ಸೂರತ್: ಜಮ್ಮು ಮತ್ತು ಕಾಶ್ಮೀರ 16 ವರ್ಷದೊಳಗಿನವರ ಕ್ರಿಕೆಟ್ ತಂಡವು ಪ್ಲೇಟ್ ವಿಭಾಗದ ವಿಜಯ್ ಮರ್ಚಂಟ್ ಟ್ರೋಫಿ ಜಯಿಸಿದೆ. ಇದರೊಂದಿಗೆ ಕಣಿವೆ ರಾಜ್ಯಕ್ಕೆ ಮೊದಲ ಬಾರಿಗೆ ಬಿಸಿಸಿಐ ಟ್ರೋಫಿ ಒಲಿದಿದೆ.

ಫೈನಲ್ ಪಂದ್ಯದ ಮೂರನೇ ದಿನವಾದ ಮಂಗಳವಾರ ಕಾಶ್ಮೀರ ತಂಡವು 182 ರನ್ಗಳಿಂದ ಮಿಜೋರಾಂ ವಿರುದ್ಧ ಜಯಿಸಿತು. ಪಂದ್ಯದಲ್ಲಿ ಇನ್ನೂ ಒಂದು ದಿನ ಬಾಕಿಯಿರುವಂತೆಯೇ ಗೆದ್ದಿತು.

ಮೊದಲ ಇನಿಂಗ್ಸ್ನಲ್ಲಿ ಮಿಜೋರಾಂ 100 ರನ್ ಗಳಿಸಿ ಕುಸಿದಿತ್ತು. ಅದಕ್ಕುತ್ತರವಾಗಿ ಕಾಶ್ಮೀರ ತಂಡವು 95.1 ಓವರ್ಗಳಲ್ಲಿ 400 ರನ್ ಗಳಿಸಿತ್ತು. 300 ರನ್ ಮುನ್ನಡೆ ಸಾಧಿಸಿತ್ತು. ತಂಡದ ಸಮಾಗೆ ಖಜುರಿಯಾ 174 ಎಸೆತಗಳಲ್ಲಿ 102 ರನ್ ಗಳಿಸಿದರು. ಅವರು 15 ಬೌಂಡರಿ ಮತ್ತು ಆರು ಸಿಕ್ಸರ್ ಹೊಡೆದರು.

ಎರಡನೇ ಇನಿಂಗ್ಸ್ನಲ್ಲಿ ಮಿಜೋರಾಂ ತಂಡವು 42.4 ಓವರ್ಗಳಲ್ಲಿ 118 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಸನಿಲ್ ಸಿಂಗ್ (15ಕ್ಕೆ3), ಜಸ್ಕರಣ್ ಸಿಂಗ್ (8ಕ್ಕೆ2) ಮತ್ತು ಹಮ್ಮದ್ ಫಿರ್ದೋಸ್ (22ಕ್ಕೆ2) ಉತ್ತಮ ಬೌಲಿಂಗ್ ಮಾಡಿದರು.

ಕಣಿವೆ ರಾಜ್ಯದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ತಂಡವನ್ನು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.