‘ಕೇದಾರ್‌ ಶೀಘ್ರವೇ ಲಯ ಕಂಡುಕೊಳ್ಳುವರು’

ಭಾನುವಾರ, ಮೇ 26, 2019
26 °C

‘ಕೇದಾರ್‌ ಶೀಘ್ರವೇ ಲಯ ಕಂಡುಕೊಳ್ಳುವರು’

Published:
Updated:
Prajavani

ಮುಂಬೈ (ಪಿಟಿಐ): ‘ಕೇದಾರ್‌ ಜಾಧವ್‌ ಅವರು ಈ ಬಾರಿಯ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಿಲ್ಲ. ಮುಂದಿನ ಪಂದ್ಯಗಳಲ್ಲಿ ಅವರು ಖಂಡಿತವಾಗಿಯೂ ಲಯ ಕಂಡುಕೊಳ್ಳಲಿದ್ದಾರೆ’ ಎಂದು ಮಹಾರಾಷ್ಟ್ರ ರಣಜಿ ತಂಡದ ಮುಖ್ಯ ಕೋಚ್‌ ಸುರೇಂದ್ರ ಭಾವೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿರುವ ಕೇದಾರ್‌, ಈಗ ಆಟದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಖಂಡಿತವಾಗಿಯೂ ನೈಜ ಸಾಮರ್ಥ್ಯ ತೋರಲಿದ್ದಾರೆ. ಈ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಭಾವೆ ತಿಳಿಸಿದ್ದಾರೆ.

34 ವರ್ಷದ ಕೇದಾರ್‌, ಈ ಸಲದ ಲೀಗ್‌ನಲ್ಲಿ ಒಂಬತ್ತು ಪಂದ್ಯಗಳನ್ನು ಆಡಿದ್ದು 136ರನ್‌ ಗಳಿಸಿದ್ದಾರೆ.

‘ಪ್ರತಿ ಪಂದ್ಯದಲ್ಲೂ ತಂಡಕ್ಕೆ ಗೆಲುವು ತಂದುಕೊಡಬೇಕೆಂಬ ಹಂಬಲದೊಂದಿಗೆ ಕೇದಾರ್‌ ಕಣಕ್ಕಿಳಿಯುತ್ತಾರೆ. ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಶ್ರೇಷ್ಠ ಸಾಮರ್ಥ್ಯ ತೋರುತ್ತಾರೆ. ಫಿಟ್‌ನೆಸ್‌ ಕಾಪಾಡಿಕೊಳ್ಳುವತ್ತಲೂ ಹೆಚ್ಚು ಗಮನ ಹರಿಸುತ್ತಾರೆ’ ಎಂದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !