ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಆರ್‌ಸಿಬಿ ಸೋಲಿನ ಬಳಿಕ ಎಬಿ ಡಿವಿಲಿಯರ್ಸ್ ಹೇಳಿದ್ದೇನು?

Published 23 ಮೇ 2024, 6:10 IST
Last Updated 23 ಮೇ 2024, 6:10 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಗೆಲ್ಲುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವೈಫಲ್ಯವನ್ನು ಕಂಡಿರಬಹುದು. ಆದರೆ ಟೂರ್ನಿಯಲ್ಲಿ ತಂಡದ ಪ್ರದರ್ಶನದ ಬಗ್ಗೆ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಸೋಲು ಯಾವತ್ತೂ ನೋವಿನಿಂದ ಕೂಡಿರುತ್ತದೆ. ಆದರೆ ಒಬ್ಬ ಆರ್‌ಸಿಬಿ ಅಭಿಮಾನಿಯಾಗಿ ನಮ್ಮಲ್ಲಿ ಮತ್ತೆ ನಂಬಿಕೆ ಹುಟ್ಟಿಸಿದ ನಮ್ಮ ಹುಡುಗರ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಮೊದಲ ಎಂಟು ಪಂದ್ಯಗಳಲ್ಲಿ ಸತತ ಆರು ಪಂದ್ಯ ಸೇರಿದಂತೆ ಏಳರಲ್ಲಿ ಸೋತಿದ್ದ ಆರ್‌ಸಿಬಿ, ನಂತರದ ಎಲ್ಲ ಆರು ಪಂದ್ಯಗಳನ್ನು ಗೆದ್ದು ಪ್ಲೇ-ಆಫ್‌ಗೆ ಪ್ರವೇಶಿಸಿತ್ತು. ಇದನ್ನೇ ವಿಲಿಯರ್ಸ್ ಉಲ್ಲೇಖ ಮಾಡಿದ್ದಾರೆ.

ಮುಂದಿನ ವರ್ಷ ಮತ್ತಷ್ಟು ಪ್ರಬಲರಾಗಿ ಪುನರಾಗಮನ ಮಾಡಿ ಟ್ರೋಫಿ ತವರಿಗೆ ತರುವ ನಂಬಿಕೆ ನನಗಿದೆ ಎಂದು ಸಹ ವಿಲಿಯರ್ಸ್ ಹೇಳಿದ್ದಾರೆ.

ಗವಾಸ್ಕರ್‌ಗೆ ವಿಲಿಯರ್ಸ್ ತಿರುಗೇಟು...

ವಿರಾಟ್ ಕೊಹ್ಲಿ ಸ್ಟ್ರೈಕ್‌ರೇಟ್ ಬಗ್ಗೆ ಟೀಕೆ ಮಾಡಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್‌ ಅವರಿಗೆ ಎಬಿ ಡಿವಿಲಿಯರ್ಸ್ ಪರೋಕ್ಷ ತಿರುಗೇಟು ನೀಡಿದ್ದಾರೆ. ಇಂತಹ ಟೀಕೆಗಳಿಂದಾಗಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು ವಿರಾಟ್‌ಗೆ ನೆರವಾಗಿದೆ ಎಂದು ಹೇಳಿದ್ದಾರೆ.

ಧೋನಿ ನಾಯಕರಾಗಿ ಮುಂದುವರಿಯಲಿ...

ಐಪಿಎಲ್‌ನಲ್ಲಿ ಆಡುವಷ್ಟು ಕಾಲ ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಮುಂದುವರಿಯಲಿ ಎಂದು ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.

ಐದು ಬಾರಿಯ ಚಾಂಪಿಯನ್ ಧೋನಿ, ಪ್ರಸಕ್ತ ಸಾಲಿನ ಐಪಿಎಲ್ ಆರಂಭಕ್ಕೂ ಮುನ್ನ ನಾಯಕತ್ವವನ್ನು ಋತುರಾಜ್ ಗಾಯಕವಾಡ್ ಅವರಿಗೆ ಬಿಟ್ಟುಕೊಟ್ಟಿದ್ದರು. ಆದರೆ ಗಾಯಕವಾಡ್ ನಾಯಕತ್ವದಲ್ಲಿ ಸಿಎಸ್‌ಕೆ ಪ್ಲೇ-ಆಫ್‌ಗೆ ತಲುಪುವಲ್ಲಿ ವಿಫಲವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT