ಟೋಕಿಯೊ:ಜಪಾನ್ ಒಲಿಂಪಿಕ್ ಸಮಿತಿಯ ಉಪಾಧ್ಯಕ್ಷ ಕೊಜೊ ತಾಶಿಮ, ಅವರು ತಮಗೆಕೊರೊನಾ ವೈರಸ್‌ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

‘ಮಾದರಿ ಪರೀಕ್ಷೆಯಲ್ಲಿ ನನಗೆಸೋಂಕು ಇರುವುದು ಇಂದು ಪತ್ತೆಯಾಗಿದೆ ಎಂದು ತಾಶಿಮಾ ಹೇಳಿದ್ದಾರೆ’ ಎಂದುಜಪಾನ್ ಫುಟ್‌ಬಾಲ್‌ಅಸೋಸಿಯೇಷನ್ ಪ್ರಕಟಿಸಿದೆ.

ಅಂತರರಾಷ್ಟ್ರೀಯ ಫುಟ್‌ಬಾಲ್ ಅಸೋಸಿಯೇಷನ್‌ನ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು, ಫೆಬ್ರುವರಿ 28ರ ನಂತರ ಬೆಲ್‌ಫಾಸ್ಟ್ (ಉತ್ತರ ಐರ್ಲೆಂಡ್)ಸೇರಿದಂತೆ ವಿವಿಧ ದೇಶಗಳಿಗೆ ಪ್ರವಾಸ ಕೈಗೊಂಡಿದ್ದೆ ಎಂದೂ ಅವರು ಹೇಳಿದ್ದಾರೆ.

2023ರಲ್ಲಿ ನಡೆಯಬೇಕಿರುವ ಮಹಿಳೆಯರ ಫುಟ್‌ಬಾಲ್ ವಿಶ್ವಕಪ್‌ನ ಆತಿಥ್ಯ ವಹಿಸುವ ಸಲುವಾಗಿನೆದರ್‌ಲೆಂಡ್‌ನ ಆ್ಯಮಸ್ಟರ್‌ಡ್ಯಾಂನಲ್ಲಿ ಯುರೋಪ್ ಫುಟ್‌ಬಾಲ್ ಯೂನಿಯನ್ ಸಭೆ ಮಾರ್ಚ್ 3ರಂದುನಡೆದಿತ್ತು. ಅದರಲ್ಲಿ ಜಪಾನ್ ಪ್ರತಿನಿಧಿಯಾಗಿ ಭಾಗವಹಿಸಲು ಮಾರ್ಚ್ 2ರಂದುತೆರಳಿದ್ದರು.

‘ಮಾರ್ಚ್ ಮೊದಲ ವಾರ ಆ್ಯಮ್‌ಸ್ಟರ್‌ಡ್ಯಾಂ ಹಾಗೂ ಯೂರೋಪ್‌ನಲ್ಲಿದ್ದೆ. ಕೊರೊನಾ ಸೋಂಕಿನ ಭೀತಿ ಆಗ ಈಗಿನಷ್ಟು ಇರಲಿಲ್ಲ. ಪ್ರತಿಯೊಬ್ಬರುಸಹಜವಾಗಿಯೇ ಆಲಿಂಗನ, ಕೈಕುಲುಕುವುದನ್ನು ಮಾಡುತ್ತಿದ್ದರು’ಎಂದಿದ್ದಾರೆ.

ಜಗತ್ತಿನಾದ್ಯಂತ ಸುಮಾರು 1.7 ಲಕ್ಷ ಜನರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಇದರಿಂದಾಗಿ 7 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.