ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ತಂಡಗಳ ವಿಂಗಡನೆ, ಆರ್‌ಸಿಬಿ ಆಡಲಿರುವ ಪಂದ್ಯಗಳ ಮಾಹಿತಿ ಇಲ್ಲಿದೆ!

Last Updated 25 ಫೆಬ್ರುವರಿ 2022, 13:15 IST
ಅಕ್ಷರ ಗಾತ್ರ

ಮುಂಬೈ: ಈ ಬಾರಿಯ ಐಪಿಎಲ್ ಟೂರ್ನಿಯು ಹಿಂದಿಗಿಂತಲೂ ವಿಭಿನ್ನವಾಗಿ ಆಯೋಜನೆಯಾಗಲಿದೆ. ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ಐಪಿಎಲ್ 15ನೇ ಆವೃತ್ತಿಯಲ್ಲಿ ಭಾಗವಹಿಸಲಿರುವ ಒಟ್ಟು ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಐಪಿಎಲ್ 2022 ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಿ ಮೇ 29ರವರೆಗೆ ನಡೆಯಲಿದೆ.

ಟೂರ್ನಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಮುಂಬೈ ಹಾಗೂ ಪುಣೆಯ ಒಟ್ಟು ನಾಲ್ಕು ಕ್ರೀಡಾಂಗಣಗಳಲ್ಲಿ ಲೀಗ್ ಹಂತದ ಪಂದ್ಯಗಳು ಆಯೋಜನೆಯಾಗಲಿದ್ದು, ಪ್ಲೇ-ಆಫ್ ಹಾಗೂ ಫೈನಲ್ ಪಂದ್ಯಗಳ ಮೈದಾನಗಳನ್ನು ಬಳಿಕ ಪ್ರಕಟಿಸಲಾಗುವುದು.

ಲೀಗ್ ಹಂತದಲ್ಲಿ ಎಲ್ಲ 10 ತಂಡಗಳು ತಲಾ 14 ಪಂದ್ಯಗಳನ್ನು ಆಡಲಿವೆ. ಇವು 7 ಹೋಮ್ ಹಾಗೂ 7 ಎವೇ ಪಂದ್ಯಗಳನ್ನು ಒಳಗೊಂಡಿರಲಿವೆ.

ಎಲ್ಲ ತಂಡಗಳು ಐದು ತಂಡಗಳ ವಿರುದ್ಧ ತಲಾ ಎರಡು ಮತ್ತು ಇನ್ನುಳಿದ ನಾಲ್ಕು ತಂಡಗಳ ವಿರುದ್ಧ (2 ಹೋಮ್, 2 ಎವೇ ಪಂದ್ಯಗಳು) ಒಂದು ಬಾರಿ ಮಾತ್ರ ಸೆಣಸಲಿವೆ.

ಇದಕ್ಕಾಗಿ ಬಿಸಿಸಿಐ, ಐಪಿಎಲ್ ಟ್ರೋಫಿ ಜಯಿಸಿದ ಹಾಗೂ ಫೈನಲ್ ಪ್ರವೇಶಿಸಿದ ಆಧಾರದಲ್ಲಿ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿವೆ.

ಐಪಿಎಲ್ ಟ್ರೋಫಿ ಗೆದ್ದಿರುವ ಹಾಗೂ ಫೈನಲ್ ಪಂದ್ಯ ಅತಿ ಹೆಚ್ಚು ಬಾರಿ ಆಡಿರುವ ತಂಡಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

ಕೃಪೆ: ಐಪಿಎಲ್
ಕೃಪೆ: ಐಪಿಎಲ್

ಇದರಂತೆ 'ಎ' ಗುಂಪಿನಲ್ಲಿ ಮುಂಬೈ ಇಂಡಿಯನ್ಸ್, ಕೋಲ್ಕತ್ತ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಕಾಣಿಸಿಕೊಂಡಿವೆ. ಹಾಗೆಯೇ 'ಬಿ' ಗುಂಪಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಗುರುತಿಸಿಕೊಂಡಿವೆ.

ಗುಂಪುಗಳ ವಿಂಗಡನೆ ಇಂತಿದೆ:

ಕೃಪೆ: ಐಪಿಎಲ್
ಕೃಪೆ: ಐಪಿಎಲ್

ಪ್ರತಿ ತಂಡವು ತನ್ನದೇ ಗುಂಪಿನಲ್ಲಿರುವ ತಂಡಗಳೊಂದಿಗೆ ಎರಡು ಬಾರಿ ಮತ್ತು ಎರಡನೇ ಗುಂಪಿನಲ್ಲಿ ತನ್ನದೇ ಸಾಲಿನಲ್ಲಿರುವ ತಂಡದೊಂದಿಗೆ ಎರಡು ಬಾರಿ ಆಡಲಿವೆ. ಹಾಗೆಯೇ ಎರಡನೇ ಗುಂಪಿನಲ್ಲಿರುವ ಇತರ ನಾಲ್ಕು ತಂಡದೊಂದಿಗೆ ಒಮ್ಮೆ ಮಾತ್ರ ಆಡಲಿವೆ.

ಉದಾಹರಣೆಗೆ 'ಎ' ಗುಂಪಿನಲ್ಲಿರುವ ಮುಂಬೈ ಇಂಡಿಯನ್ಸ್ ತಂಡವು ತನ್ನದೇ ಗುಂಪಿನಲ್ಲಿರುವ ಕೆಕೆಆರ್, ರಾಜಸ್ಥಾನ್, ಡೆಲ್ಲಿ ಹಾಗೂ ಲಖನೌ ವಿರುದ್ಧ ಎರಡು ಪಂದ್ಯಗಳನ್ನು ಆಡಲಿವೆ. ಹಾಗೆಯೇ ತನ್ನದೇ ಸಾಲಿನಲ್ಲಿರುವ 'ಬಿ' ಗುಂಪಿನ ತಂಡವಾದ ಸಿಎಸ್‌ಕೆ ವಿರುದ್ಧವೂ ಎರಡು ಪಂದ್ಯವನ್ನು ಆಡಲಿದೆ. ಹಾಗೆಯೇ 'ಬಿ' ಗುಂಪಿನ ಉಳಿದಿರುವ ತಂಡಗಳಾದ ಎಸ್‌ಆರ್‌ಎಚ್, ಆರ್‌ಸಿಬಿ,ಪಂಜಾಬ್ ಹಾಗೂಗುಜರಾತ್ ವಿರುದ್ಧ ತಲಾ ಒಂದು ಪಂದ್ಯದಲ್ಲಿ ಸೆಣಸಲಿವೆ.

ಅದೇ ರೀತಿ 'ಬಿ' ಗುಂಪಿನಲ್ಲಿ ಕಾಣಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನದೇ ಗುಂಪಿನಲ್ಲಿರುವ ಚೆನ್ನೈ, ಹೈದರಾಬಾದ್, ಪಂಜಾಬ್ ಹಾಗೂ ಗುಜರಾತ್ ವಿರುದ್ಧ ತಲಾ ಎರಡು ಬಾರಿ ಕಣಕ್ಕಿಳಿಯಲಿದೆ. ಹಾಗೆಯೇ ತನ್ನದೇ ಸಾಲಿನಲ್ಲಿರುವ 'ಎ' ಗುಂಪಿನಲ್ಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧವೂ ಎರಡು ಬಾರಿ ಆಡಲಿದೆ. ಇನ್ನು 'ಎ' ಗುಂಪಿನ ಉಳಿದ ತಂಡಗಳಾದ ಮುಂಬೈ, ಕೋಲ್ಕತ್ತ, ಡೆಲ್ಲಿ ಹಾಗೂ ಲಖನೌ ವಿರುದ್ಧ ಒಂದು ಬಾರಿ ಆಡಲಿವೆ.

ಐಪಿಎಲ್ ಟೂರ್ನಿ ನಡೆಯಲಿರುವ ಕ್ರೀಡಾಂಗಣಗಳು:

ವಾಂಖೆಡೆ ಸ್ಟೇಡಿಯಂ, ಮುಂಬೈ: 20 ಪಂದ್ಯಗಳು
ಬ್ರೆಬೊರ್ನ್ ಸ್ಟೇಡಿಯಂ (ಸಿಸಿಐ), ಮುಂಬೈ: 15 ಪಂದ್ಯಗಳು
ಡಿವೈ ಪಾಟೀಲ್ ಸ್ಟೇಡಿಯಂ, ಮುಂಬೈ: 20 ಪಂದ್ಯಗಳು
ಎಂಸಿಎ ಅಂತರರಾಷ್ಟ್ರೀಯ ಸ್ಟೇಡಿಯಂ, ಪುಣೆ: 15 ಪಂದ್ಯಗಳು

ಎಲ್ಲ ತಂಡಗಳು ವಾಂಖೆಡೆ ಹಾಗೂ ಡಿವೈ ಪಾಟೀಲ್ ಕ್ರೀಡಾಂಗಣಗಳಲ್ಲಿ ತಲಾ ನಾಲ್ಕು ಮತ್ತು ಬ್ರೆಬೊರ್ನ್ ಹಾಗೂ ಎಂಸಿಎ ಮೈದಾನಗಳಲ್ಲಿ ತಲಾ ಮೂರು ಪಂದ್ಯಗಳನ್ನು ಆಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT