ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL | RCB vs SRH Match Highlights: ರನ್‌ ಹೊಳೆಯಲ್ಲಿ ಹರಿದು ಬಂದ ದಾಖಲೆಗಳು

Published 16 ಏಪ್ರಿಲ್ 2024, 3:03 IST
Last Updated 16 ಏಪ್ರಿಲ್ 2024, 3:03 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್‌ನ ಪ್ರಮುಖ ಬ್ಯಾಟರ್‌ಗಳು ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗರೆದರು.

ಸನ್‌ರೈಸರ್ಸ್‌ ಹೈದರಾಬಾದ್‌, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಲೀಗ್‌ನ ಸರ್ವಾಧಿಕ ಮೊತ್ತ ದಾಖಲಿಸಿತಲ್ಲದೇ, ಅಂತಿಮವಾಗಿ ಪಂದ್ಯವನ್ನು 25 ರನ್‌ಗಳಿಂದ ಗೆದ್ದುಕೊಂಡಿತು.

ಹೈದರಾಬಾದ್‌ ತಂಡ 3 ವಿಕೆಟ್‌ಗೆ 287 ರನ್‌ಗಳ ಭಾರಿ ಮೊತ್ತಗಳಿಸಿ, ಇದೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಗಳಿಸಿದ್ದ 277 ರನ್‌ಗಳ ತನ್ನದೇ ದಾಖಲೆಯನ್ನು ಸುಧಾರಿಸಿತು. ಉತ್ತರವಾಗಿ ಬೆಂಗಳೂರು ತಂಡ 7 ವಿಕೆಟ್‌ಗೆ 262 ರನ್‌ ಗಳಿಸಿತು.

ರನ್‌ಗಳ ಹೊಳೆಯಲ್ಲಿ ಹಲವು ದಾಖಲೆಗಳು ಹರಿದು ಬಂದವು

  • ಈ ಪಂದ್ಯದಲ್ಲಿ ಒಟ್ಟು 38 ಸಿಕ್ಸರ್‌ಗಳು ಬಂದಿದ್ದು ದಾಖಲೆ

  • ಸನ್‌ರೈಸರ್ಸ್ ಹೊಡೆದ 22 ಸಿಕ್ಸರ್‌ಗಳು ಇನಿಂಗ್ಸ್‌ ಒಂದರಲ್ಲಿ ಅತ್ಯಧಿಕ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್‌ಸಿಬಿ 21 ಸಿಕ್ಸರ್‌ಗಳನ್ನು ಬಾರಿಸಿತ್ತು

  • ಇಂದಿನ ಪಂದ್ಯದಲ್ಲಿ ಒಟ್ಟು 549  ರನ್‌ಗಳು ಬಂದಿದ್ದೂ ದಾಖಲೆ. ಹೈದರಾಬಾದ್‌ ಮತ್ತು ಮುಂಬೈ ತಂಡ ಗಳ ನಡುವಣ ಇತ್ತೀಚಿನ ಪಂದ್ಯದಲ್ಲಿ 523 ರನ್ ಬಂದಿದ್ದು ಈ ಹಿಂದಿನ ದಾಖಲೆಯಾಗಿತ್ತು.

  • ಟ್ರಾವಿಸ್‌ ಹೆಡ್‌ 102 ರನ್‌ ಹೊಡೆದರು. ಈ ಮೂಲಕ ಅವರು 39 ಎಸೆತಗಳಲ್ಲೇ ಶತಕ ಪೂರೈಸಿದರು. ಇದು ಐಪಿಎಲ್‌ನಲ್ಲಿ ಅವರ ಮೊದಲ ಶತಕ.

  • ವಿರಾಟ್ ಕೊಹ್ಲಿ ಮತ್ತು ಫಫ್‌ ಡುಪ್ಲೆಸಿ 80 ರನ್‌ ಸೇರಿಸಿ ಉತ್ತಮ ಆರಂಭ ನೀಡಿದರು.

  • ದಿನೇಶ್ ಕಾರ್ತಿಕ್‌ 35 ಎಸೆತಗಳಲ್ಲಿ 83 ರನ್‌ ಬಾರಿಸಿದರು.

  • ಪ್ಯಾಟ್‌ ಕಮಿನ್ಸ್‌ 43 ರನ್ನಿಗೆ 3 ವಿಕೆಟ್‌ ಯಶಸ್ವಿ ಬೌಲರ್‌ ಎನಿಸಿದರು.

  • ಆರ್‌ಸಿಬಿಗೆ ಇದು ಆರನೇ ಸೋಲು. ಇದರಿಂದ ತಂಡದ ಪ್ಲೇ ಆಫ್‌ ಹಾದಿ ಇನ್ನಷ್ಟು ಕಠಿಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT