ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs IRE 2ND T20I: ಭಾರತ ವಿರುದ್ಧ ಟಾಸ್ ಗೆದ್ದ ಐರ್ಲೆಂಡ್, ಬೌಲಿಂಗ್ ಆಯ್ಕೆ

Published 20 ಆಗಸ್ಟ್ 2023, 14:05 IST
Last Updated 20 ಆಗಸ್ಟ್ 2023, 14:05 IST
ಅಕ್ಷರ ಗಾತ್ರ

ಡಬ್ಲಿನ್, ಐರ್ಲೆಂಡ್: ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ– ಐರ್ಲೆಂಡ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ಭಾರತ ವಿರುದ್ಧ ಟಾಸ್‌ ಗೆದ್ದಿರುವ ಐರ್ಲೆಂಡ್, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಐರ್ಲೆಂಡ್ ಎದುರಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಫಿಟ್‌ನೆಸ್ ಮತ್ತು ನಾಯಕತ್ವದ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದಾರೆ.

ಹನ್ನೊಂದು ತಿಂಗಳುಗಳ ನಂತರ ಕ್ರಿಕೆಟ್ ಕಣಕ್ಕೆ ಮರಳಿದ ಬೂಮ್ರಾ ತಮ್ಮ ಚೊಚ್ಚಲ ನಾಯಕತ್ವದ ಸರಣಿಯನ್ನು ಗೆಲ್ಲುವ ಹೊಸ್ತಿಲಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ ಜಯಿಸುವ ವಿಶ್ವಾಸ ಭಾರತಕ್ಕೆ ಇದೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತವು 1–0ಯಿಂದ ಮುಂದಿದೆ.

ಶುಕ್ರವಾರ ನಡೆದ ಪ್ರಥಮ ಪಂದ್ಯದಲ್ಲಿ 139 ರನ್‌ಗಳಿಗೆ ಐರ್ಲೆಂಡ್ ಬಳಗವನ್ನು ಕಟ್ಟಿಹಾಕುವಲ್ಲಿ ಬೂಮ್ರಾ, ಪ್ರಸಿದ್ಧಕೃಷ್ಣ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ಯಶಸ್ವಿಯಾಗಿದ್ದರು. ಭಾರತದ ಇನಿಂಗ್ಸ್‌ ನಡೆಯುವ ಹೊತ್ತಿನಲ್ಲಿ ಮಳೆ ಸುರಿದ ಕಾರಣ ಡಕ್ವರ್ಥ್ ಲೂಯಿಸ್ ನಿಯಮ ಅನ್ವಯಿಸಲಾಯಿತು. ಬೂಮ್ರಾ ಬಳಗವು 2 ರನ್‌ ಅಂತರದಿಂದ ಜಯಿಸಿತ್ತು.

ತಂಡಗಳು ಇಂತಿವೆ...

ಭಾರತ: ಜಸ್‌ಪ್ರೀತ್ ಬೂಮ್ರಾ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕವಾಡ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯಿ.

ಐರ್ಲೆಂಡ್: ಆಂಡ್ರ್ಯೂ ಬಾಲ್ಬಿರ್ನಿ, ಪಾಲ್ ಸ್ಟಿರ್ಲಿಂಗ್ (ನಾಯಕ), ಲೋರ್ಕನ್ ಟಕರ್(ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್‌, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT