ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಆರ್‌ಸಿಬಿಗೆ ಇನ್ನೊಂದೇ ಪಂದ್ಯ ಬಾಕಿ; ಪ್ಲೇ-ಆಫ್ ಪ್ರವೇಶ ಹೇಗೆ ಸಾಧ್ಯ?

ಅಕ್ಷರ ಗಾತ್ರ

ಮುಂಬೈ: ಐಪಿಎಲ್‌ನಲ್ಲಿ ಚೊಚ್ಚಲ ಕಿರೀಟ ಎದುರು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಟೂರ್ನಿಯಲ್ಲಿ ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಲಿದೆಯೇ ಎಂಬುದು ಬಹಳಷ್ಟು ಕುತೂಹಲ ಮೂಡಿಸಿದೆ.

ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಹೀನಾಯ ಸೋಲಿಗೆ ಒಳಗಾಗಿರುವ ಆರ್‌ಸಿಬಿಯ ಪ್ಲೇ-ಆಫ್ ಪ್ರವೇಶ ಮತ್ತಷ್ಟು ಕಠಿಣವೆನಿಸಿದೆ.

ಫಫ್ ಡುಪ್ಲೆಸಿ ಪಡೆ,ಮೇ 19ರಂದು ಗುಜರಾತ್ ಟೈಟನ್ಸ್ ವಿರುದ್ಧ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಅಲ್ಲದೆ ಪ್ಲೇ-ಆಫ್ ಪ್ರವೇಶವು ಇತರೆ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಿರುತ್ತದೆ.

ಕೊನೆಯ ಪಂದ್ಯದಲ್ಲಿ ಗೆದ್ದರೆ ಆರ್‌ಸಿಬಿ ಲೀಗ್ ಹಂತದಲ್ಲಿ 14 ಪಂದ್ಯಗಳಲ್ಲಿ ಎಂಟು ಗೆಲುವಿನೊಂದಿಗೆ ಒಟ್ಟು 16 ಅಂಕಗಳನ್ನು ಗಿಟ್ಟಿಸಿಕೊಳ್ಳಲಿದೆ.

ಈ ಸನ್ನಿವೇಶದಲ್ಲಿ ಉಳಿದ ತಂಡಗಳತ್ತ ಗಮನ ಹಾಯಿಸಿದರೆ, ಮೂರು ತಂಡಗಳು ಗರಿಷ್ಠ 16ಕ್ಕೂ ಹೆಚ್ಚು ಅಂಕಗಳನ್ನು (ಗುಜರಾತ್, ಲಖನೌ, ರಾಜಸ್ಥಾನ್) ಪಡೆಯುವ ಸಾಧ್ಯತೆಯಿದೆ. ಉಳಿದಂತೆ ಮೂರು ತಂಡಗಳು ತಲಾ 16 ಅಂಕ (ಬೆಂಗಳೂರು ಹಾಗೂ ಡೆಲ್ಲಿ/ಹೈದರಾಬಾದ್/ಪಂಜಾಬ್) ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.

ಪಂಜಾಬ್ ಹಾಗೂ ಡೆಲ್ಲಿ ತಂಡಗಳಿಗೆ ತಲಾ ಎರಡು ಮತ್ತು ಹೈದರಾಬಾದ್ ತಂಡಕ್ಕೆ ಮೂರು ಪಂದ್ಯಗಳು ಬಾಕಿ ಉಳಿದಿವೆ. ಪಂಜಾಬ್ ತಂಡವು ಡೆಲ್ಲಿ ಹಾಗೂ ಹೈದರಾಬಾದ್ ವಿರುದ್ಧ ಆಡಲಿರುವುದರಿಂದ ಆರ್‌ಸಿಬಿ ಹೊರತುಪಡಿಸಿ ಇನ್ನುಳಿದ ಎರಡು ತಂಡಗಳಿಗೆ ಗರಿಷ್ಠ 16 ಅಂಕ ಪಡೆಯಲು ಸಾಧ್ಯವಾಗಲಿದೆ.

ಹಾಗಾದ್ದಲ್ಲಿ ಪಂಜಾಬ್ (+0.023), ಡೆಲ್ಲಿ (+0.210) ಹಾಗೂ ಹೈದರಾಬಾದ್ (-0.031) ಆರ್‌ಸಿಬಿಗಿಂತ ಉತ್ತಮ ರನ್‌ರೇಟ್ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಈ ಮೂರು ತಂಡಗಳ ಪೈಕಿ ಒಂದು ತಂಡವು ನಾಲ್ಕನೇ ಸ್ಥಾನದೊಂದಿಗೆ ಪ್ಲೇ-ಆಫ್‌ಗೆ ಪ್ರವೇಶಿಸಲಿದೆ. ಈಗ -0.323 ರನ್‌ರೇಟ್ ಹೊಂದಿರುವ ಆರ್‌ಸಿಬಿ, ಕೊನೆಯ ಪಂದ್ಯದಲ್ಲಿ 200 ರನ್ ಗಳಿಸಿ 100 ರನ್ ಅಂತರದ ಜಯ ಸಾಧಿಸಿದರೂ ರನ್‌ರೇಟ್ 0.071ಕ್ಕೆ ಮಾತ್ರ ಸುಧಾರಿಸಿಕೊಳ್ಳಲಿದೆ.

ಹಾಗಾಗಿ ಆರ್‌ಸಿಬಿಯ ಪ್ಲೇ-ಆಫ್‌ ಕನಸು ನನಸಾಗಬೇಕಾದರೆ ಡೆಲ್ಲಿ, ಸನ್‌ರೈಸರ್ಸ್ ಹಾಗೂ ಪಂಜಾಬ್ ತಂಡಗಳು ಉಳಿದಿರುವ ಪಂದ್ಯಗಳಲ್ಲಿ ಒಂದನ್ನಾದರೂ ಸೋಲಲೇಬೇಕಾಗುತ್ತದೆ. ಇನ್ನು ರಾಜಸ್ಥಾನ್ ಉಳಿದಿರುವ ಎರಡೂ ಪಂದ್ಯಗಳಲ್ಲಿ ಸೋತರೆ ಆರ್‌ಸಿಬಿಗೆ ವರದಾನವಾಗಲಿದೆ.

ಹಾಗೊಂದು ವೇಳೆ ಆರ್‌ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಸೋತರೆ ಪ್ಲೇ-ಆಫ್ ಕನಸು ಅಸ್ತಮಿಸಲಿದೆ.

ಐಪಿಎಲ್ 2022ಅಂಕಪಟ್ಟಿ ಇಂತಿದೆ (60ನೇ ಪಂದ್ಯ ಅಂತ್ಯಕ್ಕೆ):

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT