ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೇತನ್, ನಿಕಿನ್ ಅಬ್ಬರದ ಶತಕ; ನಮಿಬಿಯಾ ವಿರುದ್ಧ ಕರ್ನಾಟಕಕ್ಕೆ ಜಯ

Published : 7 ಜೂನ್ 2023, 15:46 IST
Last Updated : 7 ಜೂನ್ 2023, 15:46 IST
ಫಾಲೋ ಮಾಡಿ
Comments

ವಿಂದೋಕ್, ನಮಿಬಿಯಾ: ಯುವಪ್ರತಿಭೆಗಳಾದ ನಿಕಿನ್ ಜೋಸ್ ಮತ್ತು ಎಲ್‌.ಆರ್. ಚೇತನ್ ಅವರ ಅಬ್ಬರದ ಶತಕಗಳಿಂದ ಕರ್ನಾಟಕ ತಂಡವು ನಮಿಬಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು.

ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಮಿಬಿಯಾ ತಂಡವು 45.1 ಓವರ್‌ಗಳಲ್ಲಿ 226  ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಕರ್ನಾಟಕ ತಂಡದ ನಾಯಕ ಆರ್. ಸಮರ್ಥ್ ಮೂರು ರನ್‌ ಗಳಿಸಿ ಔಟಾದರು.

ಆದರೆ, ಚೇತನ್ (ಔಟಾಗದೆ 120, 105ಎ, 4X16, 6X2) ಹಾಗೂ ನಿಕಿನ್ (ಅಜೇಯ 101, 91ಎ, 4X6, 6X4) ಅವರ ಅಬ್ಬರದ ಶತಕದಿಂದಾಗಿ ತಂಡವು 33.4 ಓವರ್‌ಗಳಲ್ಲಿ ಗುರಿ ಸಾಧಿಸಿತು. 9 ವಿಕೆಟ್‌ಗಳಿಂದ ಗೆದ್ದಿತು. ಐದು ಪಂದ್ಯಗಳ ಸರಣಿಯಲ್ಲಿ 2–1ರ ಮುನ್ನಡೆ ಸಾಧಿಸಿತು.  ಚೇತನ್ ಮತ್ತು ನಿಕಿನ್ ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 203 ರನ್‌ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ನಮಿಬಿಯಾ: 45.1 ಓವರ್‌ಗಳಲ್ಲಿ 226 (ಝೇನ್ ಗ್ರೀನ್ 65, ಗೆರಾರ್ಡ್ ರೆನ್ಸ್‌ಬರ್ಗ್ 24, ಬರ್ನಾಡ್ ಶೋಲ್ಜ್ 59, ವೈಶಾಖ ವಿಜಯಕುಮಾರ್ 49ಕ್ಕೆ2, ಶುಭಾಂಗ್ ಹೆಗಡೆ 44ಕ್ಕೆ3, ರಿಷಿ ಬೋಪಣ್ಣ 32ಕ್ಕೆ1, ನಿಕಿನ್ ಜೋಸ್ 19ಕ್ಕೆ1) ಕರ್ನಾಟಕ: 33.4 ಓವರ್‌ಗಳಲ್ಲಿ 1 ವಿಕೆಟ್‌ಗೆ 227 (ಎಲ್‌.ಆರ್. ಚೇತನ್ ಅಜೇಯ 120, ನಿಕಿನ್ ಜೋಸ್ ಅಜೇಯ 101) ಫಲಿತಾಂಶ: ಕರ್ನಾಟಕ ತಂಡಕ್ಕೆ 9 ವಿಕೆಟ್‌ಗಳ ಜಯ. ಸರಣಿಯಲ್ಲಿ 2–1ರಿಂದ ಮುನ್ನಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT