ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024- RR Vs MI: ರಾಜಸ್ಥಾನಕ್ಕೆ 180 ರನ್‌ ಗುರಿ ನೀಡಿದ ಮುಂಬೈ ಇಂಡಿಯನ್ಸ್

Published 22 ಏಪ್ರಿಲ್ 2024, 13:51 IST
Last Updated 22 ಏಪ್ರಿಲ್ 2024, 13:51 IST
ಅಕ್ಷರ ಗಾತ್ರ

ಜೈಪುರ: ಅಗ್ರ ಕ್ರಮಾಂಕದ ಆಟಗಾರರ ವೈಫಲ್ಯದ ಬಳಿಕ ಪುಟಿದೆದ್ದ ಮುಂಬೈ ಇಂಡಿಯನ್ಸ್ ತಂಡವು ಇಲ್ಲಿ ನಡೆಯುತ್ತಿರಯವ ರಾಜಸ್ಥಾನ ರಾಯಲ್ಸ್‌ ವಿರುದ್ಧದ ಐಪಿಎಲ್‌ ಪಂದ್ಯದಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 179 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಮೊದಲ ಓವರ್‌ನಲ್ಲಿ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ಎರಡನೇ ಓವರ್‌ನಲ್ಲಿ ಮತ್ತೊಬ್ಬ ಆರಂಭಿಕ ಇಶಾನ್ ಕಿಶನ್ ಕೂಡ ಪೆವಿಲಿಯನ್ ದಾರಿ ಹಿಡಿದರು. ಸೂರ್ಯಕುಮಾರ್‌ 10ರನ್‌ ಗಳಿಸಿ ನಿರ್ಗಮಿಸಿದರು.

23ರನ್ ಗಳಿಸಿ ಮೊಹಮ್ಮದ್ ನಬಿ ಅಲ್ಪ ಕಾಣಿಕೆ ನೀಡಿದರು. ಐದನೇ ವಿಕೆಟ್‌ಗೆ ಜತೆಯಾದ ತಿಲಕ್ ವರ್ಮಾ ಹಾಗೂ ನೆಹಲ್ ವಧೆರಾ ತಂಡದ ರನ್‌ ಗಳಿಕೆಯ ವೇಗವನ್ನು ಹೆಚ್ಚಿಸಿದರು.

ತಿಲಕ್ ವರ್ಮಾ 45 ಎಸೆಗತಗಳಲ್ಲಿ 65 ರನ್ ಬಾರಿಸಿದರೆ, ಸ್ಫೋಟಕ ಬ್ಯಾಟಿಂಗ್‌ ಮಾಡಿದ ವಧೆರಾ 24 ಎಸೆತಗಳಲ್ಲಿ 49 ರನ್ ಗಳಿಸಿ ಅರ್ಧ ಶತಕ ವಂಚಿತರಾಗಿ ನಿರಾಸೆ ಅನುಭವಿಸಿದರು.

ನಾಯಕ ಹಾರ್ದಿಕ್ ಪಾಂಡ್ಯ 10 ರನ್‌ ಗಳಿಸಿದರು. ಟಿಮ್‌ ಡೇವಿಟ್‌ 3, ಗೆರಾಲ್ಡ್ 0 ಗೆ ಔಟಾದರು. ಪಿಯೂಷ್ ಚಾವ್ಲಾ 1 ರನ್‌ ಹಾಗೂ ಬೂಮ್ರಾ 2 ರನ್ ಗಳಿಸಿ ಔಟಾಗದೆ ಉಳಿದರು.

ರಾಜಸ್ಥಾನ ಪರ ಸಂದೀಪ್ ಶರ್ಮಾ 5, ಟ್ರೆಂಟ್‌ ಬೋಲ್ಡ್‌ 2, ಅಶ್ವಿನ್ ಹಾಗೂ ಚಹಲ್ ತಲಾ 1 ವಿಕೆಟ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT