ಶನಿವಾರ, ಜನವರಿ 28, 2023
20 °C

ರಣಜಿ ಟ್ರೋಫಿ ಕ್ರಿಕೆಟ್: ‌ಕರ್ನಾಟಕ ತಂಡಕ್ಕೆ 122 ರನ್‌ ಗೆಲುವಿನ ಗುರಿ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯತ್ತಿರುವ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ  ಆತಿಥೇಯ ಕರ್ನಾಟಕ ತಂಡವು ಜಯಗಳಿಸಲು 122 ರನ್‌ಗಳ ಗುರಿಯನ್ನು ಛತ್ತೀಸಗಢ ತಂಡವು ನೀಡಿದೆ.

ಪಂದ್ಯದ ಕೊನೆಯ ದಿನವಾದ ಶುಕ್ರವಾರ ಛತ್ತೀಸಗಢ ತಂಡವು ಎರಡನೇ ಇನಿಂಗ್ಸ್‌ನಲ್ಲಿ 77.5 ಓವರ್‌ಗಳಲ್ಲಿ 177 ರನ್ ಗಳಿಸಿತು. ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 55 ರನ್‌ಗಳ ಅಲ್ಪಮುನ್ನಡೆ ಸಾಧಿಸಿತ್ತು. ಮೂರನೇ ದಿನದಾಟದ ಕೊನೆಗೆ ಛತ್ತೀಸಗಢ ತಂಡವು ಎರಡು ವಿಕೆಟ್‌ಗಳಿಗೆ 35 ರನ್‌ ಗಳಿಸಿತ್ತು.

ಆದರೆ ಶುಕ್ರವಾರ ಕರ್ನಾಟಕದ ಮಧ್ಯಮವೇಗಿ ವೈಶಾಖ ವಿಜಯಕುಮಾರ್ (59ಕ್ಕೆ5) ಉತ್ತಮ ಬೌಲಿಂಗ್ ಮಾಡಿ ಛತ್ತೀಸಗಢ ತಂಡದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು.

ಪ್ರವಾಸಿ ತಂಡದ ಅಮನದೀಪ್ ಖರೆ (50; 111ಎ) ಮತ್ತು ಮಯಂಕ್ ವರ್ಮಾ (46; 128ಎ) ಅವರು ಇನಿಂಗ್ಸ್‌ ಬೆಳೆಸಲು ಪ್ರಯತ್ನಿಸಿದರು. ಆದರೆ, ಚಹಾ ವಿರಾಮಕ್ಕೆ ಇನ್ನೂ ಕೆಲವು ನಿಮಿಷಗಳು ಬಾಕಿಯಿರುವಾಗಲೇ ಛತ್ತೀಸಗಢ ಆಲೌಟ್ ಆಯಿತು.

ಕರ್ನಾಟಕದ ಆಫ್‌ಸ್ಪಿನ್ನರ್ ಕೆ. ಗೌತಮ್ ಎರಡು, ಶ್ರೇಯಸ್ ಗೋಪಾಲ್, ವಿದ್ವತ್ ಕಾವೇರಪ್ಪ ಹಾಗೂ ವಿ. ಕೌಶಿಕ್ ತಲಾ ಒಂದು ವಿಕೆಟ್ ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು