ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತ ರಾಜಸ್ಥಾನ ರಾಯಲ್ಸ್‌; ಚಿಗುರಿದ ಕೋಲ್ಕತ್ತದ ಆಸೆ

Last Updated 1 ನವೆಂಬರ್ 2020, 19:22 IST
ಅಕ್ಷರ ಗಾತ್ರ

ದುಬೈ: ಪ್ಲೇ ಆಫ್ ಹಂತಕ್ಕೇರಲು ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ನೀರಸ ಆಟವಾಡಿತು. ರಾಯಲ್ಸ್‌ ವಿರುದ್ಧ 60 ರನ್‌ಗಳ ಜಯ ಗಳಿಸಿದ ಕೋಲ್ಕತ್ತ ನೈಟ್ ರೈಡರ್ಸ್ ನಾಲ್ಕರ ಘಟ್ಟದ ಕನಸು ಜೀವಂತವಾಗಿರಿಸಿಕೊಂಡಿತು.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ 192 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ರಾಜಸ್ಥಾನಕ್ಕೆ ಒಂಬತ್ತು ವಿಕೆಟ್ ಕಳೆದುಕೊಂಡು 131 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಜೋಸ್ ಬಟ್ಲರ್, ರಾಹುಲ್ ತೇವಾಟಿಯಾ ಮತ್ತು ಶ್ರೇಯಸ್ ಗೋಪಾಲ್ ಹೊರತುಪಡಿಸಿ ಉಳಿದ ಯಾರಿಗೂ ಕೋಲ್ಕತ್ತ ಬೌಲರ್‌ಗಳ ದಾಳಿಯನ್ನು ಮೆಟ್ಟಿನಿಲ್ಲಲು ಆಗಲಿಲ್ಲ.

ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.ನಾಯಕ ಏಯಾನ್ ಮಾರ್ಗನ್ (ಔಟಾಗದೆ 68; 35 ಎಸೆತ, 5 ಬೌಂಡರಿ, 6 ಸಿಕ್ಸರ್) ಆಟದ ಬಲದಿಂದ ಕೋಲ್ಕತ್ತ ಸವಾಲಿನ ಮೊತ್ತ ಗಳಿಸಿತು. ವೇಗಿ ಜೋಫ್ರಾ ಆರ್ಚರ್ ಇನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ನಿತೀಶ್ ರಾಣಾ ವಿಕೆಟ್ ಕಬಳಿಸಿದರು. ಶುಭಮನ್ ಗಿಲ್ (39; 24ಎ, 6 ಬೌಂ) ಜೊತೆ ಸೇರಿದ ರಾಹುಲ್ ತ್ರಿಪಾಠಿ (39; 34 ಎ, 4 ಬೌಂ, 2 ಸಿ) ಎರಡನೇ ವಿಕೆಟ್‌ಗೆ 72 ರನ್‌ ಸೇರಿಸಿದರು. ಶುಭಮನ್ ವಿಕೆ್ಟ್ ಗಳಿಸಿರಾಹುಲ್ ತೇವಾಟಿಯಾ ಈ ಜೊತೆಯಾಟ ಮುರಿದರು. ಸುನೀಲ್ ನಾರಾಯಣ್ ಕೂಡ ಬೇಗನೇ ಔಟಾದರು. ನಂತರ ಮಾರ್ಗನ್ ಬೌಲರ್‌ಗಳ ಬೆವರಿಳಿಸಿದರು. ಆ್ಯಂಡ್ರೆ ರಸೆಲ್ ಮತ್ತು ಪ್ಯಾಟ್ ಕಮಿನ್ಸ್‌ ಕೂಡ ಉಪಯುಕ್ತ ಬ್ಯಾಟಿಂಗ್ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಕೋಲ್ಕತ್ತ ನೈಟ್ ರೈಡರ್ಸ್‌: 20 ಓವರ್‌ಗಳಲ್ಲಿ 7ಕ್ಕೆ 191 (ಶುಭಮನ್‌ ಗಿಲ್‌ 36, ರಾಹುಲ್‌ ತ್ರಿಪಾಠಿ 39, ಏಯಾನ್ ಮಾರ್ಗನ್ ಔಟಾಗದೆ 68, ಆ್ಯಂಡ್ರೆ ರಸೆಲ್ 25, ಪ್ಯಾಟ್ ಕಮಿನ್ಸ್ 15; ಜೋಫ್ರಾ ಆರ್ಚರ್‌ 19ಕ್ಕೆ 1, ಕಾರ್ತಿಕ್‌ ತ್ಯಾಗಿ 36ಕ್ಕೆ 2, ಶ್ರೇಯಸ್‌ ಗೋಪಾಲ್‌ 44ಕ್ಕೆ1); ರಾಜಸ್ಥಾನ ರಾಯಲ್ಸ್: 20 ಓವರ್‌ಗಳಲ್ಲಿ 9ಕ್ಕೆ 131 (ಬೆನ್ ಸ್ಟೋಕ್ಸ್ 18, ಜೋಸ್ ಬಟ್ಲರ್ 35, ರಾಹುಲ್ ತೇವಾಟಿಯಾ 31, ಶ್ರೇಯಸ್ ಗೋಪಾಲ್ ಔಟಾಗದೆ 23; ಪ್ಯಾಟ್ ಕಮಿನ್ಸ್ 34ಕ್ಕೆ4, ಶಿವಂ ಮಾವಿ 15ಕ್ಕೆ2, ವರುಣ್ ಆ್ಯರನ್ 20ಕ್ಕೆ2, ಕಮಲೇಶ್ ನಾಗರಕೋಟಿ 24ಕ್ಕೆ1). ಫಲಿತಾಂಶ: ಕೋಲ್ಕತ್ತ ನೈಟ್ ರೈಡರ್ಸ್‌ಗೆ 60 ರನ್‌ಗಳ ಜಯ; ಪಂದ್ಯಶ್ರೇಷ್ಠ: ಪ್ಯಾಟ್ ಕಮಿನ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT