ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CSK vs LSG: ಋತುರಾಜ್‌ ಶತಕ; ಲಖನೌಗೆ 211 ರನ್‌ಗಳ ಗೆಲುವಿನ ಗುರಿ ನೀಡಿದ ಚೆನ್ನೈ

Published 23 ಏಪ್ರಿಲ್ 2024, 13:33 IST
Last Updated 23 ಏಪ್ರಿಲ್ 2024, 13:33 IST
ಅಕ್ಷರ ಗಾತ್ರ

ಚೆನ್ನೈ: ಋತುರಾಜ್ ಗಾಯಕವಾಡ ಅಜೇಯ ಶತಕ ಮತ್ತು  ಶಿವಂ ದುಬೆ ಸ್ಪೋಟಕ ಶೈಲಿಯ ಅರ್ಧಶತಕದ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ‘ದ್ವಿಶತಕ‘ದ ಮೊತ್ತ ದಾಖಲಿಸಿತು. 

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ  ಐಪಿಎಲ್ ಪಂದ್ಯದಲ್ಲಿ  ಟಾಸ್ ಗೆದ್ದ ಲಖನೌ  ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಚೆನ್ನೈ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 210 ರನ್‌ಗಳ ಮೊತ್ತ ದಾಖಲಿಸಿತು. 

ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡಕ್ಕೆ ಮೊದಲ ಓವರ್‌ನಲ್ಲಿಯೇ ಮ್ಯಾಟ್ ಹೆನ್ರಿ ಆಘಾತ ನೀಡಿದರು. ಕೇವಲ 1 ರನ್ ಗಳಿಸಿದ ಅಜಿಂಕ್ಯ ರಹಾನೆ ಅವರು ಹೆನ್ರಿ ಎಸೆತ ಆಡುವ ಪ್ರಯತ್ನದಲ್ಲಿ ರಾಹುಲ್‌ಗೆ ಕ್ಯಾಚಿತ್ತರು. ಆದರೆ ನಾಯಕನಿಗೆ ತಕ್ಕ ಆಟವಾಡಿದ ಋತುರಾಜ್ (ಔಟಾಗದೆ 108; 60ಎ, 4X12, 6X3)  ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಡ್ಯಾರಿಲ್ ಮಿಚೆಲ್ (11; 10ಎ)  ಹೆಚ್ಚು ಹೊತ್ತು ಆಡಲಿಲ್ಲ. ಎರಡನೇ ಓವರ್‌ನಲ್ಲಿ ಲಭಿಸಿದ್ದ ಜೀವದಾನವನ್ನು ಮಿಚೆಲ್ ಬಳಸಿಕೊಳ್ಳಲಿಲ್ಲ. 

ಆದರೆ ಋತುರಾಜ್ ಮತ್ತು ರವೀಂದ್ರ ಜಡೇಜ (16; 19ಎ) ಆವರು 3ನೇ ವಿಕೆಟ್ ಜೊತೆಯಾಟದಲ್ಲಿ 52 ರನ್‌ ಸೇರಿಸಿದರು. ರನ್‌ ಗಳಿಕೆ ವೇಗ ಕಡಿಮೆಯಿದ್ದರೂ ಇನಿಂಗ್ಸ್‌ಗೆ ಸ್ಥಿರತೆ ಒದಗಿಸುವಲ್ಲಿ ಈ ಜೊತೆಯಾಟ ನೆರವಾಯಿತು. ಮೊಹಸಿನ್ ಖಾನ್ ಬೌಲಿಂಗ್‌ನಲ್ಲಿ ಜಡೇಜ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು. 

ಆಗ ಕ್ರೀಸ್‌ಗೆ ಬಂದ ಶಿವಂ ದುಬೆ ಬೀಸಾಟಕ್ಕೆ ಚಾಲನೆ ನೀಡಿದರು. ಅವರೊಂದಿಗೆ ಋತುರಾಜ್ ಕೂಡ ತಮ್ಮ ಆಟದ ವೇಗ ಹೆಚ್ಚಿಸಿದರು. 4ನೇ ವಿಕೆಟ್‌ ಜೊತೆಯಾಟದಲ್ಲಿ ಇವರಿಬ್ಬರೂ 104 (46ಎಸೆತ) ರನ್ ಸೇರಿಸಿದರು.

ಋತುರಾಜ್ ಐಪಿಎಲ್‌ನಲ್ಲಿ ಎರಡನೇ ಶತಕ ದಾಖಲಿಸಿದರು. 56 ಎಸೆತಗಳಲ್ಲಿ ಅವರು ನೂರರ ಗಡಿ ಮುಟ್ಟಿದರು.   

ಅದರಲ್ಲಿ ದುಬೆ ಕಾಣಿಕೆಯೇ ಹೆಚ್ಚು. 26 ಎಸೆತಗಳಲ್ಲಿ 66 ರನ್ ಸೇರಿಸಿದರು. 244ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ಬ್ಯಾಟ್ ಬೀಸಿದರು. ಅದರಲ್ಲಿ ಏಳು ಸಿಕ್ಸರ್‌ಗಳನ್ನು ಸಿಡಿಸಿದ ಅವರು 3 ಬೌಂಡರಿ ಕೂಡ ಹೊಡೆದರು. ಅವರ ಆಟದ ರಭಸಕ್ಕೆ ಲಖನೌ ಬೌಲರ್‌ಗಳು ಬಸವಳಿದರು. 19ನೇ ಓವರ್‌ನಲ್ಲಿ ಮೊಹಸಿನ್ ಎಸತದಲ್ಲಿ ಶಿವಂ ದುಬೆ ಕ್ಯಾಚ್‌ ಕೈಚೆಲ್ಲಿದ ಕ್ವಿಂಟನ್ ಡಿಕಾಕ್ ಜೀವದಾನ ನೀಡಿದರು. ಆದರೆ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಕ್ವಿಂಟನ್ ಮತ್ತು ಸ್ಟೋಯಿನಿಸ್ ಅವರ ಚುರುಕಾದ ಫೀಲ್ಡಿಂಗ್‌ನಿಂದ ದುಬೆ ರನ್‌ಔಟ್ ಆದರು. 

ಕ್ರೀಸ್‌ಗೆ ಬಂದ ಮಹೇಂದ್ರಸಿಂಗ್ ಧೋನಿ ಎದುರಿಸಿದ ಏಕೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT