ಶುಕ್ರವಾರ, ಮೇ 7, 2021
18 °C

ಐಪಿಎಲ್ ಲೋಗೊ ಎಬಿ ಡಿಗಾಗಿ ರಹಸ್ಯವಾಗಿ ವಿನ್ಯಾಸಗೊಳಿಸಲಾಗಿದೆ: ಸೆಹ್ವಾಗ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಲೋಗೊವನ್ನು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಅವರಿಗಾಗಿ ರಹಸ್ಯವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಭಾರತದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ ಲೋಗೊ ಎಬಿಡಿ ವಿಲಿಯರ್ಸ್ ಅವರ ಹೊಡೆತದ ಭಂಗಿಯನ್ನು ಹೋಲುತ್ತದೆ. ಇದೇ ಕಾರಣಕ್ಕಾಗಿ ವೀರು ಇಂತಹದೊಂದು ಹೇಳಿಕೆಯನ್ನು ನೀಡಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನಲ್ಲಿ ಎಬಿ ಡಿ ನಿರ್ಣಾಯಕ ಪಾತ್ರ ವಹಿಸಿದ್ದರು. ಕೇವಲ 27 ಎಸೆತಗಳಲ್ಲಿ ಬಿರುಸಿನ 48 ರನ್ ಗಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದ್ದರು.

 

 

 

'ಮಿಸ್ಟರ್ 360 ಡಿಗ್ರಿ' ಖ್ಯಾತಿಯ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್, ಐಪಿಎಲ್‌ನ ಅತಿ ಜನಪ್ರಿಯ ಆಟಗಾರರಲ್ಲಿ ಓರ್ವರೆನಿಸಿದ್ದಾರೆ. ಆರ್‌ಸಿಬಿ ಪಾಲಿಗೆ ಸದಾ ಆಪತ್ಭಾಂದವ ಎನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸೆಹ್ವಾಗ್, ಸಂಕಲ್ಪ ಶಕ್ತಿ ಎಂಬುದು ಡಿ ವಿಲಿಯರ್ಸ್ ಪವರ್‌ಗೆ ಸಮಾನವಾಗಿದೆ. ಐಪಿಎಲ್ ಲೋಗೊವನ್ನು ಎಬಿ ಡಿ ಅವರಿಗಾಗಿ ರಹಸ್ಯವಾಗಿ ವಿನ್ಯಾಸಗೊಳಿಸಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. 'ಚಾಂಪಿಯನ್ ಆಟ' ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿರುವ ಹರ್ಷಲ್ ಪಟೇಲ್ ಬೌಲಿಂಗ್ ದಾಳಿಯನ್ನು ನೋಡುವುದು ಖುಷಿ ಕೊಟ್ಟಿದ್ದು, ಅತ್ಯುತ್ತಮ ಸ್ಪೆಲ್‌ ಎಂದು ವೀರು ಗುಣಗಾನ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು