ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | RR vs KKR Match Highlights; ಬಟ್ಲರ್‌, ಸುನಿಲ್‌ ಶತಕದ ಮಿಂಚು

Published 17 ಏಪ್ರಿಲ್ 2024, 3:24 IST
Last Updated 17 ಏಪ್ರಿಲ್ 2024, 3:24 IST
ಅಕ್ಷರ ಗಾತ್ರ

ಕೋಲ್ಕತ್ತ: ಜೋಸ್‌ ಬಟ್ಲರ್‌ ಅವರ ಅಜೇಯ ಶತಕದ ಎದುರು ಸುನಿಲ್‌ ನಾರಾಯಣ ಅವರ ಶತಕದಾಟದ ತೂಕ ಕಡಿಮೆಯಾಯಿತು. ಕೊನೆಯ ಎಸೆತದವರೆಗೆ ನಡೆದ ರೋಚಕ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವು ಎರಡು ವಿಕೆಟ್‌ಗಳಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವನ್ನು ಮಣಿಸಿತು.

ಮಂಗಳವಾರ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಹೈಲೈಟ್ಸ್‌ ಇಲ್ಲಿದೆ.

  • ಈ ಪಂದ್ಯದಲ್ಲಿ 447 ರನ್‌ಗಳು ಹರಿದು ಬಂದವು.

  • ಉಭಯ ತಂಡಗಳಿಂದ ಸುನಿಲ್‌ ನಾರಾಯಣ್‌, ಜೋಸ್‌ ಬಟ್ಲರ್‌ ಶತಕ ಸಿಡಿಸಿದ್ದು ವಿಶೇಷ. 

  • ಜೋಸ್‌ ಬಟ್ಲರ್‌ 60 ಎಸೆತಗಳಲ್ಲಿ ಅಜೇಯ 107 ರನ್‌ ಸಿಡಿಸಿದರು. ಈ ಆವೃತ್ತಿಯಲ್ಲಿ ಬಟ್ಲರ್‌ಗೆ ಇದು ಎರಡನೇ ಶತಕ. ಒಟ್ಟಾರೆ ಐಪಿಎಲ್‌ನಲ್ಲಿ ಅವರ ಏಳನೇ ಶತಕ.

  • ಸುನಿಲ್‌ ನಾರಾಯಣ್‌ 56 ಎಸೆತಗಳಲ್ಲಿ 109 ರನ್‌ ಹೊಡೆದರು. ಸುನಿಲ್‌ಗೆ ಇದು ಐಪಿಎಲ್‌ನಲ್ಲಿ ಮೊದಲ ಶತಕ.

  • ಐಪಿಎಲ್‌ ಇತಿಹಾಸದಲ್ಲಿ ದಾಖಲೆಯ ಗರಿಷ್ಠ 224 ರನ್‌ ಚೇಸ್‌ ಮಾಡಿದ ತನ್ನದೇ ದಾಖಲೆಯನ್ನು ರಾಜಸ್ಥಾನ ಸರಿಗಟ್ಟಿದೆ.‌ 2020ರಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಯೂ ರಾಜಸ್ಥಾನ ಇಷ್ಟೇ ಮೊತ್ತವನ್ನು ಯಶಸ್ವಿಯಾಗಿ ಚೇಸಿಂಗ್‌ ಮಾಡಿತ್ತು.‌

  • ಕೋಲ್ಕತ್ತ ಪರ ಹರ್ಷಿತ್‌ ರಾಣಾ, ಸುನಿಲ್‌ ನಾರಾಯಣ್ ಮತ್ತು ವರುಣ್‌ ಚಕ್ರವರ್ತಿ ತಲಾ ಎರಡು ವಿಕೆಟ್‌ ಪಡೆದರು.

  • ಮೊದಲು ಬ್ಯಾಟಿಂಗ್‌ಗೆ ಇಳಿದ ಕೋಲ್ಕತ್ತ ತಂಡಕ್ಕೆ ನಾಲ್ಕನೇ ಓವರ್‌ನಲ್ಲಿ ಆವೇಶ್ ಖಾನ್ ತಮ್ಮದೇ ಎಸೆತದಲ್ಲಿ ಫಿಲ್ ಸಾಲ್ಟ್ ಅವರ ಕ್ಯಾಚ್ ಅಮೋಘವಾಗಿ ಪಡೆದು ಆಘಾತ ನೀಡಿದರು.

  • ಸುನಿಲ್ ಅವರನ್ನು ರಾಯಲ್ಸ್‌ ಬೌಲರ್‌ಗಳು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅವರು 18ನೇ ಓವರ್‌ನವರೆಗೂ ಆಡಿದರು.

  • ರಾಯಲ್ಸ್‌ನ ಆವೇಶ್ ಖಾನ್, ಸೇನ್‌ ತಲಾ 2 ವಿಕೆಟ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT