ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Highlights: ಶಶಾಂಕ್–ಅಶುತೋಷ್ ಅಬ್ಬರ; ಗುಜರಾತ್‌ನಿಂದ ಗೆಲುವು ಕಸಿದುಕೊಂಡ ಪಂಜಾಬ್

Published 5 ಏಪ್ರಿಲ್ 2024, 5:38 IST
Last Updated 5 ಏಪ್ರಿಲ್ 2024, 5:38 IST
ಅಕ್ಷರ ಗಾತ್ರ

ಅಹಮದಾಬಾದ್: ಶಶಾಂಕ್‌ ಸಿಂಗ್‌, ಅಶುತೋಷ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಪಂಜಾಬ್‌ ಕಿಂಗ್ಸ್‌ ತಂಡವು  ಗುಜರಾತ್‌ ಟೈಟನ್ಸ್‌ನಿಂದ ಗೆಲುವು ಕಸಿದುಕೊಂಡಿತು. 

ಗುರುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಪಂಜಾಬ್‌ ಮತ್ತು ಗುಜರಾತ್‌ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಟೈಟನ್ಸ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 199 ರನ್ ಗಳಿಸಿತು.

ಈ ಕಠಿಣ ಗುರಿಯನ್ನು ಬೆನ್ನಟ್ಟಿದ ಪಂಜಾಬ್‌ ತಂಡದ ಆರಂಭ ಉತ್ತಮ ವಾಗಿರಲಿಲ್ಲ. 70 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಪ್ರಭಸಿಮ್ರನ್ ಸಿಂಗ್, ಶಶಾಂಕ್‌, ಜಿತೇಶ್‌ ಮತ್ತು ಅಶುತೋಷ್ ಶರ್ಮಾ ಅವರ ಉತ್ತಮ ಜೊತೆಯಾಟದ ಫಲವಾಗಿ ಕಿಂಗ್ಸ್‌ ತಂಡವು ಒಂದು ಎಸೆತ ಬಾಕಿ ಇರುವಂತೆ 7 ವಿಕೆಟ್‌ಗೆ 200 ರನ್‌ ಗಳಿಸುವ ಮೂಲಕ ಜಯ ದಾಖಲಿಸಿತು.

ಪಂದ್ಯದ ಹೈಲೈಟ್ಸ್...

ಗುಜರಾತ್‌ ಟೈಟನ್ಸ್‌

  • ನಾಯಕ ಶುಭಮನ್‌ ಗಿಲ್ 48 ಎಸೆತಗಳಲ್ಲಿ 89 ರನ್‌ ಸಿಡಿಸಿ ಅಜೇಯರಾಗಿ ಉಳಿದರು.

  • ಈ ಬಾರಿಯ ಟೂರ್ನಿಯಲ್ಲಿ ಗಿಲ್ ಅವರಿಗೆ ಇದು ಮೊದಲ ಅರ್ಧಶತಕ ಹಾಗೂ ಐಪಿಎಲ್‌ನಲ್ಲಿ 19ನೇಯದ್ದು.

  • ಸಾಯಿ ಸುದರ್ಶನ್ 19 ಎಸೆತಗಳಲ್ಲಿ 33, ರಾಹುಲ್‌ ತೇವಾಟಿಯ ಕೇವಲ 8 ಎಸೆತಗಳಲ್ಲಿ 23 ರನ್‌ ಗಳಿಸುವ ಮೂಲಕ ತಂಡ ಗರಿಷ್ಠ ಮೊತ್ತ ಪೇರಿಸಲು ನೆರವಾದರು.

  • ನೂರ್‌ ಆಹಮ್ಮದ್‌ 2 ವಿಕೆಟ್‌ ಕಬಳಿಸಿ ಗಮನ ಸೆಳೆದರು.

ಪಂಜಾಬ್‌ ಕಿಂಗ್ಸ್‌...

  • ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಶಿಖರ್‌ 1, ಜಾನಿ ಬೇಸ್ಟೊ 22, ಸ್ಯಾಮ್ ಕರನ್ 5, ಸಿಕಂದರ್‌ ರಝಾ 15 ರನ್‌ ಗಳಿಗೇ ಔಟಾದರು. 

  • ಪ್ರಭಸಿಮ್ರನ್ ಸಿಂಗ್ 24 ಎಸೆತಗಳಲ್ಲಿ 35 ರನ್‌ ಕಾಣಿಕೆ ನೀಡಿ ತಂಡಕ್ಕೆ ಕೊಂಚ ಚೇತರಿಕೆ ನೀಡಿದರು

  • ಶಶಾಂತ್‌ ಮತ್ತು ಅಶುತೋಷ್‌ ಏಳನೇ ವಿಕೆಟ್‌ ಜೊತೆಯಾಟದಲ್ಲಿ 22 ಎಸೆತಗಳಲ್ಲಿ 43 ರನ್‌ ಗಳಿಸಿದ್ದು ಪಂದ್ಯದ ತಿರುವಿಗೆ ಕಾರಣವಾಯಿತು.

  • ಶಶಾಂಕ್‌ ಸಿಂಗ್‌ 29 ಎಸೆತಗಳಲ್ಲಿ 61 ರನ್‌ ಹೊಡೆದು ಅಜೇಯರಾಗಿ ಉಳಿದರು.

  • ಅಶುತೋಷ್‌ 17 ಎಸೆತಗಳಲ್ಲಿ 31 ರನ್‌ ಹೊಡೆದರು. 

  • ಕಗಿಸೊ ರಬಾಡ 2 ವಿಕೆಟ್‌, ಹರಪ್ರೀತ್ ಬ್ರಾರ್, ಹರ್ಷಲ್‌ ಪಟೇಲ್‌ ತಲಾ 1 ವಿಕೆಟ್‌ ಪಡೆದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT