ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚಾರ್ಯ ಶೀಲ್ಡ್‌ ಡಿವಿಷನ್ ಲೀಗ್ ಕ್ರಿಕೆಟ್ ಟೂರ್ನಿ: ಆದಿತ್ಯ ಮಣಿ ಆಲ್‌ರೌಂಡ್ ಆಟ

ಎಂ.ಎ.ಟಿ. ಆಚಾರ್ಯ ಶೀಲ್ಡ್‌ ಡಿವಿಷನ್ ಲೀಗ್ ಕ್ರಿಕೆಟ್ ಟೂರ್ನಿ
Published 6 ಜೂನ್ 2023, 16:20 IST
Last Updated 6 ಜೂನ್ 2023, 16:20 IST
ಅಕ್ಷರ ಗಾತ್ರ

ಬೆಂಗಳೂರು: ಶತಕ ಗಳಿಸಿದ ಆಲ್‌ರೌಂಡರ್ ಆದಿತ್ಯ ಮಣಿ ಆಟದ ಬಲದಿಂದ ಹೆರಾನ್ಸ್‌ ಕ್ರಿಕೆಟ್ ಕ್ಲಬ್ ತಂಡವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಎಂ.ಎ.ಟಿ. ಆಚಾರ್ಯ ಶೀಲ್ಡ್‌  ಡಿವಿಷನ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ದ ಬೆಂಗಳೂರು ಕ್ರಿಕೆಟರ್ಸ್ ವಿರುದ್ಧ ಇನಿಂಗ್ಸ್‌ ಮತ್ತು 8 ರನ್‌ಗಳಿಂದ ಗೆದ್ದಿತು.

ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದ ಬೆಂಗಳೂರು ಕ್ರಿಕೆಟರ್ಸ್‌ 180 ರನ್‌ ಗಳಿಸಿತು. ಅದಕ್ಕುತ್ತರವಾಗಿ ಹೆರಾನ್ಸ್‌ 275 ರನ್‌ ಗಳಿಸಿತು. ಆದಿತ್ಯ (ಅಜೇಯ 110; 108ಎ, 4X14, 6X4)  ಎರಡನೇ ಇನಿಂಗ್ಸ್‌ನಲ್ಲಿ ಬೆಂಗಳೂರು ತಂಡವು 19.4 ಓವರ್‌ಗಳಲ್ಲಿ 87 ರನ್‌ ಗಳಿಸಿ ಆಲೌಟ್ ಆಯಿತು. ಆದಿತ್ಯ ಮೊದಲ ಎರಡೂ ಇನಿಂಗ್ಸ್ ಸೇರಿ ಐದು ವಿಕೆಟ್ ಗಳಿಸಿದರು. ಹೆರಾನ್ಸ್‌ನ ಎಸ್‌.ಎಸ್. ಸುಮಂತ್  ಒಟ್ಟು ಹತ್ತು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್:ದ ಬೆಂಗಳೂರು ಕ್ರಿಕೆಟರ್ಸ್: 57.5 ಓವರ್‌ಗಳಲ್ಲಿ 180 (ರಾಹುಲ್ ಕುಲಕರ್ಣಿ 27, ವಿ.ಎನ್. ಸಂಜಯ್ 24, ಡಿ. ಭರತ್ 30, ಕೆ.ಬಿ. ಶ್ರೇಯಸ್ 33, ಆದಿತ್ಯ ಮಣಿ 36ಕ್ಕೆ2, ಎಸ್‌.ಎಸ್‌. ಸುಮಂತ್ 48ಕ್ಕೆ3, ನಿತಿನ್ ನಾಯ್ಡು 39ಕ್ಕೆ4)

ಹೆರಾನ್ಸ್ ಕ್ರಿಕೆಟ್ ಕ್ಲಬ್: 51.2 ಓವರ್‌ಗಳಲ್ಲಿ 275 (ಸುಹಾಸ್ ಅಡಿಗ 23, ಶಿವರತ್ನ 25, ಆದಿತ್ಯ ಮಣಿ ಔಟಾಗದೆ 110, ಆರ್. ಅಕ್ಷಯ್ 31ಕ್ಕೆ3, ಜೆ. ಮನೋಜಕುಮಾರ್ 73ಕ್ಕೆ5)

ಎರಡನೇ ಇನಿಂಗ್ಸ್: ದ ಬೆಂಗಳೂರು ಕ್ರಿಕೆಟರ್ಸ್: 19.4 ಓವರ್‌ಗಳಲ್ಲಿ 87 (ಪವನ್ ಕುಮಾರ್ 22, ಕೆ.ಬಿ. ಶ್ರೇಯಸ್ 35, ಆದಿತ್ಯ ಮಣಿ 48ಕ್ಕೆ3, ಎಸ್‌.ಎಸ್‌. ಸುಮಂತ್ 34ಕ್ಕೆ7) ಫಲಿತಾಂಶ: ಹೆರಾನ್ಸ್‌ ಕ್ಲಬ್‌ಗೆ 8 ರನ್‌ಗಳ ಜಯ ಹಾಗೂ ಐದು ಅಂಕ. ಬೆಂಗಳೂರು ಕ್ರಿಕೆಟರ್ಸ್‌ಗೆ 1 ಅಂಕ.

ಮೊದಲ ಇನಿಂಗ್ಸ್: ಜವಾಹರ್ ಸ್ಪೋರ್ಟ್ಸ್‌ ಕ್ಲಬ್(2): 59.4 ಓವರ್‌ಗಳಲ್ಲಿ 256 (ಆಯುಷ್ಮಾನ್ 23, ರೋಹಿತ್ ಸುಂದರ್ 103, ಎಸ್‌.ಬಿ. ಸಂಕೇತ್ 65, ಮಿತ್ರಕಾಂತ್ ಸಿಂಗ್ ಯಾದವ್ 60ಕ್ಕೆ5, ಮೊಹಮ್ಮದ್ ಸಾದೀಕ್ 37ಕ್ಕೆ3).

ಸೆಂಚುರಿ ಕ್ರಿಕೆಟರ್ಸ್: 43 ಓವರ್‌ಗಳಲ್ಲಿ 132 (ಬಿ. ಧೀಮಂತ 27, ಆಶಿಶ್ ಧಾರ್ 24, ಶಿಮೊನ್ ಲ್ಯೂಜ್ 44ಕ್ಕೆ5, ಎನ್‌.ಎಸ್. ಸಚಿನ್ 40ಕ್ಕೆ2)

ಎರಡನೇ ಇನಿಂಗ್ಸ್: ಜವಾಹರ್ಸ್: 10.5 ಓವರ್‌ಗಳಲ್ಲಿ 5ಕ್ಕೆ79 (ಮೊಹಮ್ಮದ್ ಸಾದಿಕ್ 46ಕ್ಕೆ3), ಸೆಂಚುರಿ ಕ್ರಿಕೆಟರ್ಸ್: 62.3 ಓವರ್‌ಗಳಲ್ಲಿ 202 (ಭುವನ್ ಎಂ ರಾಜು 63, ಬಿ. ಧೀಮಂತ್ 80, ದಾನೀಶ್ ಅಲ್ತಾಫ್ 20, ಶಿಮೊನ್ ಲ್ಯೂಜ್ 54ಕ್ಕೆ2, ಎಸ್‌.ಬಿ. ಸಂಕೇತ್ 79ಕ್ಕೆ3, ರೋಹಿತ್ ಸುಂದರ್ 24ಕ್ಕೆ3, ರಕ್ಷಿತ್ 14ಕ್ಕೆ2)

ಜವಾಹರ್ಸ್‌ಗೆ ಜಯ ಹಾಗೂ ಐದು ಅಂಕ. ಸೆಂಚುರಿಗೆ ಒಂದು ಅಂಕ.

ಚಿಂತಾಮಣಿ ಸ್ಪೋರ್ಟ್ಸ್ ಅಸೋಸಿಯೇಷನ್: 65.2 ಓವರ್‌ಗಳಲ್ಲಿ 213 (ವೃಷಿನ್ ಅರಿಂಜಯ್ 37, ಮೀರ್ ಕುನೈನ್ ಅಬ್ಬಾಸ್ 85, ನೇಥನ್ ಡಿಮೆಲೊ 52, ಲವಿಷ್ ಕೌಶಲ್ 17ಕ್ಕೆ3, ಎನ್‌. ಸಮರ್ಥ್ 55ಕ್ಕೆ3, ಸುಮಿತ್ ದ್ರಾವಿಡ್ 29ಕ್ಕೆ2, ಮಲಿಕ್‌ಸಾಬ್ ಜಿ ಶಿರೂರ್ 48ಕ್ಕೆ2)

ವಿಜಯಾ ಸಿಸಿ: 60 ಓವರ್‌ಗಳಲ್ಲಿ 8ಕ್ಕೆ331 ಡಿಕ್ಲೇರ್ಡ್ (ಎ. ಯುವರಾಜ್ 28, ಸ್ವಪ್ನಿಲ್ ಯಳವೆ 158, ನಿಶ್ಚಲ್ ದಾಸ್ 41, ಸಚಿನ್ ಶಿಂಧೆ 26, ಲವಿಷ್ ಕೌಶಲ್ 26, ಬ್ರಿಜೇಶ್ ಗೌಡ 77ಕ್ಕೆ4, ನೇಥನ್ ಡಿಮೆಲೊ 85ಕ್ಕೆ3)

ಚಿಂತಾಮಣಿ ಸ್ಪೋರ್ಟ್ಸ್ ಅಸೋಸಿಯೇಷನ್: 26.3 ಓವರ್‌ಗಳಲ್ಲಿ 157 (ಸಚಿನ್ ಆರ್ ಗಣಕಲ್ 30, ಆದರ್ಶ್ ವಿ ಹಿರೇಮಠ 21, ಎನ್. ಸಮರ್ಥ್ 21ಕ್ಕೆ2, ಸಚಿನ್ ಶಿಂಧೆ 17ಕ್ಕೆ5, ಸಮಿತ್ ದ್ರಾವಿಡ್ 8ಕ್ಕೆ2)

ವಿಜಯ ಸಿಸಿಗೆ ಜಯ ಮತ್ತು ಐದು ಪಾಯಿಂಟ್

ಮಾಡರ್ನ್ ಸಿಸಿ: 75.5 ಓವರ್‌ಗಳಲ್ಲಿ 246 (ಪ್ರತೀಕ್ 27, ಎಂ.ಆರ್. ಜಯಂತ್ 22, ಲಕ್ಷಣ್ 26, ಪ್ರೇಮನಾಥ್ ಜಗೊಡೆ 69, ಆರ್ಯನ್ ಸಂತೋಷ್ 30, ಎಸ್‌.ಎ. ಸಚಿನ್ 27, ಅಬ್ರಾರ್ ಖಾಜಿ 67ಕ್ಕೆ4, ತೇಜಸ್ ಅಂಗಡಿ 49ಕ್ಕೆ4) ವಿಲ್ಸನ್ ಗಾರ್ಡನ್ ಸಿಸಿ: 74.4 ಓವರ್‌ಗಳಲ್ಲಿ 225 (ರಘುವೀರ್ ರಾಜಪುರೋಹಿತ್ 117, ಅಬ್ರಾರ್ ಖಾಜಿ 23, ಪ್ರಾಣೇಶ್ ದೇಸಾಯಿ 75ಕ್ಕೆ4, ಪ್ರಣವ್ ಅಶ್ವಥ್ 58ಕ್ಕೆ3)

ಪಂದ್ಯ ಡ್ರಾ: ಮಾಡರ್ನ್‌ ಸಿಸಿಗೆ ಮೂರು ಹಾಗೂ ವಿಲ್ಸನ್‌ ಗಾರ್ಡನ್‌ಗೆ ಒಂದು ಅಂಕ.

ಜವಾಹರ್ ಸ್ಪೋರ್ಟ್ಸ್ ಕ್ಲಬ್ (1): 90 ಓವರ್‌ಗಳಲ್ಲಿ 9ಕ್ಕೆ347 (ಜಯೇಶ್ ಬಾಬು 84, ಸೌರಭ್ ಮುತ್ತೂರ್ 103, ವೇದಾಂತ್ ಅಯ್ಯರ್ 57, ಕೆ.ಎಂ. ಪ್ರವೇಶ್ 31, ಅಮೇಯ್ ಶಾನಭಾಗ್ 20, ಅರವಿಂದ್ ಕುಮಾರ್ 54ಕ್ಕೆ3, ಗೌರವ್ 43ಕ್ಕೆ2, ಅಮೋಘ 129ಕ್ಕೆ4), ಜವಾನ್ಸ್‌ ಸಿಸಿ: 90 ಓವರ್‌ಗಳಲ್ಲಿ 9ಕ್ಕೆ 481 (ಎಸ್‌.ಎಯು. ಕಾರ್ತಿಕ್ 145, ಹರ್ಷಿಲ್ 64, ಯು. ಕರಣ್ 34, ಸಿ.ಎಂ. ಗೌತಮ್ 66, ಅಯ್ಯಪ್ಪ ಔಟಾಗದೆ 77, ಆರ್ ಶ್ರೀವತ್ಸ್ ಆಚಾರ್ಯ 88ಕ್ಕೆ2, ನಿಶಾಂತ್ 62ಕ್ಕೆ2, ಸೌರಭ್ ಮುತ್ತೂರ್ (78ಕ್ಕೆ2)

ಪಂದ್ಯ ಡ್ರಾ. ಜವಾನ್ಸ್‌ಗೆ 3 ಹಾಗೂ ಜಾವಹರ್‌ಗೆ 1 ಅಂಕ

ವಿಶ್ವೇಶ್ವರಪುರಂ ಸಿಸಿ (1): 53.5 ಓವರ್‌ಗಳಲ್ಲಿ 183 (ದಿವಾಕರ್ ಶಂಕರ್ 45, ಎ. ಸಿದ್ಧಾರ್ಥ್ 24, ಕೆ. ಅರುಣ್ 26, ಅನುಪಮ್ 33, ಶೀತಲ್ ಕುಮಾರ್ 71ಕ್ಕೆ6, ಎಸ್‌. ಚಿರಂತ್ 54ಕ್ಕೆ3). ಜುಪಿಟರ್ ಕ್ರಿಕೆಟರ್ಸ್‌: 74 ಓವರ್‌ಗಳಲ್ಲಿ 9ಕ್ಕೆ 301 (ಹರ್ಷಿತ್ ಪೂಜಾರಿ 84, ಪ್ರಜ್ವಲ್ ಪ್ರಕಾಶ್ 56, ಡೆಸ್ಮಂಡ್ ಅಂಥೋನಿ 43, ರಾಹುಲ್ ವೆರ್ಣೆಕರ್ 24, ಮಾಷೂಕ್ ಹುಸೇನ್ 43, ಕೆ. ಗಗನದೀಪ್ 20, ಸಿನಾನ್ ಅಬ್ದುಲ್ ಖಾದರ್ 102ಕ್ಕೆ7)

ಪಂದ್ಯ ಡ್ರಾ. ಜುಪಿಟರ್ಸ್‌ಗೆ 3 ಹಾಗೂ ವಿಶ್ವೇಶ್ವರಪುರಂ 1 ಅಂಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT