ಶನಿವಾರ, ಮಾರ್ಚ್ 6, 2021
32 °C

ಮ್ಯಾಕ್ಸ್ ವೆಲ್–ಭಾರತದ ವಿನಿ ನಿಶ್ಚಿತಾರ್ಥಕ್ಕೆ ವರ್ಷ: ಕಾಲೆಳೆದ ಜಿಮ್ಮಿ ನೀಶಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ಷದ ಹಿಂದಷ್ಟೇ ಭಾರತದ ಫಾರ್ಮಸಿಸ್ಟ್ ವಿನಿ ರಾಮನ್ ಜೊತೆ ನಿಶ್ಚಿತಾರ್ಥದ ಘೋಷಣೆ ಮಾಡಿದ್ದ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಮ್ಸ್‌ ಮನ್ ಗ್ಲೆನ್ ಮ್ಯಾಕ್ಸ್ ವೆಲ್, ವರ್ಷದ ಹಿಂದಿನ ಅದೇ ಚಿತ್ರವನ್ನು ಇನ್‌ಸ್ಟಾಗ್ರಾಮಲ್ಲಿ ಶೇರ್ ಮಾಡಿದ್ದು,  ವಯಸ್ಸಾದ ಬಳಿಕ ಲೇಸಿಯಾಗಿ ನಿನ್ನ ಜೊತೆ ಕಳೆಯಲು ಇಷ್ಟವಿಲ್ಲ. ಐ ಲವ್ ಯೂ ಎಂದು ಬರೆದುಕೊಂಡಿದ್ದಾರೆ.  ಇದಕ್ಕೆ ಪ್ರತಿಕ್ರಿಯಿಸಿರುವ ವಿನಿ, ನೀನು ಅಷ್ಟೊಂದು ಕೆಟ್ಟವನಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಆದರೆ, ಇಬರಿಬ್ಬರ ಮಧ್ಯೆ ಮೂಗು ತೂರಿಸಿದ ಕ್ರಿಕೆಟಿಗ ಜಿಮ್ಮಿ ನೀಶಮ್, "ನಿಮಗಿನ್ನೂ ವಯಸ್ಸಾಗಿಲ್ಲ ಮತ್ತು ಸೋಮಾರಿಯಾಗಿಲ್ಲವೇ?" ಎಂದು ಕಾಮೆಂಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ.

ಐಪಿಎಲ್ 2020ರಲ್ಲಿ ಕಿಂಗ್‌ ಇಲೆವೆನ್ ಪಂಜಾಬ್ ತಂಡದಲ್ಲಿ ಸಹ ಆಟಗಾರರಾಗಿದ್ದ ನ್ಯೂಜಿಲೆಂಡ್ ಕ್ರಿಕೆಟಿಗ ಜಿಮ್ಮಿ ನೀಶಮ್, ಮ್ಯಾಕ್ಸ್ ವೆಲ್ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ.

ಕಳೆದ ಅಕ್ಟೋಬರ್‌ನಲ್ಲಿ ಮ್ಯಾಕ್ಸ್‌ವೆಲ್ ಅವರ ಜನ್ಮದಿನದ ಶುಭಾಶಯಗಳನ್ನು ಕೋರಿದ ಪೋಸ್ಟ್‌ನಲ್ಲಿ, ವಿನಿ ರಾಮನ್ "ಜನ್ಮದಿನದ ಶುಭಾಶಯಗಳು @ gmaxi_32 ನನ್ನ ನೆಚ್ಚಿನ ಫಿಯಾನ್ಸಿ, ನಾನು ಜಿಮ್ಮಿ ನೀಶಮ್‌ಗಿಂತಲೂ ಹೆಚ್ಚು ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದು ನೀಶಮ್ ಕಾಲೆಳೆದಿದ್ದರು.

ಕಳೆದ ವರ್ಷ ಯುಎಇಯಲ್ಲಿ ನಡೆದ ಐಪಿಎಲ್ ಸರಣಿಯಲ್ಲಿ ನಿರಾಶಾದಾಯಕ ಪ್ರದರ್ಶನದ ಹೊರತಾಗಿಯೂ, ಮ್ಯಾಕ್ಸ್ ವೆಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ₹ 14.25 ಕೋಟಿಗೆ ಖರೀದಿಸಿದ್ದಾರೆ.

ಪಂಜಾಬ್ ಕಿಂಗ್ಸ್ ಬಿಡುಗಡೆ ಮಾಡಿದ ನ್ಯೂಜಿಲೆಂಡ್ ಆಲ್‌ರೌಂಡರ್ ನೀಶಮ್ ಅವರನ್ನು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು