ್ ಹಾಗೂ ಇನ್ನಿಂಗ್ಸ್ನ ಕೊನೆಯಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಬಲ್ಲರು ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.