ಕೋಲ್ಕತ್ತ: ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಶನಿವಾರ ನಡೆದ ಐಪಿಎಲ್ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಪರಿಣಾಮ ಉಭಯ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್, ಆರಂಭಿಕರಾದ ಪ್ರಭಸಿಮ್ರನ್ (83) ಹಾಗೂ ಪ್ರಿಯಾಂಶ್ ಆರ್ಯ (69) ಬಿರುಸಿನ ಅರ್ಧಶತಕಗಳ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 201 ರನ್ ಪೇರಿಸಿತು. ಬಳಿಕ ಸುರಿದ ಮಳೆಯಿಂದಾಗಿ ಪಂದ್ಯದಲ್ಲಿ ಫಲಿತಾಂಶ ಕಾಣದೇ ಕೈಬಿಡಲಾಯಿತು.

4ನೇ ಸ್ಥಾನದಲ್ಲಿ ಪಂಜಾಬ್...

ಇದರೊಂದಿಗೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಒಟ್ಟು 11 ಅಂಕಗಳನ್ನು ಸಂಪಾದಿಸಿರುವ ಪಂಜಾಬ್ ಕಿಂಗ್ಸ್, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಲ್ಲದೇ ಪ್ಲೇ-ಆಫ್ ರೇಸ್ನಲ್ಲಿದೆ. ಪಂಜಾಬ್ ಐದು ಗೆಲುವು, ಮೂರು ಸೋಲು ಹಾಗೂ ಒಂದು ಪಂದ್ಯದಲ್ಲಿ ಡ್ರಾ ಫಲಿತಾಂಶವನ್ನು ಕಂಡಿದೆ.

ಪಂಜಾಬ್ಗೆ ಹೋಲಿಸಿದರೆ ಈ ಪಂದ್ಯವು ಕೆಕೆಆರ್ ಪಾಲಿಗೆ ಹೆಚ್ಚು ಮಹತ್ವದೆನಿಸಿಕೊಂಡಿತು. ಈವರೆಗೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಮೂರು ಗೆಲುವುಗಳನ್ನು ಮಾತ್ರ ದಾಖಲಿಸಿರುವ ಕೆಕೆಆರ್, ಏಳು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಅಲ್ಲದೆ ಇನ್ನು ಉಳಿದಿರುವ ಐದು ಪಂದ್ಯಗಳು ನಿರ್ಣಾಯಕವೆನಿಸಿವೆ.

ಗುಜರಾತ್ ಟೈಟನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅನುಕ್ರಮವಾಗಿ ಅಗ್ರ ಮೂರು ಸ್ಥಾನಗಳನ್ನು ಹಂಚಿಕೊಂಡಿದೆ. ಈ ಎಲ್ಲ ತಂಡಗಳು ಸಮಾನ ಅಂಕಗಳನ್ನು ಹೊಂದಿದ್ದರೂ ಉತ್ತಮ ರನ್ರೇಟ್ ಆಧಾರದಲ್ಲಿ ಗುಜರಾತ್ ಅಗ್ರಸ್ಥಾನದಲ್ಲಿದೆ.

ಪ್ರಿಯಾಂಶ್ 27 ಎಸೆತಗಳಲ್ಲಿ ಅರ್ಧಶತಕ...

ಕೆಕೆಆರ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಪ್ರಿಯಾಂಶ್ ಕೇವಲ 27 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಐಪಿಎಲ್ನಲ್ಲಿ ಈಗಾಗಲೇ ಒಂದು ಶತಕ ಗಳಿಸಿರುವ ಪ್ರಿಯಾಂಶ್, ಫಿಫ್ಟಿ ಬಾರಿಸುವ ಮೂಲಕ ಮಗದೊಮ್ಮೆ ಮೋಡಿ ಮಾಡಿದ್ದಾರೆ. 35 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಎಂಟು ಬೌಂಡರಿಗಳ ನೆರವಿನಿಂದ 69 ರನ್ ಗಳಿಸಿದರು.

ಶತಕ ವಂಚಿತ ಪ್ರಭಸಿಮ್ರನ್...

ಮತ್ತೊಂದೆಡೆ ಅಮೋಘ ಇನಿಂಗ್ಸ್ ಕಟ್ಟಿದ ಪ್ರಭಸಿಮ್ರನ್ ಕೇವಲ 17 ರನ್ ಅಂತರದಿಂದ ಶತಕ ವಂಚಿತರಾದರು. 49 ಎಸೆತಗಳನ್ನು ಎದುರಿಸಿದ ಪ್ರಭಸಿಮ್ರನ್, ತಲಾ ಆರು ಸಿಕ್ಸರ್ ಹಾಗೂ ಬೌಂಡರಿಗಳಿಂದ 83 ರನ್ ಗಳಿಸಿದರು.

ಅಲ್ಲದೆ ಐಪಿಎಲ್ನಲ್ಲಿ 1000 ರನ್ಗಳ ಸಾಧನೆ ಮಾಡಿದ್ದಾರೆ.

ಶತಕದ ಜೊತೆಯಾಟ...

ಪ್ರಿಯಾಂಶ್ ಆರ್ಯ ಹಾಗೂ ಪ್ರಭಸಿಮ್ರನ್ ಮೊದಲ ವಿಕೆಟ್ಗೆ ಶತಕದ ಜೊತೆಯಾಟದಲ್ಲಿ ಭಾಗಿಯಾದರು. 11.5 ಓವರ್ಗಳಲ್ಲಿ 120 ರನ್ಗಳ ಜೊತೆಯಾಟ ಕಟ್ಟಿದರು.

ಇನ್ನುಳಿದಂತೆ ಶ್ರೇಯಸ್ ಅಯ್ಯರ್ 16 ಎಸೆತಗಳಲ್ಲಿ 25 ರನ್ ಗಳಿಸಿ ಔಟಾಗದೆ ಉಳಿದರು. ಇನ್ನೊಂದೆಡೆ ಪ್ರಸಕ್ತ ಸಾಲಿನ ಟೂರ್ನಿಯಲ್ಲೂ ಗ್ಲೆನ್ ಮ್ಯಾಕ್ಸ್ವೆಲ್ ವೈಫಲ್ಯ ಮುಂದುವರಿಯಿತು.

ಕೆಕೆಆರ್ ಪರ ವೈಭವ್ ಅರೋರಾ ಎರಡು ಹಾಗೂ ಆ್ಯಂಡ್ರೆ ರಸೆಲ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಗಳಿಸಿದರು.
.IPL 2025 | CSK vs PBKS: ಪಂಜಾಬ್ ಗೆಲುವಿನಲ್ಲಿ ಮಿಂಚಿದ ಪ್ರಿಯಾಂಶ್.IPL 2025 | DC vs RCB: ರಾಹುಲ್ – ವಿರಾಟ್ ಪೈಪೋಟಿಗೆ ‘ಡೆಲ್ಲಿ’ ಸಿದ್ಧ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.