ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | ಮುಂಬೈ ವಿರುದ್ಧ 5 ವಿಕೆಟ್ ಅಂತರದ ಜಯ; ಶುಭಾರಂಭ ಮಾಡಿದ ಚೆನ್ನೈ

Last Updated 20 ಸೆಪ್ಟೆಂಬರ್ 2020, 2:44 IST
ಅಕ್ಷರ ಗಾತ್ರ
ADVERTISEMENT
""

ಅಬುಧಾಬಿ:ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದಅಂಬಟಿ ರಾಯುಡು ಹಾಗೂ ಫಾಫ್‌ ಡು ಪ್ಲೆಸಿ ಅವರ ಶತಕದ ಜೊತೆಯಾಟದ ನೆರವಿನಿಂದ ಚೆನ್ನೈ ಸೂಪರ್‌ಕಿಂಗ್ಸ್ ತಂಡವು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ 5 ವಿಕೆಟ್‌ ಅಂತರದ ಗೆಲುವು ಸಾಧಿಸಿತು.ಇದರೊಂದಿಗೆಐಪಿಎಲ್‌–2020 ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿತು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 162 ರನ್‌ ಗಳಿಸಿತ್ತು.

ಈ ಮೊತ್ತ ಬೆನ್ನತ್ತಿದ ಚೆನ್ನೈ ಆರಂಭಿಕ ಆಘಾತ ಅನುಭವಿಸಿತ್ತು. ತಂಡದ ಮೊತ್ತ 6 ರನ್‌ ಆಗುವಷ್ಟರಲ್ಲಿ ಎಂ.ಎಸ್.‌ ಧೋನಿ ಪಡೆಯಆರಂಭಿಕರಿಬ್ಬರೂ ಪೆವಿಲಿಯನ್‌ ಸೇರಿಕೊಂಡಿದ್ದರು. ಈ ವೇಳೆ ಜೊತೆಯಾದರಾಯುಡು ಹಾಗೂ ಪ್ಲೆಸಿ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 115 ರನ್ ಸೇರಿಸಿದರು.

48 ಎಸೆತಗಳನ್ನು ಎದುರಿಸಿದರಾಯುಡು 6 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ 71 ರನ್‌ ಬಾರಿಸಿದರು. ಇದರೊಂದಿಗೆ ಈ ಬಾರಿ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಗಳಿಸಿದ ಆಟಗಾರ ಎಂಬ ಶ್ರೇಯಕ್ಕೂ ಭಾಜನರಾದರು.

ಕೊನೆವರೆಗೂ ಆಡಿದ ಪ್ಲೆಸಿ 58 ರನ್‌ ಗಳಿಸಿ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಚೆನ್ನೈ 19.2 ಓವರ್‌ಗಳಲ್ಲಿ 166 ರನ್‌ ಗಳಿಸಿ ಜಯದ ನಗು ಬೀರಿತು.

ಮುಂಬೈ ಪರ ಟ್ರೆಂಟ್‌ ಬೌಲ್ಟ್‌, ಜೇಮ್ಸ್‌ ಪ್ಯಾಟಿನ್ಸನ್‌, ಕೃಣಾಲ್‌ ಪಾಂಡ್ಯ,ಜಸ್‌ಪ್ರೀತ್‌ ಬೂಮ್ರಾ ಹಾಗೂ ರಾಹುಲ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಭರವಸೆಯ ವೇಗಿಜಸ್‌ಪ್ರೀತ್‌ ಬೂಮ್ರಾ ದುಬಾರಿಯಾದರು. 4 ಓವರ್‌ ಎಸೆದ ಅವರು 43 ಬಿಟ್ಟುಕೊಟ್ಟರು.

ಧೋನಿ 100 ಕ್ಯಾಚ್‌ ಸಾಧನೆ
ಈ ಪಂದ್ಯಕ್ಕೂ ಮುನ್ನ ಐಪಿಎಲ್‌ನಲ್ಲಿ 98 ಕ್ಯಾಚ್‌ಗಳನ್ನು ಹಿಡಿದಿದ್ದ ಧೋನಿ, ಕೀರನ್‌ ಪೊಲಾರ್ಡ್ ಹಾಗೂ ಕೃಣಾಲ್‌ ಪಾಂಡ್ಯ ಕ್ಯಾಚ್‌ ಪಡೆಯುವ ಮೂಲಕ ನೂರರ ಸಾಧನೆ ಮಾಡಿದರು.

ಮುಂದಿನ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್‌ vs ಕಿಂಗ್ಸ್‌ ಇಲವೆನ್‌ ಪಂಜಾಬ್‌ (ಸೆ.20)
ಸಮಯ: ಸಂಜೆ 7.30

ತಂಡಗಳು
ಮುಂಬೈ ಇಂಡಿಯನ್ಸ್:
ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಆದಿತ್ಯ ತಾರೆ (ವಿಕೆಟ್‌ಕೀಪರ್), ಸೂರ್ಯಕುಮಾರ್ ಯಾದವ್‌,ಸೌರಭ್ ತಿವಾರಿ, ಜಸ್‌ಪ್ರೀತ್ ಬೂಮ್ರಾ,ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್,ಜೇಮ್ಸ್‌ ಪ್ಯಾಟಿನ್ಸನ್,ರಾಹುಲ್ ಚಾಹರ್, ಟ್ರೆಂಟ್‌ ಬೌಲ್ಟ್‌,ಕೃಣಾಲ್ ಪಾಂಡ್ಯ

ಚೆನ್ನೈ ಸೂಪರ್ ಕಿಂಗ್ಸ್‌:ಮಹೇಂದ್ರಸಿಂಗ್ ಧೋನಿ (ನಾಯಕ–ವಿಕೆಟ್‌ಕೀಪರ್), ಶೇನ್ ವಾಟ್ಸನ್, ಮುರುಳಿ ವಿಜಯ್‌,ಡ್ವೇನ್ ಬ್ರಾವೊ, ಫಾಫ್ ಡು ಪ್ಲೆಸಿ, ಅಂಬಟಿ ರಾಯುಡು,ಕೇದಾರ್ ಜಾಧವ್, ರವೀಂದ್ರ ಜಡೇಜ, ದೀಪಕ್ ಚಾಹರ್,ಸ್ಯಾಮ್ ಕರನ್, ಪಿಯೂಷ್ ಚಾವ್ಲಾ, ಲುಂಗಿ ಗಿಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT