ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಐಪಿಎಲ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಚೊಚ್ಚಲ ಐದು ವಿಕೆಟ್ ಸಾಧನೆ

ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದ್ದಾರೆ.

ಐಪಿಎಲ್ 2022 ಟೂರ್ನಿಯಲ್ಲಿ ಸೋಮವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬೂಮ್ರಾ, ಜೀವನಶ್ರೇಷ್ಠ ಸಾಧನೆ ಮಾಡಿದರು.

ನಾಲ್ಕು ಓವರ್‌ಗಳಲ್ಲಿ ಒಂದು ಮೇಡನ್ ಸೇರಿದಂತೆ 10 ರನ್ ಮಾತ್ರ ಬಿಟ್ಟುಕೊಟ್ಟ ಬೂಮ್ರಾ, ಐದು ವಿಕೆಟ್ ಕಬಳಿಸಿ ಮಿಂಚಿದರು.

2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ರನ್ ತೆತ್ತು ನಾಲ್ಕು ವಿಕೆಟ್ ಪಡೆದಿರುವುದು ಬೂಮ್ರಾಅವರ ಈ ಹಿಂದಿನಶ್ರೇಷ್ಠ ಸಾಧನೆಯಾಗಿತ್ತು.

ಕೆಕೆಆರ್ ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ನಿತೀಶ್ ರಾಣಾ ಹಾಗೂ ಆ್ಯಂಡ್ರೆ ರಸೆಲ್ ವಿಕೆಟ್‌ಗಳನ್ನು ಬೂಮ್ರಾ ಕಬಳಿಸಿದರು.

ಬಳಿಕ 18ನೇ ಓವರ್‌ನಲ್ಲಿ ಮೂರು ವಿಕೆಟ್ ಪಡೆದು ಮಾರಕ ದಾಳಿ ಮಾಡಿದರು. ಅದೇ ಓವರ್‌ನಲ್ಲಿ ಶೆಲ್ಡನ್ ಜ್ಯಾಕ್ಸನ್, ಪ್ಯಾಟ್ ಕಮಿನ್ಸ್ ಹಾಗೂ ಸುನಿಲ್ ನಾರಾಯಣ್ ಅವರನ್ನು ಹೊರದಬ್ಬಿದರು.

ಒಟ್ಟಾರೆಯಾಗಿ ಐಪಿಎಲ್‌ ಇತಿಹಾಸದಲ್ಲೇ ಐದನೇ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಸಾಧನೆ:
6/12: ಅಲ್ಜಾರಿ ಜೋಸೆಫ್ (ಮುಂಬೈ ಇಂಡಿಯನ್ಸ್), 2019
6/14: ಸೊಹೈಲ್ ತನ್ವೀರ್ (ರಾಜಸ್ಥಾನ್ ರಾಯಲ್ಸ್), 2008
6/19: ಆ್ಯಡಂ ಜಂಪಾ (ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್), 2016
5/5: ಅನಿಲ್ ಕುಂಬ್ಳೆ, (ರಾಯಲ್ ಚಾಲೆಂಜರ್ಸ್ ಬೆಂಗಳೂರು), 2009
5/10: ಜಸ್‌ಪ್ರೀತ್ ಬೂಮ್ರಾ (ಮುಂಬೈ ಇಂಡಿಯನ್ಸ್), 2022

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT