ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌: ಕರ್ನಾಟಕಕ್ಕೆ ಜಯ

Published 10 ಡಿಸೆಂಬರ್ 2023, 15:56 IST
Last Updated 10 ಡಿಸೆಂಬರ್ 2023, 15:56 IST
ಅಕ್ಷರ ಗಾತ್ರ

ಬೆಂಗಳೂರು: ಬೌಲರ್‌ಗಳ ಪರಿಣಾಮಕಾರಿ ದಾಳಿಯ ನೆರವಿನಿಂದ ಕರ್ನಾಟಕ ತಂಡವು ರಾಯಪುರದಲ್ಲಿ ನಡೆಯುತ್ತಿರುವ 23 ವರ್ಷದೊಳಗಿನ ಮಹಿಳೆಯರ ಟಿ20 ಕ್ರಿಕೆಟ್‌ ಟ್ರೋಫಿಯಲ್ಲಿ 7 ವಿಕೆಟ್‌ಗಳಿಂದ ಪಾಂಡಿಚೇರಿ ತಂಡವನ್ನು ಮಣಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಪಾಂಡಿಚೇರಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 77 ರನ್‌ ಗಳಿಸಿತು. ಆರಂಭಿಕ ಆಟಗಾರ್ತಿಯರಾದ ನಾಯಕಿ ಯುವಶ್ರೀ (29; 26ಎ) ಮತ್ತು ಈ.ಕವಿಶಾ (23; 28ಎ) ಅವರನ್ನು ಹೊರತುಪಡಿಸಿ ಉಳಿದವರು ಒಂದಂಕಿ ದಾಟಲಿಲ್ಲ. ಕರ್ನಾಟಕದ ಪರ ಎಂ. ಪೂಜಾ ಕುಮಾರಿ 15 ರನ್‌ಗೆ 3 ವಿಕೆಟ್‌ ಪಡೆದು ಮಿಂಚಿದರು. ಅದಿತಿ ರಾಜೇಶ್‌, ಕೆ. ಚಂದಾಸಿ, ಅನನ್ಯಾ ಹೆಗಡೆ ತಲಾ ಒಂದು ವಿಕೆಟ್‌ ಪಡೆದರು.

ಸಾಧಾರಣ ರನ್ ಬೆನ್ನಟ್ಟಿದ ಕರ್ನಾಟಕ ತಂಡ 13.3 ಓವರ್‌ಗಳಲ್ಲಿ 3 ವಿಕೆಟ್‌ಗೆ 80 ರನ್‌ ಗಳಿಸಿತು. ಆರಂಭಿಕ ಆಟಗಾರ್ತಿಯರಾದ ನಾಯಕಿ ವೃಂದಾ ದಿನೇಶ್‌ (12, 10ಎ), ನಿಖಿ ಪ್ರಸಾದ್‌ (15;11ಎ) ಬೇಗನೆ ವಿಕೆಟ್‌ ಒಪ್ಪಿಸಿದರು. ನಂತರ ಬಂದ ಜಿ.ಆರ್‌. ಪ್ರೇರಣಾ (10;22ಎ) ಹೆಚ್ಚು ಹೊತ್ತು ನಿಲ್ಲಲಿಲ್ಲ. ಬಳಿಕ ರೋಶನಿ ಕಿರಣ್ (ಔಟಾಗದೆ 21;27ಎ) ಮತ್ತು ಶಿಶಿರಾ ಎ ಗೌಡ (ಔಟಾಗದೆ 16;12ಎ) ಅವರು ಗೆಲುವಿನ ಗುರಿ ದಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT