ಆತಿಥೇಯ ತಂಡದ ಜೇಸನ್‌, ಜೊಫ್ರಾಗೆ ದಂಡ

ಮಂಗಳವಾರ, ಜೂನ್ 25, 2019
30 °C

ಆತಿಥೇಯ ತಂಡದ ಜೇಸನ್‌, ಜೊಫ್ರಾಗೆ ದಂಡ

Published:
Updated:
Prajavani

ಲಂಡನ್ (ಎಎಫ್‌ಪಿ): ಆತಿಥೇಯ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ ಜೇಸನ್ ರಾಯ್ ಮತ್ತು ಮಧ್ಯಮ ವೇಗಿ ಜೊಫ್ರಾ ಆರ್ಚರ್ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ದಂಡ ವಿಧಿಸಿದೆ.

ಟ್ರೆಂಟ್ ಬ್ರಿಜ್‌ನಲ್ಲಿ ಸೋಮವಾರ ನಡೆದಿದ್ದ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಈ ‘ಶಿಕ್ಷೆ’ ವಿಧಿಸಲಾಗಿದ್ದು ಪಂದ್ಯದ ಸಂಭಾವನೆಯ 15 ಶೇಕಡಾ ಮೊತ್ತವನ್ನು ಪಡೆಯಲು ನಿರ್ಧರಿಸಲಾಗಿದೆ.

ಪಾಕಿಸ್ತಾನ ಇನಿಂಗ್ಸ್ ವೇಳೆ ತಂಡದ ಸಹ ಆಟಗಾರ ‘ಮಿಸ್‌ಫೀಲ್ಡ್‌’ ಮಾಡಿದ ಸಂದರ್ಭದಲ್ಲಿ ಅಸಭ್ಯ ಪದ ಬಳಸಿದ್ದಕ್ಕಾಗಿ ರಾಯ್ ಮೇಲೆ ಮತ್ತು ಅಂಪೈರ್ ವೈಡ್ ತೀರ್ಪು ನೀಡಿದ್ದಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದ್ದಕ್ಕಾಗಿ ಆರ್ಚರ್ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ನಿಗದಿತ ಅವಧಿಯಲ್ಲಿ ಬೌಲಿಂಗ್ ಪೂರ್ತಿಗೊಳಸದ್ದಕ್ಕೆ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮ್ಮದ್‌ ಅವರಿಂದ ಪಂದ್ಯದ ಸಂಭಾವನೆಯ 20 ಶೇಕಡಾ ಮತ್ತು ಇತರ ಆಟಗಾರರಿಂದ 10 ಶೇಕಡಾ ಮೊತ್ತವನ್ನು ಪಡೆಯಲು ನಿರ್ಧರಿಸಲಾಗಿದೆ.

ಪಾಕ್‌ ಜಯಭೇರಿ: ಪಂದ್ಯದಲ್ಲಿ ಆತಿಥೇಯ ಮತ್ತು ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 14 ರನ್‌ಗಳಿಂದ ಗೆದ್ದಿತ್ತು. 349 ರನ್‌ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್‌ 9ಕ್ಕೆ 334 ರನ್‌ ಗಳಿಸಿ ಸೋಲೊಪ್ಪಿಕೊಂಡಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !