ಶನಿವಾರ, ಫೆಬ್ರವರಿ 29, 2020
19 °C

ರಣಜಿ ಟ್ರೋಫಿ: ಇಶಾಂತ್‌ ಶರ್ಮಾಗೆ ಗಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅನುಭವಿ ವೇಗದ ಬೌಲರ್‌ ಇಶಾಂತ್‌ ಶರ್ಮಾ ಅವರು ವಿದರ್ಭ ಎದುರಿನ ರಣಜಿ ಟ್ರೋಫಿ ಪಂದ್ಯದ ವೇಳೆ ಗಾಯಗೊಂಡಿದ್ದಾರೆ.

‘ಎರಡನೇ ಇನಿಂಗ್ಸ್‌ನ ಐದನೇ ಓವರ್‌ ಬೌಲ್‌ ಮಾಡುವಾಗ ಇಶಾಂತ್‌ ಆಯಾತಪ್ಪಿ ಬಿದ್ದಿದ್ದಾರೆ. ಹೀಗಾಗಿ ಪಾದ ಉಳುಕಿದ್ದು ಬಳಿಕ ಊದಿಕೊಂಡಿದೆ. ಎಂ.ಆರ್‌.ಐ ಸ್ಕ್ಯಾನ್‌ ಮಾಡಿಸಲಾಗಿದೆ. ಅದರ ವರದಿ ಬಂದ ಬಳಿಕ ಗಾಯವು ಗಂಭೀರ ಸ್ವರೂಪದ್ದೊ ಅಲ್ಲವೊ ಎಂಬುದು ತಿಳಿಯಲಿದೆ’ ಎಂದು ದೆಹಲಿ ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.

‘ಗಾಯದ ಸ್ವರೂಪ ಗಂಭೀರವಾಗಿದ್ದಲ್ಲಿ ಇಶಾಂತ್‌ ಅವರು ಬೆಂಗಳೂರಿನಲ್ಲಿರುವ ಎನ್‌ಸಿಎಗೆ ಹೋಗಬೇಕಾಗುತ್ತದೆ. ಅಲ್ಲಿ ಪುನಶ್ಚೇತನಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುತ್ತದೆ. ಹಾಗೇನಾದರೂ ಆದರೆ ನ್ಯೂಜಿಲೆಂಡ್‌ ಎದುರಿನ ಟೆಸ್ಟ್‌ ಸರಣಿಗೆ ಅಲಭ್ಯರಾಗಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ನ್ಯೂಜಿಲೆಂಡ್‌ ಎದುರಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಫೆಬ್ರುವರಿ 21ರಿಂದ ಮಾರ್ಚ್‌ 4ರವರೆಗೆ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು