ಧರ್ಮಶಾಲಾ: ಐಪಿಎಲ್ನಲ್ಲಿ ತಮ್ಮ ಬೌಲಿಂಗ್ ಪ್ರದರ್ಶನಕ್ಕಿಂತಲೂ ಮಿಗಿಲಾಗಿ ವಿಕೆಟ್ ಪಡೆದ ಬಳಿಕ ಮಾಡುವ ಸಂಭ್ರಮದಿಂದಲೇ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಲಖನೌ ಸೂಪರ್ ಜೈಂಟ್ಸ್ ತಂಡದ ಸ್ಪಿನ್ ಬೌಲರ್ ದಿಗ್ವೇಶ್ ರಾಠಿ ಮತ್ತೆ ಸುದ್ದಿಯಲ್ಲಿದ್ದಾರೆ.

ಇಂದು (ಭಾನುವಾರ) ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ದಿಗ್ವೇಶ್ ರಾಠಿ, ಶ್ರೇಯಸ್ ಅಯ್ಯರ್ ವಿಕೆಟ್ ಗಳಿಸಿದ ಬಳಿಕ ಮತ್ತೆ ತಮ್ಮ ಫೇವರಿಟ್ 'ನೋಟ್ಬುಕ್ ಸೆಲೆಬ್ರೇಷನ್' ಮೂಲಕ ಗಮನ ಸೆಳೆದಿದ್ದಾರೆ.

ದಿಗ್ವೇಶ್ ಎಸೆದ ಇನ್ನಿಂಗ್ಸ್ನ 13ನೇ ಓವರ್ನ ಮೊದಲ ಎಸೆತವನ್ನು ಶ್ರೇಯಸ್ ಸಿಕ್ಸರ್ಗಟ್ಟಿದರು. ಬಳಿಕದ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಶ್ರೇಯಸ್ ಅವರನ್ನು ಬಲೆಗೆ ಬೀಳಿಸುವಲ್ಲಿ ದಿಗ್ವೇಶ್ ಯಶಸ್ವಿಯಾಗಿದ್ದಾರೆ.

ಐಪಿಎಲ್ನಲ್ಲಿ ಇದೇ ಸೆಲೆಬ್ರೇಷನ್ಗಾಗಿ ದಿಗ್ವೇಶ್ ರಾಠಿ ಎರಡು ಬಾರಿ ದಂಡನೆಗೊಳಗಾಗಿದ್ದರು.

ಈಚೆಗೆ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಇಂತಹದೇ ಸಂಭ್ರಮಕ್ಕಾಗಿ ದಿಗ್ವೇಶ್ ಅವರಿಗೆ ದಂಡ ಹಾಕಿ, ಒಂದು ಡಿಮೆರಿಟ್ ಪಾಯಿಂಟ್ ಕೂಡ ಕೊಡಲಾಗಿತ್ತು. ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಮತ್ತದೇ ಸಂಭ್ರಮ ಮಾಡಿದ್ದಕ್ಕಾಗಿ ದಂಡನೆಗೊಳಗಾಗಿದ್ದರು.
.IPL 2025 | ರಿಯಾನ್ 'ರಿಯಲ್ ಹಿಟ್ಟರ್'; ಸತತ ಆರು ಸಿಕ್ಸರ್ ಸಿಡಿಸಿ ದಾಖಲೆ .IPL 2025 | KKR vs RR: ಪರಾಗ್ ಹೋರಾಟ ವ್ಯರ್ಥ; ಕೆಕೆಆರ್ಗೆ 1 ರನ್ನಿನ ರೋಚಕ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.