ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಪಂಜಾಬ್‌ಗೆ ಮಣಿದ ಕರ್ನಾಟಕ

ಬಿಸಿಸಿಐ 23 ವರ್ಷದೊಳಗಿನವರ ಮಹಿಳಾ ಕ್ರಿಕೆಟ್‌
Last Updated 13 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತ್ಯೂಷಾ ಕುಮಾರ್‌ ಅರ್ಧಶತಕ ವ್ಯರ್ಥವಾಯಿತು. ಕರ್ನಾಟಕ ಮಹಿಳಾ ತಂಡವು 23 ವರ್ಷದೊಳಗಿನವರ ಬಿಸಿಸಿಐ ಟ್ವೆಂಟಿ–20 ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಪಂಜಾಬ್‌ ತಂಡಕ್ಕೆ ಏಳು ರನ್‌ಗಳಿಂದ ಮಣಿಯಿತು.

ಆಲೂರಿನ ಮೈದಾನದಲ್ಲಿ ನಡೆದ ಹಣಾಹಣಿಯಲ್ಲಿ ಮೊದಲು ಬ್ಯಾಟ್‌ ಮಾಡಿದ ಪ್ರವಾಸಿ ತಂಡ 20 ಓವರುಗಳಲ್ಲಿ 5 ವಿಕೆಟ್‌ ಕಳೆದುಕೊಂಡು 129 ರನ್‌ ಗಳಿಸಿತು.ಅಮರಪಾಲ್‌ ಕೌರ್ (ಔಟಾಗದೆ 41) ಹಾಗೂ ರಿಧಿಮಾ ಅಗರವಾಲ್‌ (29) ಬ್ಯಾಟಿಂಗ್‌ನಲ್ಲಿ ಮಿಂಚಿದರು. ಕರ್ನಾಟಕದ ಸಹನಾ ಪವಾರ್‌ ಎರಡು ವಿಕೆಟ್‌ಗಳನ್ನು ಕಿತ್ತರು.

ಉತ್ತರವಾಗಿ ಬ್ಯಾಟ್‌ ಮಾಡಿದ ಆತಿಥೇಯ ತಂಡದ ಆಟಗಾರ್ತಿಯರು 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 122 ರನ್‌ ಗಳಿಸಲಷ್ಟೇ ಶಕ್ತವಾದರು.

ಪ್ರತ್ಯೂಷಾ (55) ಹಾಗೂ ಅದಿತಿ ರಾಜೇಶ್‌ (34) ಉತ್ತಮ ಆಟವಾಡಿದರು.

ಸಂಕ್ಷಿಪ್ತ ಸ್ಕೋರು: ಪಂಜಾಬ್‌: 20 ಓವರುಗಳಲ್ಲಿ 5 ವಿಕೆಟ್‌ಗೆ 129 (ರಿಧಿಮಾ ಅಗರವಾಲ್‌ 29, ಅಮರಪಾಲ್‌ ಕೌರ್‌ ಔಟಾಗದೆ 41, ಕನಿಕಾ ಎಸ್‌. ಅಹುಜಾ 21; ಸಹನಾ ಪವಾರ್‌ 17ಕ್ಕೆ 2).

ಕರ್ನಾಟಕ: 20 ಓವರುಗಳಲ್ಲಿ 6 ವಿಕೆಟ್‌ಗೆ 122 (ಪ್ರತ್ಯೂಷಾ ಕುಮಾರ್‌ 55, ಅದಿತಿ ರಾಜೇಶ್‌ 34; ಮನ್‌ಪ್ರೀತ್‌ ಕೌರ್‌ 13ಕ್ಕೆ 2). ಫಲಿತಾಂಶ: ಪಂಜಾಬ್‌ಗೆ 7 ರನ್‌ಗಳ ಜಯ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT