ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂದ್ಯದ ದಿನ ಕೇವಲ 40 ನಿಮಿಷ ನಿದ್ರೆ; ಆದರೂ, ತಂಡಕ್ಕಾಗಿ ಆಡಿದೆ: ಇಶಾಂತ್ ಶರ್ಮಾ

Last Updated 22 ಫೆಬ್ರುವರಿ 2020, 12:39 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್:ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಪ್ರಮುಖ ಮೂರು ವಿಕೆಟ್‌ ಪಡೆದು ಭಾರತಕ್ಕೆನೆರವಾದ ವೇಗಿ ಇಶಾಂತ್‌ ಶರ್ಮಾ, ಸರಿಯಾಗಿ ನಿದ್ರಿಸಲು ಸಾಧ್ಯವಾಗದ ಕಾರಣ ಯೋಜನೆಯಂತೆ ಆಡಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಫಿಟ್‌ನೆಸ್‌ ಪರೀಕ್ಷೆ ವರದಿಯನ್ನು ತಡವಾಗಿ ಪಡೆದು 76 ಗಂಟೆಗಳ ಹಿಂದಷ್ಟೇ ನ್ಯೂಜಿಲೆಂಡ್‌ಗೆ ಬಂದಿಳಿದ ಇಶಾಂತ್‌ ಶರ್ಮಾ, ಪಂದ್ಯದ ಹಿಂದಿನ ದಿನ ಗುರುವಾರ ರಾತ್ರಿ ಕೇವಲ ಮೂರು ಗಂಟೆ ಮತ್ತು ಪಂದ್ಯದ ದಿನ ಶುಕ್ರವಾರ ರಾತ್ರಿ ಕೇವಲ 40 ನಿಮಿಷ ಮಾತ್ರವೇ ನಿದ್ರಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

ಜನವರಿಯಲ್ಲಿ ರಣಜಿ ಕ್ರಿಕೆಟ್‌ ಪಂದ್ಯದ ವೇಳೆ ಗಾಯಗೊಂಡಿದ್ದ ಇಶಾಂತ್‌ ಅವರಿಗೆಆರು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿತ್ತು.ಆದಾಗ್ಯೂ ಅವರು 16 ಮಂದಿಯನ್ನೊಳಗೊಂಡ ಭಾರತ ಟೆಸ್ಟ್‌ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಹೀಗಾಗಿ ಅವರುಫಿಟ್‌ನೆಸ್‌ ಪರೀಕ್ಷೆಯಲ್ಲಿ ಪಾಸಾಗದೆ ಟೆಸ್ಟ್‌ ತಂಡದಲ್ಲಿ ಆಡುವುದು ಅನುಮಾನವಿತ್ತು.

ಆದರೆ, ನಿಗದಿಗಿಂತ ಬೇಗನೆ ಗುಣಮುಖರಾದ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಫಿಟ್‌ನೆಸ್‌ ಸಾಬೀತುಪಡಿಸಿ ನ್ಯೂಜಿಲೆಂಡ್‌ಗೆ ಬಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ‘ಕಳೆದ ಎರಡು ದಿನಗಳಿಂದ ಸರಿಯಾಗಿ ನಿದ್ರಿಸಲು ಸಾಧ್ಯವಾಗಿಲ್ಲ. ಈ ದಿನವೂ ಸಾಕಷ್ಟು ಶ್ರಮಪಟ್ಟೆ. ನಾನು ಅಂದುಕೊಂಡಂತೆ ಬೌಲಿಂಗ್‌ ಮಾಡಲು ಸಾಧ್ಯವಾಗಿಲ್ಲ. ತಂಡವು ಆಡುವಂತೆ ನನಗೆ ಸೂಚಿಸಿದ್ದರಿಂದ ಆಡಿದೆ. ತಂಡಕ್ಕಾಗಿ ಏನುಬೇಕಾದರೂ ಮಾಡಲು ಸಿದ್ಧ’ ಎಂದು ಹೇಳಿದ್ದಾರೆ.

‘ನಿದ್ರೆ ಮಾತ್ರವಲ್ಲ, ನನ್ನ ಆಟದ ಹಾಗೂ ದೇಹದ ಸ್ಥಿತಿ ಬಗ್ಗೆಯೂ ನನಗೆ ಸಮಾಧಾನವಿಲ್ಲ. ಕಳೆದ ರಾತ್ರಿ (ಶುಕ್ರವಾರ) ಕೇವಲ 40 ನಿಮಿಷವಷ್ಟೇ ಮಲಗಲು ಸಾಧ್ಯವಾಯಿತು. ಪಂದ್ಯದ ಹಿಂದಿನ ರಾತ್ರಿ (ಗುರುವಾರ)ಕೇವಲ ಮೂರು ಗಂಟೆ ನಿದ್ರಿಸಿದ್ದೆ’ ಎಂದು ಹೇಳಿಕೊಂಡಿದ್ದಾರೆ.

‘ಎಷ್ಟರ ಮಟ್ಟಿಗೆ ಗಾಯದಿಂದ ಚೇತರಿಕೊಳ್ಳುತ್ತೇವೆಯೋ, ಅಂಗಳದಲ್ಲಿಯೂ ಅಷ್ಟೇಉತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತದೆ. ಚೇತರಿಸಿಕೊಳ್ಳಲುನಿದ್ರೆಗಿಂತ ಹೆಚ್ಚಾಗಿ ನೆರವಾಗಬಲ್ಲದು ಯಾವುದೂಇಲ್ಲ.ಗಾಢ ನಿದ್ರೆಯು, ಮೈದಾನದಲ್ಲಿನಮ್ಮ ದೇಹ ಪ್ರತಿಕ್ರಿಯಿಸುವ ರೀತಿಯನ್ನು ಅತ್ಯುತ್ತಮಗೊಳಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಗುರುವಾರದಿಂದ ಆರಂಭವಾಗಿದೆ.

ಕಿವೀಸ್‌ಗೆ ಇನಿಂಗ್ಸ್‌ ಮುನ್ನಡೆ
ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮಾಡಿದ ಭಾರತ ಕೇವಲ 165ರನ್‌ಗಳಿಗೆ ಆಲೌಟ್‌ ಆಗಿತ್ತು. ಈಮೊತ್ತದೆದರು ಇನಿಂಗ್ಸ್‌ ಆರಂಭಿಸಿರುವ ಆತಿಥೇಯ ನ್ಯೂಜಿಲೆಂಡ್‌,2ನೇ ದಿನದಾಟದ ಅಂತ್ಯಕ್ಕೆ 71.1 ಓವರ್‌ಗಳಲ್ಲಿ ಐದುವಿಕೆಟ್‌ ಕಳೆದುಕೊಂಡು 216 ರನ್‌ ಗಳಿಸಿದೆ.

ಹೀಗಾಗಿ ಕೇನ್‌ ವಿಲಿಯಮ್ಸನ್‌ ಪಡೆಮೊದಲ ಇನಿಂಗ್ಸ್‌ನಲ್ಲಿ 51 ರನ್‌ಗಳ ಮುನ್ನಡೆ ಸಾಧಿಸಿದೆ.ನಾಯಕ ವಿಲಿಯಮ್ಸ್‌ನ್‌ ಅರ್ಧಶತಕ (89) ಗಳಿಸಿ ನೆರವಾದರು.ಸದ್ಯ 14 ರನ್‌ ಗಳಿಸಿರುವ ಹೆನ್ರಿ ನಿಕೋಲಸ್‌ ಮತ್ತು 4 ರನ್ ಹೊಡೆದಿರುವ ಕಾಲಿನ್‌ ಡಿ ಗ್ರಾಂಡ್‌ ಹೋಮ್‌ ಕ್ರೀಸ್‌ನಲ್ಲಿದ್ದಾರೆ.

ಭಾರತ ಪರ 15 ಓವರ್‌ ಬೌಲಿಂಗ್ ಮಾಡಿದಇಶಾಂತ್ ಶರ್ಮಾ, 31 ರನ್‌ ನೀಡಿ 3 ವಿಕೆಟ್ ಪಡೆದರು.ಮೊಹಮದ್‌ ಶಮಿ ಮತ್ತು ರವಿಚಂದ್ರನ್‌ ಅಶ್ವಿನ್‌ ತಲಾ ಒಂದೊಂದು ವಿಕೆಟ್‌ ಉರುಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT