ಭಾನುವಾರ, ಜೂನ್ 26, 2022
26 °C

ಡೆಲ್ಲಿ ವಿರುದ್ಧ ಪಂದ್ಯ ಗೆಲ್ಲಲು ಮುಂಬೈಗೆ ಬೆಂಬಲ: ‘ಬಣ್ಣ’ ಬದಲಿಸಿದ ಆರ್‌ಸಿಬಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಪಿಎಲ್‌ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಲೀಗ್‌ ಹಂತದ 69ನೇ ಪಂದ್ಯ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು (ಶನಿವಾರ) ರಾತ್ರಿ 7.30ಕ್ಕೆ ನಡೆಯಲಿದೆ. ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ಲೇ ಆಫ್‌ ಪ್ರವೇಶಿಸಬೇಕಿದ್ದರೆ ಮುಂಬೈ ಗೆಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆರ್‌ಸಿಬಿ ಅಬಿಮಾನಿಗಳು ಮುಂಬೈ ಗೆಲುವಿಗೆ ಹಾರೈಸುತ್ತಿದ್ದರೆ ಇತ್ತ ಫ್ರಾಂಚೈಸ್‌ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಲೋಗೊದ ಬಣ್ಣ ಬದಲಾಯಿಸಿ ಮುಂಬೈಗೆ ಬೆಂಬಲ ಸೂಚಿಸಿದೆ. ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಆರ್‌ಸಿಬಿಯ ಲೋಗೊ ಕೆಂಪಿನ ಬದಲಾಗಿ ನೀಲಿ ಬಣ್ಣಕ್ಕೆ ತಿರುಗಿದೆ!

‘ರೆಡ್ ಟರ್ನ್ಸ್ ಬ್ಲೂ ಟುಡೇ’

ಮುಂಬೈ ಗೆಲುವಿಗೆ ಹಾರೈಸಿ ಫೇಸ್‌ಬುಕ್ ಪುಟದಲ್ಲಿ ಸಂದೇಶ ಪ್ರಕಟಿಸಿರುವ ಆರ್‌ಸಿಬಿ, ‘ರೆಡ್ ಟರ್ನ್ಸ್ ಬ್ಲೂ ಟುಡೇ, ಮುಂಬೈ ಇಂಡಿಯನ್ಸ್‌ಗೆ ಆರ್‌ಸಿಬಿ ಬರೆದ ಪತ್ರ ಇಲ್ಲಿದೆ ನೋಡಿ. ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ಧೈರ್ಯದಿಂದ ಆಡಿ’ ಎಂಬ ಬರಹದೊಂದಿಗೆ ಅಂಚೆ ಪತ್ರವೊಂದರ ಚಿತ್ರವನ್ನು ಉಲ್ಲೇಖಿಸಿದೆ.

ಇದಕ್ಕೆ ಅಭಿಮಾನಿಗಳಿಂದಲೂ ತಮಾಷೆಯ, ವ್ಯಂಗ್ಯದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅನೇಕರು ಆರ್‌ಸಿಬಿ ತಂಡವನ್ನು ಟ್ರೋಲ್ ಮಾಡಿದ್ದರೆ, ಇನ್ನು ಹಲವರು ಬೆಂಬಲ ಸೂಚಿಸಿದ್ದಾರೆ.

ಆಡಿರುವ 13 ಪಂದ್ಯಗಳಲ್ಲಿ 7 ಜಯ ಮತ್ತು 6 ಸೋಲು ಅನುಭವಿಸಿರುವ ಡೆಲ್ಲಿ ತಂಡ, ಸದ್ಯ ಪಾಯಿಂಟ್‌ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದರೆ 16 ಪಾಯಿಂಟ್ಸ್‌ ಸಂಪಾದಿಸಿ, ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಟಿಕೆಟ್‌ ಗಿಟ್ಟಿಸಿಕೊಳ್ಳಲಿದೆ. ಲೀಗ್‌ ಹಂತದಲ್ಲಿ ಎಲ್ಲ (14) ಪಂದ್ಯಗಳನ್ನೂ ಆಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) 8 ಜಯ 6 ಸೋಲು ಕಂಡಿದೆ. 16 ಅಂಕ ಕಲೆಹಾಕಿ ಪಾಯಿಂಟ್‌ ಪಟ್ಟಿಯಲ್ಲಿ ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ಡೆಲ್ಲಿಗಿಂತಲೂ ಕಳಪೆ ಕಡಿಮೆ ರನ್‌ರೇಟ್‌ ಹೊಂದಿದೆ.

ಒಂದು ವೇಳೆ ಇಂದಿನ ಪಂದ್ಯದಲ್ಲಿ ಮುಂಬೈ ಸೋತರೆ, ಆರ್‌ಸಿಬಿ ಟೂರ್ನಿಯಿಂದ ಹೊರಬೀಳಬೇಕಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು