ಬುಧವಾರ, ಜೂನ್ 29, 2022
23 °C

IPL 2022: ಜೋಸ್ ಬಟ್ಲರ್ 700 ರನ್ ಸಾಧನೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್, 700 ರನ್‌ಗಳ ಸಾಧನೆ ಮಾಡಿದ್ದಾರೆ.

ಈ ಮೂಲಕ ಐಪಿಎಲ್ ಆವೃತ್ತಿಯೊಂದರಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ ಆರನೇ ಬ್ಯಾಟರ್ ಎನಿಸಿದ್ದಾರೆ.

ಇದನ್ನೂ ಓದಿ: 

ಪ್ಲೇ-ಆಫ್ ಹಂತದಲ್ಲಿ ಮಂಗಳವಾರ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲೂ ಬಟ್ಲರ್, 56 ಎಸೆತಗಳಲ್ಲಿ 89 ರನ್ ಗಳಿಸಿದ್ದರು. ಆದರೂ ರಾಜಸ್ಥಾನ್ ತಂಡವು ಸೋಲಿಗೆ ಶರಣಾಗಿತ್ತು.

ಟ್ವೆಂಟಿ-20 ಕ್ರಿಕೆಟ್‌ನಲ್ಲಿ 8,000 ರನ್‌‌ ಗಳಿಸಿದ ಇಂಗ್ಲೆಂಡ್‌ನ ಮೂರನೇ ಆಟಗಾರ ಎಂಬ ಖ್ಯಾತಿಗೂ ಬಟ್ಲರ್ ಪಾತ್ರರಾಗಿದ್ದಾರೆ. ಅಲೆಕ್ಸ್ ಹೇಲ್ಸ್ ಹಾಗೂ ಲ್ಯೂಕ್ ರೈಟ್ ಬಳಿಕ ಬಟ್ಲರ್ ಈ ಸಾಧನೆ ಮಾಡಿದ್ದಾರೆ.

 

 

 

ಐಪಿಎಲ್ 2022ರಲ್ಲಿ ಇದುವರೆಗೆ ಆಡಿರುವ 15 ಪಂದ್ಯಗಳಲ್ಲಿ 51.29ರ ಸರಾಸರಿಯಲ್ಲಿ ಬಟ್ಲರ್, ಒಟ್ಟು 718 ರನ್ ಗಳಿಸಿದ್ದಾರೆ. ಅಲ್ಲದೆ 148.34ರ ಸ್ಟ್ರೈಕ್‌ರೇಟ್ ಕಾಯ್ದುಕೊಂಡಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ನಾಲ್ಕು ಅರ್ಧಶತಕಗಳು ಸೇರಿವೆ.

 

ಐಪಿಎಲ್ 15ರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಆಟಗಾರರ ಪಟ್ಟಿಯಲ್ಲಿ ಮುನ್ನಡೆಯಲ್ಲಿರುವ ಬಟ್ಲರ್, ಈವರೆಗೆ 39 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು