ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ರಿಷಭ್ ಪಂತ್‌ ಅವರಿಂದ ಡೇವಿಡ್ ವಾರ್ನರ್ ಕಲಿಯಲು ಬಯಸಿದ್ದೇನು?

Last Updated 7 ಏಪ್ರಿಲ್ 2022, 10:14 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾದ ಎಡಗೈ ಬ್ಯಾಟರ್‌ ಡೇವಿಡ್ ವಾರ್ನರ್ ಅವರು2009ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವುದರೊಂದಿಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಅದಾದ, ಬಳಿಕ ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲಿ ಆಡಿದ್ದ ಅವರು ಇದೀಗ ಮತ್ತೆ ಡೆಲ್ಲಿ ಕ್ಯಾಂಪ್‌ಗೆ ವಾಪಸ್‌ ಆಗಿದ್ದಾರೆ.

ರಿಷಭ್‌ ಪಂತ್ ನಾಯಕತ್ವದಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇನೆ ಎಂದಿರುವ ವಾರ್ನರ್‌, ಪಂತ್ ಅವರಂತೆ ಬ್ಯಾಟನ್ನು ಒಂದೇ ಕೈಯಲ್ಲಿ ಹಿಡಿದು ಚೆಂಡನ್ನು ಬಾರಿಸುವುದನ್ನು ಕಲಿಯಲು ಬಯಸಿದ್ದೇನೆ ಎಂದೂ ಹೇಳಿಕೊಂಡಿದ್ದಾರೆ.

'ಚೆಂಡನ್ನು ಒಂದೇ ಕೈಯಲ್ಲಿ ಬಾರಿಸುವುದು ಹೇಗೆ ಎಂಬುದನ್ನು ರಿಷಭ್ ಅವರಿಂದ ಕಲಿಯಲು ಬಯಸಿದ್ದೇನೆ. ಈಗಷ್ಟೇ ನಾಯಕತ್ವ ನಿಭಾಯಿಸುವುದನ್ನು ಕಲಿಯುತ್ತಿರುವ ಅವರು (ಪಂತ್), ಭಾರತ ಕ್ರಿಕೆಟ್‌ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅವರೊಂದಿಗೆ ಆಡಲು ಕಾತರದಿಂದ ಕಾಯುತ್ತಿದ್ದೇನೆ' ಎಂದು ವಾರ್ನರ್ ಹೇಳಿದ್ದಾರೆ.

ಡೆಲ್ಲಿ ತಂಡಮುಂಬೈನ್‌ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಇಂದು ರಾತ್ರಿ ಲಖನೌ ಸೂಪರ್‌ಜೈಂಟ್ಸ್‌ ವಿರುದ್ಧ ಸೆಣಸಾಟ ನಡೆಸಲಿದೆ.

ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿರುವ ಐದನೇ ಆಟಗಾರ ಎನಿಸಿರುವವಾರ್ನರ್‌, ಹಿಂದಿನ ಆವೃತ್ತಿಗಳಲ್ಲಿ ಸನ್‌ರೈಸರ್ಸ್‌ ತಂಡವನ್ನು ಮುನ್ನಡೆಸಿದ್ದರು. ಅವರನ್ನು, 2022ರ ಹರಾಜು ಪ್ರಕ್ರಿಯೆಯಲ್ಲಿ ಡೆಲ್ಲಿ ಫ್ರಾಂಚೈಸ್‌ ₹ 6.25 ಕೋಟಿಗೆ ಖರೀದಿಸಿದೆ.

ವಾರ್ನರ್‌ ನಾಯಕತ್ವದಲ್ಲಿ ರೈಸರ್ಸ್‌ ತಂಡ 2016ರಲ್ಲಿ ಚಾಂಪಿಯನ್‌ ಎನಿಸಿತ್ತು. ಸದ್ಯ ಈತಂಡವನ್ನು ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ ಮುನ್ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT