ಬೆಂಗಳೂರು: ‘ಮರಳುನಾಡು‘ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತೊಮ್ಮೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಆಯೋಜನೆಗೆ ಸಿದ್ಧವಾಗಿದೆ.

ಹೋದ ಮೇ ತಿಂಗಳಲ್ಲಿ ಭಾರತದಲ್ಲಿಯೇ ನಡೆದಿದ್ದ ಟೂರ್ನಿಯ ಬಯೋಬಬಲ್ನಲ್ಲಿದ್ದ ಕೆಲವು ಆಟಗಾರರು, ಸಿಬ್ಬಂದಿಗೆ ಕೋವಿಡ್ ಖಚಿತವಾಗಿತ್ತು. ಅದಕ್ಕಾಗಿ ಟೂರ್ನಿಯನ್ನು ಮಧ್ಯದಲ್ಲಿಯೇ ನಿಲ್ಲಿಸಿ, ಮುಂದೂಡಲಾಗಿತ್ತು. ಇದೀಗ ಅದೇ ಟೂರ್ನಿಯ ಮುಂದುವರಿದ ಭಾಗದ ಪಂದ್ಯಗಳ ಆಯೋಜನೆಯು ಯುಎಇಯಲ್ಲಿ ನಡೆಯಲಿದೆ.

ಮೊದಲ ಹಂತದಲ್ಲಿ ಬೇರೆ ಬೇರೆ ತಂಡಗಳಲ್ಲಿರುವ ಕರ್ನಾಟಕದ ಆಟಗಾರರು ‘ಪಂದ್ಯವಿಜಯಿ’ಗಳಾಗಿ ಗಮನ ಸೆಳೆದಿದ್ದರು. ಇದೀಗ ಯುಎಇಯಲ್ಲಿಯೂ ತಮ್ಮ ಅಮೋಘ ಲಯವನ್ನು ಮುಂದುವರಿಸುವರೇ ಎಂಬ ಕುತೂಹಲ ಕ್ರಿಕೆಟ್ ವಲಯದಲ್ಲಿ ಮೂಡಿದೆ. ಈಗಾಗಲೇ ಟಿ20 ವಿಶ್ವಕಪ್ ಟೂರ್ನಿಯ ತಂಡವನ್ನು ಪ್ರಕಟಿಸಲಾಗಿದೆ.

ಅದರಲ್ಲಿ ಪಂಜಾಬ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ಮತ್ತು ಅವರ ಗೆಳೆಯ ಮಯಂಕ್ ಅಗರವಾಲ್ ಇಬ್ಬರ ಆಟವೂ ರಂಗೇರಿತ್ತು. ಮಯಂಕ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 99 ರನ್ ಹೊಡೆದಿದ್ದು ಕ್ರಿಕೆಟ್ಪ್ರಿಯರ ಕಣ್ಣುಗಳಿಗೆ ಕಟ್ಟಿದಂತಿದೆ. ರಾಹುಲ್ ಗಾಯಗೊಂಡ ಕಣಕ್ಕಿಳಿಯದ ಆ ಪಂದ್ಯದಲ್ಲಿ ಮಯಂಕ್ ಹಂಗಾಮಿ ನಾಯಕರಾಗಿದ್ದರು.

ಆಗ ಕೋವಿಡ್ನಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಬೆಂಗಳೂರು ಹುಡುಗ ದೇವದತ್ತ ಪಡಿಕ್ಕಲ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ್ದರು. ನಾಯಕ ವಿರಾಟ್ ಜೊತೆಗೆ ಮುರಿಯದ ಮೊದಲ ವಿಕೆಟ್ ಜೊತೆಯಾಟದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಆರಂಭಿಕ ಬ್ಯಾಟಿಂಗ್ ಸಮಸ್ಯೆಗೆ ಪರಿಹಾರವೂ ಆಗಿದ್ದರು. ಅದೇ ರೀತಿ ಮನೀಷ್ ಪಾಂಡೆ ಸನ್ರೈಸರ್ಸ್ ಹೈದರಾಬಾದ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ಗೆ ಬಲ ತುಂಬಿದವರು.

ಮಧ್ಯಮವೇಗಿ ಪ್ರಸಿದ್ಧ ಕೃಷ್ಣ ತಮ್ಮ ಸ್ವಿಂಗ್ ಅಸ್ತ್ರಗಳನ್ನು ಪರಿಣಾಮಕಾರಿಯಾಗಿ ಬಳಸಿದ್ದರು. ಈಚೆಗೆ ಇಂಗ್ಲೆಂಡ್ನಲ್ಲಿರುವ ಭಾರತ ಟೆಸ್ಟ್ ತಂಡದಲ್ಲಿಯೂ ಸ್ಥಾನ ಪಡೆದಿದ್ದರು.

ಗಮನ ಸೆಳೆದ ಕನ್ನಡಿಗರು (2021ರ ಮೊದಲ ಭಾಗ)

ಕೆ.ಎಲ್. ರಾಹುಲ್

ಬ್ಯಾಟ್ಸ್ಮನ್/ವಿಕೆಟ್ಕೀಪರ್

ಪಂಜಾಬ್ ಕಿಂಗ್ಸ್

ಪಂದ್ಯ; 7

ರನ್; 331

ಶ್ರೇಷ್ಠ; 92

ಅರ್ಧಶತಕ;3

ಸಿಕ್ಸರ್; 8

ಮಯಂಕ್ ಅಗರವಾಲ್

ಬ್ಯಾಟ್ಸ್ಮನ್

ಪಂಜಾಬ್ ಕಿಂಗ್ಸ್

ಪಂದ್ಯ; 7

ರನ್; 260

ಶ್ರೇಷ್ಠ; 99*

ಅರ್ಧಶತಕ;2

ಸಿಕ್ಸರ್; 11

ದೇವದತ್ತ ಪಡಿಕ್ಕಲ್

ಆರ್ಸಿಬಿ

ಎಡಗೈ ಬ್ಯಾಟ್ಸ್ಮನ್

ಪಂದ್ಯ; 6

ರನ್; 195

ಶ್ರೇಷ್ಠ; 101*

ಶತಕ; 1

ಸಿಕ್ಸರ್; 9

ಪ್ರಸಿದ್ಧ ಕೃಷ್ಣ

ಮಧ್ಯಮವೇಗಿ

ಕೆಕೆಆರ್

ಪಂದ್ಯ; 7

ಓವರ್; 26.3

ವಿಕೆಟ್; 8

ಶ್ರೇಷ್ಠ; 30ಕ್ಕೆ3

ಮನೀಷ್ ಪಾಂಡೆ

ಬ್ಯಾಟ್ಸ್ಮನ್

ಸನ್ರೈಸರ್ಸ್ ಹೈದರಾಬಾದ್

ಪಂದ್ಯ; 5

ರನ್; 193

ಶ್ರೇಷ್ಠ; 61*

ಅರ್ಧಶತಕ; 2

ಸಿಕ್ಸರ್; 8

ಮಾಹಿತಿ: ಐಪಿಎಲ್ ವೆಬ್ಸೈಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.