ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ವಿರುದ್ಧ ಕೊಹ್ಲಿ ಶತಕ ಸಂಭ್ರಮ: ಸಚಿನ್ – ಸೆಹ್ವಾಗ್, ಎಬಿಡಿ– ಯುವಿ ಮೆಚ್ಚುಗೆ

Published 19 ಮೇ 2023, 9:57 IST
Last Updated 19 ಮೇ 2023, 9:57 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್‌) ಗುರುವಾರ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಆರಂಭಿಕ ಬ್ಯಾಟರ್ ವಿರಾಟ್‌ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದರು.

ಕೊಹ್ಲಿ ಶತಕ ಗಳಿಸಿದರ ಬಗ್ಗೆ ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರರಾದ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಯುವರಾಜ್‌ ಸಿಂಗ್, ಸುರೇಶ್ ರೈನಾ, ಸೇರಿದಂತೆ ವಿದೇಶ ಕ್ರಿಕೆಟಿಗರು ಶ್ಲಾಘಿಸಿದ್ದಾರೆ.

‘ವಿರಾಟ್ ಕವರ್ ಡ್ರೈವ್ ಆಡಿದಾಗ ಮೊದಲ ಬಾಲ್‌ನಿಂದಲೇ ಇದು ವಿರಾಟ್‌ನ ದಿನವಾಗಿದೆ ಎಂಬುದು ಸ್ಪಷ್ಟವಾಗಿದೆ. ವಿರಾಟ್ ಮತ್ತು ಫಫ್‌ ಡುಪ್ಲೆಸಿ ಇಬ್ಬರೂ ಸಂಪೂರ್ಣ ನಿಯಂತ್ರಣ ಸಾಧಿಸಿದರು. ಈ ಜೋಡಿ ದೊಡ್ಡ ಹೊಡೆತಗಳನ್ನು ಆಡಿದ್ದು ಮಾತ್ರವಲ್ಲದೆ ವಿಕೆಟ್‌ಗಳ ನಡುವೆ ಉತ್ತಮವಾಗಿ ಓಡಿ ಯಶಸ್ವಿಯಾದರು. ಅವರಿಬ್ಬರ ಜೊತೆಯಾಟಕ್ಕೆ 186 ರನ್‌ಗಳ ಗುರಿ ದೊಡ್ಡ ಮೊತ್ತವಾಗಿರಲಿಲ್ಲ’ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

‘ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 6ನೇ ಶತಕ ಗಳಿಸುವ ಮೂಲಕ ಅತ್ಯುತ್ತಮ ಆಟವಾಡಿದ್ದಾರೆ. ಫಫ್‌ಗೂ ಉತ್ತಮ ಸೀಸನ್ ಇದಾಗಿದೆ’ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

‘ಕಿಂಗ್ ಫಾರ್ ಆಲ್ ರೈಸ್ ಎಂತಹ ಅದ್ಭುತ ಇನ್ನಿಂಗ್ಸ್ ಶತಕ ವೀಕ್ಷಿಸಲು ಒಂದು ಸತ್ಕಾರ’ ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಒಟ್ಟಾರೆ ಐಪಿಎಲ್‌ನಲ್ಲಿ ಆರನೇ ಶತಕ ಗಳಿಸುವ ಮೂಲಕ ಹೆಚ್ಚು ಶತಕ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿದರು. ಹೈದರಾಬಾದ್‌ ವಿರುದ್ಧ ಕೊಹ್ಲಿ 63 ಎಸೆತಗಳಲ್ಲಿ 100 ರನ್ ಗಳಿಸಿದರು. ಜತೆಗೆ, ಡುಪ್ಲೆಸಿ ಜೊತೆಗೂಡಿ 172 ರನ್‌ಗಳ ದಾಖಲೆಯ ಆರಂಭಿಕ ಜೊತೆಯಾಟವಾಡಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ ತಂಡ, ಹೆನ್ರಿಚ್ ಕ್ಲಾಸನ್ (104; 51ಎ) ಅವರ ಬಿರುಸಿನ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 186 ರನ್ ಗಳಿಸಿತು.

ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಆರ್‌ಸಿಬಿ 19.2 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ ಗೆಲುವಿನ ನಗೆ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT